ಉಪ ಚುನಾವಣೆ ಬೆನ್ನಲ್ಲೇ ದಲಿತರ ಇಡೀ ಗ್ರಾಮಕ್ಕೆ ಬೆಂಕಿ ಹಚ್ಚಿ ಕಲ್ಲು ತೂರಿದ ದುಷ್ಕರ್ಮಿಗಳು!

ಸಮಗ್ರ ನ್ಯೂಸ್:ಉಪಚುನಾವಣೆ ಬೆನ್ನಲ್ಲೇ ದಲಿತ ಇಡೀ ಗ್ರಾಮಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ವಿಜಯಪುರ ವಿಧಾನಸಭಾ ಕ್ಷೇತ್ರದ ಗೋಥಾ ಗ್ರಾಮದಲ್ಲಿ ನಡೆದಿದೆ.

Ad Widget ... ..

ನ.13 ರಂದು ವಿಧಾನಸಭೆಯ ಉಪಚುನಾವಣೆ ನಡೆದ ಬೆನ್ನಲ್ಲೇ ದುಷ್ಕರ್ಮಿಗಳು ನ.14 ರಂದು ದಲಿತರ ಪ್ರಾಬಲ್ಯ ಇರುವ ಗ್ರಾಮದಲ್ಲಿ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ದುಷ್ಕೃತ್ಯ ನಡೆಸಿದ್ದಾರೆ.ಗ್ರಾಮಸ್ಥರು ಆಶ್ರಯ ಪಡೆಯಲು ಪೊಲೀಸ್ ಠಾಣೆಗೆ ನುಗ್ಗಿದ್ದಾರೆ.

Ad Widget

ವಿಜಯಪುರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾರಣ ನಿರ್ಮಾಣವಾಗಿದೆ.ಚುನಾವಣೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಇದು ವಿಕೋಪಕ್ಕೆ ತಿರುಗಿದೆ. ಕನಿಷ್ಠ ಮೂವರಿಗೆ ಗಾಯಗಳಾಗಿವೆ.

Leave a Comment

Your email address will not be published. Required fields are marked *