ಸಮಗ್ರ ನ್ಯೂಸ್:(ನ.14) ಶಾಲೆಯ ಪ್ರಿನ್ಸಿಪಾಲ್ ಮಗನ ಸೇವೆ ಮಾಡಲಿಲ್ಲವೆಂದು 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಬೆತ್ತದಿಂದ ಹಲ್ಲೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಲಂ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.
ಪಟ್ಟಣದ ಪ್ರಭಾವತಿ ಹಾಗೂ ಆಂಜಿನಪ್ಪ ದಂಪತಿಯ ಪುತ್ರಿಯಾಗಿರುವ ಭವ್ಯ ವಿದ್ಯಾರ್ಥಿನಿ,ಶಾಲೆಯ ಪ್ರಿನ್ಸಿಪಲ್ ಉಷಾಕಿರಣ್ ಗೆ ವಿಕಲಚೇತನ ಮಗನಿದ್ದಾನೆ. ಅದೇ ಶಾಲೆಯಲ್ಲಿ ಮಗನನ್ನು ನೋಡಿಕೊಳ್ಳಲು ಕೇರ್ ಟೇಕರ್ ಆಗಿ ಮಹಿಳೆಯನ್ನ ನೇಮಿಸಿಕೊಂಡಿದ್ದ ಪ್ರಿನ್ಸಿಪಾಲ್.
ಆದರೆ ಆ ಮಹಿಳೆಗೆ ವಿದ್ಯಾರ್ಥಿನಿ ಭವ್ಯ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಮಗುವಿನ ಮೇಲೆ ಬೆತ್ತದಿಂದ ಹಿಗ್ಗಾಮುಗ್ಗಾ ಥಳಿಸಿರುವ ಪ್ರಿನ್ಸಿಪಾಲ್, ಬೆತ್ತದ ಹೊಡೆತಕ್ಕೆ ನೋವಿನಿಂದ ಕಿರುಚಾಡಿದರೂ ಬಿಡದ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಇಂದು ಮಕ್ಕಳ ದಿನಾಚರಣೆ ಹಿನ್ನೆಲೆ ಸಂಭ್ರಮದಿಂದ ಶಾಲೆಗೆ ಬಂದಿದ್ದು ವಿದ್ಯಾರ್ಥಿನಿ. ಮಕ್ಕಳ ದಿನಾಚರಣೆಯಂದೇ ಪ್ರಿನ್ಸಿಪಾಲ್ ರಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದು. ಹಲ್ಲೆ ಮಾಡಿದ ವಿಚಾರ ಪೋಷಕರಿಗೆ ತಿಳಿದು ಶಾಲೆಗೆ ಬಂದು ಉಷಾ ಕಿರಣ್ ಗೆ ದಿಬ್ಬಂಧನ ಆಕ್ರೋಶ ಹೊರಹಾಕಿದರು. ಸದ್ಯ ಸ್ಥಳಕ್ಕೆ ವಿಜಯಪುರ ಪೊಲೀಸರು ದೌಡಾಯಿಸಿದ್ದಾರೆ.