Ad Widget .

14 ವರ್ಷಗಳ ಹಿಂದೆ ಕಷ್ಟದಲ್ಲಿದ್ದಾಗ ನೆರವಾಗಿದ್ದ ತರಕಾರಿ ವ್ಯಾಪಾರಿ ಸಲ್ಮಾನ್ ರನ್ನು ಪತ್ತೆ ಹಚ್ಚಿದ ಡಿಎಸ್‌ಪಿ ಸಂತೋಷ್‌ ಪಾಟೀಲ್

ಸಮಗ್ರ ನ್ಯೂಸ್:14 ವರ್ಷಗಳ ಹಿಂದೆ ತಾನು ವಿದ್ಯಾರ್ಥಿಯಾಗಿದ್ದಾಗ ತನ್ನ ಕಷ್ಟಕ್ಕೆ ನೆರವಾಗಿದ್ದ ತರಕಾರಿ ವ್ಯಾಪಾರಿಯನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಡಿಎಸ್‌ಪಿ ಸಂತೋಷ್ ಪಟೇಲ್ ಯಶಸ್ವಿಯಾಗಿದ್ದಾರೆ. ಶನಿವಾರ ಭೋಪಾಲದ ತರಕಾರಿ ವ್ಯಾಪಾರಿ ಸಲ್ಮಾನ್ ಖಾನ್ ಅಂಗಡಿಯೆದುರು ಪೋಲೀಸ್ ವಾಹನವೊಂದು ಬಂದು ನಿಂತಿತ್ತು.

Ad Widget . Ad Widget .

ಅದರಿಂದ ಇಳಿದ ಡಿಎಸ್‌ಪಿ ಪಟೇಲ್ ತನ್ನನ್ನು ಹೆಸರಿಡಿದು ಕರೆದಾಗ ಖಾನ್ ಆತಂಕಗೊಂಡಿದ್ದರು.ಖಾನ್ ಪಟೇಲ್‌ಗೆ ಸೆಲ್ಯೂಟ್ ಹೊಡೆದಾಗ ಅವರ ಮುಖದಲ್ಲಿ ನಗು ಅರಳಿತ್ತು. ‘ನನ್ನ ನೆನಪಿದೆಯೇ?’ ಎಂದು ಪಟೇಲ್ ಪ್ರಶ್ನಿಸಿದಾಗ, ಚೆನ್ನಾಗಿ ನೆನಪಿದೆ, ನೀವು ತರಕಾರಿ ಒಯ್ಯಲು ಬರುತ್ತಿದ್ದೀರಿ ಎಂದು ಖಾನ್ ಉತ್ತರಿಸಿದ್ದರು.ಖಾನ್ ಮತ್ತು ಪಟೇಲ್ ನಡುವೆ ಕೊನೆಯ ಭೇಟಿಯ ನಂತರದ 14 ವರ್ಷಗಳಲ್ಲಿ ಖಾನ್ ಕೃಶರಾಗಿದ್ದರು,ಆದರೆ ಅವರ ತುಟಿಯ ಮೇಲಿದ್ದ ಹಳೆಯ ಗಾಯದ ಗುರುತಿನಿಂದ ಪಟೇಲ್ ಅವರನ್ನು ಗುರುತಿಸಿದ್ದರು.ಇಬ್ಬರೂ ಪರಸ್ಪರ ತಬ್ಬಿಕೊಂಡು ಬಹು ಹಿಂದಿನ ತಮ್ಮ ನಡುವಿನ ಬಂಧವನ್ನು ಪುರುಜ್ಜಿವನಗೊಳಿಸಿದರು. ಭೋಪಾಲ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಅವರ ಕಷ್ಟದ ಸಮಯಗಳಲ್ಲಿ ಖಾನ್ ನೆರವಾಗಿದ್ದರು.

Ad Widget . Ad Widget .

ಗ್ವಾಲಿಯರ್‌ನ ಬೇಹಾತ್ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಪಟೇಲ್ ಸುದ್ದಿಸಂಸ್ಥೆಯೊಡನೆ ಮಾತನಾಡಿ ‘ಪನ್ನಾದಲ್ಲಿ 120 ಜನರ ನಮ್ಮ ಕುಟುಂಬದಲ್ಲಿ ನಾನು ಮೊದಲ ಪದವೀಧರನಾಗಿದ್ದೆ. ನಾನು ನನ್ನ ಕುಟುಂಬದಲ್ಲಿ ಮೊದಲ ಪೋಲಿಸ್ ಅಧಿಕಾರಿಯೂ ಆಗಿದ್ದೇನೆ. ಬಡತನದ ಎಲ್ಲ ಸವಾಲುಗಳ ನಡುವೆಯೂ ನಾನು ಇಂಜಿನಿಯರಿಂಗ್ ಓದಲು ಭೋಪಾಲ್ ಗೆ ತೆರಳಿದ್ದೆ, ಬಳಿಕ ಮಧ್ಯಪ್ರದೇಶ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಆ ದಿನಗಳಲ್ಲಿ ಆಹಾರ ಸಾಮಗ್ರಿಗಳನ್ನು ಖರೀದಿಸಲೂ ನನ್ನ ಬಳಿ ಹಣವಿರಲಿಲ್ಲ, ಖಾನ್ ನನಗೆ ಸಾಕಷ್ಟು ತರಕಾರಿಗಳನ್ನು ಒದಗಿಸಿ ದಯೆ ತೋರಿಸಿದ್ದರು. ನಾನು ಎಂದಿಗೂ ಉಪವಾಸ ಮಲಗದಂತೆ ಅವರು ನೋಡಿಕೊಂಡಿದ್ದರು. ಅವರದ್ದು ಚಿನ್ನದಂತಹ ಹೃದಯ’ ಎಂದು ಹೇಳಿದರು.

‘ನಾನು ಸಾವಿರಾರು ಜನರಿಗೆ ತರಕಾರಿ ಮಾರಾಟ ಮಾಡುತ್ತೇನೆ, ಆದರೆ ಒಬ್ಬರೂ ನನ್ನ ಮುಖವನ್ನು ನೆನಪಿಟ್ಟುಕೊಳ್ಳುವುದಿಲ್ಲ. ಆದರೆ ಪಟೇಲ್ ಇಲ್ಲಿಗೆ ಬಂದು ನನ್ನನ್ನು ಭೇಟಿಯಾಗಿದ್ದಾರೆ. ನಾನು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಫಾಲೋ ಮಾಡುತ್ತಿದ್ದೆ ಮತ್ತು ಅವರು ಪೋಲಿಸ್ ಅಧಿಕಾರಿಯಾಗಿದು ನನಗೆ ಹೆಮ್ಮೆ ಯನ್ನುಂಟು ಮಾಡಿತು.ಅವರು ನನ್ನನ್ನು ಭೇಟಿಯಾಗುತ್ತಾರೆ ಎಂದು ನನಗೆ ತಿಳಿದಿರಲಿಲ್ಲ.

ಅವರು ನನಗೆ ಸಿಹಿತಿಂಡಿಗಳು ಮತ್ತು ಸ್ವಲ್ಪ ಹಣವನ್ನೂ ನೀಡಿದರು.ಅವರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆ. ನನ್ನ ಕನಸು ನನಸಾಗಿದೆ ‘ ಎಂದು ಖಾನ್ ಹೇಳಿದರು.ಪಟೇಲ್ ತನ್ನ ಇಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿದ್ದರಾದರೂ ಅವರಿಗೆ ಉದ್ಯೋಗ ದೊರಕಿರಲಿಲ್ಲ. ತನ್ನ ಗ್ರಾಮಕ್ಕೆ ಮರಳಿದ ಅವರು ಪನ್ನಾದಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಪೋಲಿಸ್ ಪಡೆಗೆ ಸೇರಬೇಕೆಂಬ ತನ್ನ ಕನಸನ್ನು ಅವರು ಜೀವಂತವಾಗಿಟ್ಟುಕೊಂಡಿದ್ದರು ಮತ್ತು ಅದಕ್ಕಾಗಿ ಅಧ್ಯಯನ ನಡೆಸುತ್ತಿದ್ದರು. 2017ರಲ್ಲಿ ಅವರು ಎಂಪಿಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದ್ದರು.

Leave a Comment

Your email address will not be published. Required fields are marked *