Ad Widget .

ದಕ್ಷಿಣ ಕೊರಿಯಾದ ಜನಪ್ರಿಯ ಯುವ ನಟ ಸಾಂಗ್ ಜೇ-ರಿಮ್ ನಿಧನ, ಕೊರಿಯನ್ ಸಿನಿ ಪ್ರೇಮಿಗಳಿಗೆ ಆಘಾತ

ಸಮಗ್ರ ನ್ಯೂಸ್:ದಕ್ಷಿಣ ಕೊರಿಯಾದ ಜನಪ್ರಿಯ ನಟ ಸಾಂಗ್ ಜೇ-ರಿಮ್ ನ.12 ರಂದು ನಿಧನರಾದರು. ಅವರಿಗೆ 39 ವರ್ಷ ವಯಸ್ಸಾಗಿತ್ತು. ಸಿಯೋಲ್‌ನಲ್ಲಿರುವ ಇವರ ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆಯಾಗಿದೆ.

Ad Widget . Ad Widget .

ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ‘ಎರಡು ಪುಟಗಳ ಪತ್ರ’ ಪತ್ತೆಯಾಗಿದೆ ಎನ್ನಲಾಗಿದೆ., ನಟನ ಅಂತ್ಯಕ್ರಿಯೆ ನವೆಂಬರ್ 14 ರಂದು ನಡೆಯಲಿದೆ ಎಂದು ವರದಿಯಾಗಿದೆ. ಯೌಯಿಡೋ ಸೇಂಟ್ ಮೇರಿಸ್ ಆಸ್ಪತ್ರೆಯ ಪ್ಯೂನರಲ್ ಹಾಲ್‌ನಲ್ಲಿ ಸ್ಮಾರಕ ಸ್ಥಳವನ್ನು ಏರ್ಪಡಿಸಲಾಗಿದೆ ಎಂದು ಎಕ್ಸ್‌ಪೋರ್ಟ್ಸ್ನ್ಯೂಸ್ ವರದಿ ಮಾಡಿದೆ.ಸಾಂಗ್ ಜೆ ರಿಮ್ 2009ರ “ಆಸ್ಟ್ರೇಸ್” ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ದಿ ಮೂನ್ ಎಂಬ್ರೇಸಿಂಗ್ ದಿ ಸನ್ ಚಿತ್ರದಲ್ಲಿ ನಟಿಸಿದ ಬಳಿಕ ಅವರು ಮನೆಮಾತಾಗಿದ್ದರು.

Ad Widget . Ad Widget .

ಲಾರ್ಡ್ ಕಿಮ್ ಜೇ- ವೂನ್ ಎಂಬ ನಿಷ್ಠಾವಂತ ಅಂಗರಕ್ಷಕನ ಪಾತ್ರವನ್ನು ನಿರ್ವಹಿಸಿದ್ದರು.ಟು ವೀಕ್ಸ್ (2013) ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಇದರಲ್ಲಿ ಕೊಲೆಗಡುಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅನ್‌ಕೈಂಡ್ ಲೇಡೀಸ್ (2015), ಸೀಕ್ರೆಟ್ ಮದರ್ (2018), ಐ ವಾನ್ನಾ ಹಿಯರ್ ಯುವರ್ ಸಾಂಗ್ (2019), ಕೆಫೆ ಮಿನಾಮ್‌ಡಾಂಗ್ (2022) ಮತ್ತು ಇತ್ತೀಚೆಗೆ ಮೈ ಮಿಲಿಟರಿ ವ್ಯಾಲೆಂಟೈನ್ (2024)ನಂತಹ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 2024ರಲ್ಲಿ ಇವರು ಕ್ಲೀನ್ ವೂನಲ್ಲಿ ಕಾಣಿಸಿಕೊಂಡರು. ಐ ವಿಲ್ ಬಿಕಮ್ ರಿಚ್ ಮತ್ತು ಡೆತ್ ಬಿಸಿನೆಸ್ ಮುಂತಾದ ಸಿನಿಮಾಗಳು ಬಿಡುಗಡೆಯಾಗುವ ಮುನ್ನವೇ ಇಹಲೋಕ ತ್ಯಜಿಸಿದ್ದು ಅಪಾರ ಅಭಿಮಾನಿಗಳಿಗೆ ಆಘಾತ ತಂದಿದೆ.

Leave a Comment

Your email address will not be published. Required fields are marked *