ಅಂತರಾಷ್ಟ್ರೀಯ ಯೋಗಗುರು ಶರತ್ ಜೋಯಿಸ್ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ಮೈಸೂರು ಮೂಲದ ಅಂತಾರಾಷ್ಟ್ರೀಯ ಯೋಗ ಗುರು ಶರತ್‌ ಜೋಯಿಸ್‌ (53) ಅಮೆರಿಕದ ವರ್ಜೀನಿಯಾದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

Ad Widget ... ..

ಹೆಸರಾಂತ ಯೋಗ ಗುರು ಮೈಸೂರು ಮೂಲದ ಕೆ. ಪಟ್ಟಾಭಿ ಜೋಯಿಸ್‌ ಅವರ ಮೊಮ್ಮಗ ಶರತ್‌ ಜೋಯಿಸ್‌ ಅಮೆರಿಕದಲ್ಲಿ ನೆಲೆಸಿದ್ದರು. ಯೋಗಗುರುವಾಗಿ ತಾತನ ಹಾದಿಯಲ್ಲೇ ಸಾಗಿದ್ದ ಅವರು ವರ್ಜೀನಿಯಾದಲ್ಲಿ ಯೋಗ ತರಗತಿ ನಡೆಸುವಾಗಲೇ ಹೃದಯಾಘಾತದಿಂದ ನಿಧನರಾದರು.

Ad Widget

ಮೃತರು ತಾಯಿ, ಪತ್ನಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅಷ್ಟಾಂಗ ಯೋಗ ಗುರು ಎಂದೇ ಹೆಸರಾಗಿದ್ದ ಶರತ್‌ ಯೋಗಾಭ್ಯಾಸ ಮತ್ತು ಯೋಗಪಾಠಕ್ಕೆ ಬದುಕನ್ನು ಮೀಸಲಾಗಿಟ್ಟಿದ್ದರು. ಖ್ಯಾತ ಪಾಪ್‌ ಗಾಯಕಿ ಮಡೋನಾ ಸೇರಿದಂತೆ ಹಲವರಿಗೆ ಯೋಗ ಕಲಿಸಿದ್ದರು.

Leave a Comment

Your email address will not be published. Required fields are marked *