Ad Widget .

ಇದು ತಪ್ಪು ಎಂದಿದ್ದೇ ಜೀವಕ್ಕೆ ತಂದಿತು ಆಪತ್ತು! ಗಂಡ-ಹೆಂಡತಿ ಜಗಳದಲ್ಲಿ ಪಕ್ಕದ ಮನೆ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ತನ್ನ ಪತ್ನಿಯ ಜತೆ ಕೌಟುಂಬಿಕ ಕಲಹದಲ್ಲಿ ತೊಡಗಿದ್ದ ಪತಿಗೆ ಹೀಗೆಲ್ಲಾ ಮಾಡಬೇಡ, ಆಕೆ ಹೆಣ್ಣು ಜೀವ ಎಂದು ಬುದ್ದಿ ಮಾತನ್ನು ಹೇಳಿದ ಪಕ್ಕದ ಮನೆಯ ರಾನ್ ಸಿಂಗ್ ಎಂಬ ವ್ಯಕ್ತಿಯನ್ನು ರಾಡ್‌ನಿಂದ ಹತ್ಯೆಗೈದ ಘಟನೆ ಉತ್ತರ ದೆಹಲಿಯಲ್ಲಿ ವರದಿಯಾಗಿದೆ.

Ad Widget . Ad Widget . Ad Widget . Ad Widget .

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಧೀರಜ್ ತನ್ನ ಹೆಂಡತಿಯನ್ನು ನಿಂದಿಸಿ, ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರೋಪಿ ತನ್ನ ಪತ್ನಿಯನ್ನು ದೈಹಿಕವಾಗಿ ಹಲ್ಲೆ ಮಾಡುವುದಲ್ಲದೆ, ವಿಪರೀತ ಅವಾಚ್ಯ ಪದಗಳಿಂದ ಮನಬಂದಂತೆ ನಿಂದಿಸಿದ್ದಾನೆ. ಇಬ್ಬರ ಜಗಳದಿಂದ ಭಾರೀ ಕಿರಿಕಿರಿ ಅನುಭವಿಸಿದ ರಾನ್ ಎಂಬುವವರು, ಧೀರಜ್ ಪಕ್ಕದ ಮನೆಯಲ್ಲಿಯೇ ವಾಸವಿದ್ದರು. ಹೀಗಾಗಿ ತಡರಾತ್ರಿ ತೊಂದರೆ ಅನುಭವಿಸಿದ್ದಾರೆ.

Ad Widget . Ad Widget .

ಇಬ್ಬರ ಜಗಳ ನಿಲ್ಲಿಸಬೇಕು ಎಂದು ಮುಂದಾದ ರಾನ್, ಪತಿ-ಪತ್ನಿಯ ಜಗಳದಲ್ಲಿ ಮಧ್ಯೆ ಪ್ರವೇಶಿಸಿ, ಬುದ್ದಿ ಮಾತುಗಳನ್ನು ಹೇಳಿದ್ದಾರೆ. ಇದಕ್ಕೆ ಸಿಡಿದೆದ್ದ ಆರೋಪಿ, ಅಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ರಾನ್ ತಲೆಗೆ ಹೊಡೆದಿದ್ದಾನೆ.ತಲೆಗೆ ಬಲವಾದ ಪೆಟ್ಟು ಬಿದ್ದ ಬೆನ್ನಲ್ಲೇ ಅವರು ನೆಲಕ್ಕೆ ಕುಸಿದು ಬಿದ್ದಿದ್ದಾರೆ. ತಲೆಯಿಂದ ತೀವ್ರ ರಕ್ತಸ್ರಾವವಾದ ಹಿನ್ನಲೆ ರಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಸಾವಿಗೀಡಾಗಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *