Ad Widget .

ಸಚಿವ ಜಮೀರ್ ಗೆ ಧರ್ಮ, ಜಾತಿನಿಂದನೆ, ಅವಹೇಳನಕಾರಿ ಹೇಳಿಕೆ| ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಅವಹೇಳನಕಾರಿ ಮಾತು ಹಾಗೂ ಧರ್ಮ ಮತ್ತು ಜಾತಿ ನಿಂದನೆ ಮಾಡಿದ್ದ ಪುನೀತ್ ಕೆರೆ ಹಳ್ಳಿ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Ad Widget . Ad Widget .

ಸಚಿವ ಜಮೀರ್ ಆಪ್ತಸಹಾಯಕ‌ ಎಸ್. ಅಶೋಕ್ ನೀಡಿದ ದೂರು ಆಧರಿಸಿ ಬುಧವಾರ ಎಫ್ ಐ ಆರ್ ದಾಖಲಾಗಿದೆ. ನವೆಂಬರ್ 11 ರಂದು ಪುನೀತ್ ಕೆರೆ ಹಳ್ಳಿ ಅವರು ಯಾವುದೋ ಸ್ಥಳದಲ್ಲಿ ತಮ್ಮ ಸಾಮಾಜಿಕ ಜಾಲ ತಾಣದ ಫೇಸ್ ಬುಕ್ ಲಿಂಕ್ ನಲ್ಲಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರ ಕುರಿತು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಿಂದನೆ ಮಾಡಿರುತ್ತಾರೆ. ಧರ್ಮ -ಧರ್ಮ ಗಳ ನಡುವೆ ದ್ವೇಷ ಬಿತ್ತುವ ಪ್ರಚೋದನಕಾರಿ ಹೇಳಿಕೆ ನೀಡಿರುತ್ತಾರೆ.

Ad Widget . Ad Widget .

ಪದೇ ಪದೇ ಅವಾಚ್ಯ ಶಬ್ದ ಗಳಿಂದ ಸಚಿವರನ್ನು ನಿಂದಿಸಿರುತ್ತಾರೆ. ಜತೆಗೆ ಪ್ರಾಣ ಬೆದರಿಕೆ ಸಹ ಹಾಕಿರುತ್ತಾರೆ. ಹೀಗಾಗಿ ಕೂಡಲೇ ಎಫ್ ಐ ಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

Leave a Comment

Your email address will not be published. Required fields are marked *