ಸಮಗ್ರ ನ್ಯೂಸ್: ಚಿನ್ನದ ಬೆಲೆ ಮತ್ತೆ ಮತ್ತೆ ಕುಸಿದು ಬೀಳುತ್ತಿದೆ, ಅದರಲ್ಲೂ ಕಳೆದ ಕೆಲವು ದಿನಗಳಿಂದ ಕೂಡ ನಿರಂತರವಾಗಿ ಚಿನ್ನದ ಬೆಲೆ & ಬೆಳ್ಳಿ ಬೆಲೆ ಕಡಿಮೆ ಆಗುತ್ತಿದೆ. ಈ ರೀತಿ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುತ್ತಿರುವುದು ಮದುವೆ ಸೀಸನ್‌ಗೆ ಮೊದಲು ಖುಷಿ ನೀಡುತ್ತಿದೆ. ಯಾಕಂದ್ರೆ ಈಗ ಮದುವೆಗಳಿಗೆ ಅಂತಾನೆ ಮೊದಲೇ ಚಿನ್ನಕ್ಕೆ ಆರ್ಡರ್ ನೀಡಲು ಜನರು ಕಾಯುತ್ತಿದ್ದರು. ಈ ಸಮಯದಲ್ಲೇ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಅದರಲ್ಲೂ ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಕುಸಿತ ಕಂಡಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಇದೀಗ ಭಾರಿ ಇಳಿಕೆ ಕಂಡಿದ್ದು, 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಬರೋಬ್ಬರಿ 12,000 ರೂಪಾಯಿ ಕುಸಿತ ಕಂಡಿದೆ. ಹೀಗಾಗಿ ಆಭರಣ ಪ್ರಿಯರಿಗೆ ಈ ಸುದ್ದಿಯು ಭಾರಿ ಖುಷಿ ನೀಡಿದೆ. ಹೀಗೆ 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಕುಸಿತ ಕಂಡ ನಂತರ ಪ್ರತಿ 100 ಗ್ರಾಂಗೆ 7,56,500 ರೂಪಾಯಿ ಇದ್ದರೆ, 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಕುಸಿತದ ನಂತರ ಪ್ರತಿ 10 ಗ್ರಾಂಗೆ 75,650 ರೂಪಾಯಿ ಆಗಿದೆ.
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿರುವ ಕಾರಣಕ್ಕೆ ಇದೀಗ ಪ್ರತಿ 100 ಗ್ರಾಂಗೆ 6,93,500 ರೂಪಾಯಿ ಆಗಿದೆ. ಅದರಲ್ಲೂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು 10 ಗ್ರಾಂಗೆ ಈಗ 69,350 ರೂಪಾಯಿ ಆಗಿದೆ. ಮತ್ತೊಂದು ಕಡೆ 100 ಗ್ರಾಂ ಬೆಳ್ಳಿ ಬೆಲೆ 8,950 ರೂಪಾಯಿ ಇದ್ದು, ರಾಜಧಾನಿ ಬೆಂಗಳೂರಲ್ಲಿ ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆ ಕುಸಿತವನ್ನ ಕಂಡಿದೆ. ಒಂದೇ ದಿನ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ ಬರೋಬ್ಬರಿ 1500 ರೂಪಾಯಿ ಕುಸಿತವನ್ನು ಕಂಡಿರುವ ಹಿನ್ನೆಲೆ ಇದೀಗ 89,500 ರೂಪಾಯಿ ಪ್ರತಿ ಕೆಜಿಗೆ ಮಾರಾಟ ಆಗುತ್ತಿದೆ.