Ad Widget .

ಹಸೀನಾ ಬಂಧನಕ್ಕೆ ರೆಡ್ ನೊಟೀಸ್/ ಇಂಟರ್‌ಪೋಲ್‌ಗೆ ಸೂಚಿಸಿದ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿ

ಸಮಗ್ರ ನ್ಯೂಸ್‌: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಬಂಧನಕ್ಕೆ ರೆಡ್ ನೊಟೀಸ್ ಜಾರಿ ಮಾಡುವಂತೆ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್‌ಪೋಲ್‌ಗೆ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿ ಸೂಚಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶೇಖ್ ಹಸೀನಾ ತನ್ನ ಆಪ್ತ ಸಹಾಯಕರು ಮತ್ತು ಮಾಜಿ ಸಚಿವರೊಂದಿಗೆ ಆಗಸ್ಟ್ 5 ರಂದು ಭಾರತಕ್ಕೆ ಪಲಾಯನ ಮಾಡುವ ಮೂಲಕ ಅವರ 15 ವರ್ಷಗಳ ಆಡಳಿತ ಅಂತ್ಯಗೊಂಡಿತ್ತು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರು ಆಗಸ್ಟ್ 3 ರಂದು ದಕ್ಷಿಣ ಏಷ್ಯಾ ರಾಷ್ಟ್ರದ ಹಂಗಾಮಿ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಇದೀಗ ಬಿ.ಎಂ. ಹಸೀನಾ ಮತ್ತು ಇತರರ ಬಂಧನದಲ್ಲಿ ಫ್ರಾನ್ಸ್ ಮೂಲದ ಸಂಸ್ಥೆಯಿಂದ ನೆರವು ಕೋರಿ ಪೊಲೀಸ್ ಮುಖ್ಯಸ್ಮರ ಮೂಲಕ ಇಂಟರ್‌ಪೋಲ್‌ ಗೆ ಪತ್ರ ಬರೆದಿದ್ದೇವೆ ಎಂದು ನ್ಯಾಯಮಂಡಳಿಯ ಪ್ರಾಸಿಕ್ಯೂಟರ್ ಸುಲ್ತಾನ್ ಮಹಮೂದ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

Ad Widget . Ad Widget . Ad Widget .

ಯೂನಸ್ ನೇತೃತ್ವದ ಸರ್ಕಾರವು ಹಸೀನಾರನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದ್ದು. ಅವರನ್ನು ಭಾರತದಿಂದ ಹಸ್ತಾಂತರಿಸಲು ಪ್ರಯತ್ನಿಸುವುದಾಗಿ ಹೇಳಿದೆ. ಈ ಹಿಂದೆ, ಬಾಂಗ್ಲಾದೇಶದ ಅಧಿಕಾರಿಗಳು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು. ಬಾಂಗ್ಲಾದೇಶದ ನ್ಯಾಯಮಂಡಳಿ, ದೇಶಭ್ರಷ್ಟ ಮಾಜಿ ನಾಯಕಿ ಶೇಖ್ ಹಸೀನಾಗೆ ಬಂಧನ ವಾರಂಟ್ ನ್ನು ಸಹ ಆದೇಶಿಸಿದೆ.

Leave a Comment

Your email address will not be published. Required fields are marked *