Ad Widget .

ಮಾರುಕಟ್ಟೆ ಧಾರಣೆ: ಅರ್ಧ ಶತಕಕ್ಕೆ ಸಿಡಿಸಿದ ತೆಂಗಿನಕಾಯಿ| ₹ 520‌ ದಾಟಿದ ಡಬ್ಬಲ್ ಚೋಲ್ ಅಡಿಕೆ

ಸಮಗ್ರ ನ್ಯೂಸ್: ಮಾರುಕಟ್ಟೆ ಧಾರಣೆಯಲ್ಲಿ ಅಡಿಕೆ, ತೆಂಗಿನಕಾಯಿ ಧಾರಣೆ ಏರುಗತಿಯತ್ತ ಸಾಗಿದೆ. ತೆಂಗಿನ ಕಾಯಿ ದರ ಏರುಗತಿಯತ್ತ ಸಾಗಿದ್ದು ಬುಧವಾರ ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಯೊಂದಕ್ಕೆ ₹50ಕ್ಕೆ ತಲುಪಿದೆ. ತೆಂಗಿನಕಾಯಿ ಬೇಡಿಕೆ ಹೆಚ್ಚಿದೆ ಜೊತೆಗೆ ಎಳನೀರಿಗೆ ಈಗ ಎಲ್ಲ ವರ್ಗದ ಗ್ರಾಹಕರು ಸೃಷ್ಟಿಯಾಗಿದ್ದಾರೆ. ಜನರಲ್ಲಿ ಆರೋಗ್ಯ ಪ್ರಜ್ಞೆ ಹೆಚ್ಚಿದ ಮೇಲೆ ಯುವಜನರು ಎಳನೀರು ಕೇಳಿಕೊಂಡು ಬರುತ್ತಾರೆ. ಕಾರಿನಲ್ಲಿ ಹೋಗುವವರು ವಾಹನ ನಿಲ್ಲಿಸಿ ಎಳನೀರು ಕುಡಿದು ಹೋಗುತ್ತಾರೆ. ಎಳನೀರು ಬೇಡಿಕೆ ಹೆಚ್ಚಿದ್ದರಿಂದ ತೆಂಗು ಬೆಳೆಯುವ ಪ್ರದೇಶದ ರೈತರು ಎಳನೀರು ಕೊಯ್ದು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ತೆಂಗಿನ ಕಾಯಿ ಉತ್ಪಾದನೆ ಕುಸಿತವಾಗಿದೆ ಎನ್ನುತ್ತಾರೆ ಬೆಳೆಗಾರರು.

Ad Widget . Ad Widget .

ಮಂಗಗಳ ಹಾವಳಿ ತೆಂಗಿಗೆ ರೋಗದ ಕಾರಣ ಕರಾವಳಿಯಲ್ಲಿ ತೆಂಗಿನ ಬೆಳೆ ಇಳಿಮುಖವಾಗಿದೆ. ಇದು ಕೂಡ ದರ ಏರಿಕೆಗೆ ಕಾರಣ ಎನ್ನಲಾಗಿದೆ.

Ad Widget . Ad Widget .

ಇತ್ತ ಅಡಿಕೆ ಮಾರುಕಟ್ಟೆ ಮತ್ತಷ್ಟು ಜಿಗಿತ ಕಂಡಿದೆ. ದೀಪಾವಳಿ ಬಳಿಕ ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆಯೇ ಕಂಡಿದೆ. ಇದು ಅಡಿಕೆ ಬೆಳೆಗಾರರಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟ ವಿಚಾರವಾಗಿದೆ. ಸದ್ಯಕ್ಕೆ ಮಲೆನಾಡಿನ ಭಾಗದಲ್ಲಿ ರೈತರು ಅಡಿಕೆ ಕೊಯ್ಲು ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.

ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ 520 ರೂ. ಗಡಿ ದಾಟಿ ಮುನ್ನುಗ್ಗಿದೆ. ಜತೆಗೆ ಸಿಂಗಲ್‌ ಚೋಲ್‌ ಧಾರಣೆ ಏರಿಕೆ ಕಂಡಿದ್ದು ₹430 ರ ಆಸುಪಾಸಿನಲ್ಲಿ ಖರೀದಿಯಾಗಿದೆ. ಹೊಸ ಅಡಿಕೆ ಧಾರಣೆ ₹ 350ರ ಆಸುಪಾಸಿನಲ್ಲಿದೆ. ಆದರೆ ಉಪ ಬೆಳೆಗಳಾದ ಕಾಳು ಮೆಣಸು, ರಬ್ಬರ್‌, ಕೊಕ್ಕೊ ಧಾರಣೆಯಲ್ಲಿ ಏರಿಕೆಯ ಲಕ್ಷಣ ಕಂಡು ಬಂದಿಲ್ಲ.

ಕೆಲವು ತಿಂಗಳುಗಳ ಹಿಂದೆ ಹಸಿ ಕೊಕ್ಕೊ ಧಾರಣೆ ಕೆ.ಜಿ.ಗೆ 300 ರೂ. ಗಡಿ ದಾಟಿತ್ತು. ಆದರೆ ಪ್ರಸ್ತುತ 90 100 ರೂ. ಆಸುಪಾಸಿನಲ್ಲಿದೆ. 1,000 ರೂ. ತಲುಪಿದ್ದ ಒಣ ಕೊಕ್ಕೊ ಧಾರಣೆ 550 ರೂ. ನಲ್ಲಿದೆ. ಕಾಳುಮೆಣಸು ಧಾರಣೆಯು 615 ರೂ. ಇದ್ದು, ಕಳೆದ ಆರು ತಿಂಗಳಿನಿಂದ ಸ್ಥಿರವಾಗಿದೆ. ರಬ್ಬರ್ ಧಾರಣೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಕಂಡುಬಂದಿಲ್ಲ.

Leave a Comment

Your email address will not be published. Required fields are marked *