ಶಕ್ತಿ ಯೋಜನೆ ಪುರುಷರಿಗೂ ವಿಸ್ತರಣೆ!? ಸುಳಿವು ನೀಡಿದ ಡಿಸಿಎಂ

ಸಮಗ್ರ ನ್ಯೂಸ್: ಮಹಿಳೆಯರಿಗೆ ನೀಡಲಾಗುತ್ತಿರುವ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ ಇನ್ನು ಮುಂದೆ ಗಂಡಸರಿಗೂ ವಿಸ್ತರಣೆಯಾಗಲಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಕ್ಕಳ ಜೊತೆಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾಗ ಬಾಲಕನೊಬ್ಬ ನಮಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದಾನೆ.

Ad Widget ... ..

ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಯೋಚನೆ ಮಾಡುವುದಾಗಿ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಮಾಡಿದೆ. ಇದರಿಂದ ಹಲವು ಮಹಿಳೆಯರಿಗೆ ಪ್ರಯೋಜನವಾಗುತ್ತಿದೆ. ಹೀಗಾಗಿ ಪುರುಷರು ನಮಗೂ ಈ ಯೋಜನೆ ವಿಸ್ತರಿಸಿ ಎಂದು ಬೇಡಿಕೆಯಿಡುತ್ತಲೇ ಇದ್ದರು.

Ad Widget

ಆದರೆ ಎಲ್ಲಾ ಪುರುಷರಿಗೂ ಈ ಯೋಜನೆ ಸಿಗಲಾರದು. ಒಂದು ನಿರ್ದಿಷ್ಟ ವಯೋಮಿತಿಯ ಹುಡುಗರಿಗೆ ಮಾತ್ರ ಯೋಜನೆ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬಹುದು. ಹೀಗಾಗಿ ಸದ್ಯದಲ್ಲೇ ಹುಡುಗರಿಗೂ ಉಚಿತ ಬಸ್ ಸೌಲಭ್ಯ ಸಿಗುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *