Ad Widget .

ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಪ್ರಸ್ತಾವವಿಲ್ಲ – ಡಿಸಿಎಂ

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ವಿರೋಧಪಕ್ಷಗಳು ಮೇಲಿಂದ ಮೇಲೆ ತುಷ್ಟಿಕರಣ, ಓಲೈಕೆ ರಾಜಕಾರಣದ ಆರೋಪ ಮಾಡುತ್ತಿದ್ದು, ಈ ಮಧ್ಯೆ ಉಪಚುನಾವಣೆ ಮತದಾನಕ್ಕೆ ಒಂದು ದಿನ ಮುಂಚಿತವಾಗಿ ರಾಜ್ಯ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.4 ರಷ್ಟು ಮಿಲಿಸಲಾತಿಗೆ ಅನುಮೋದನೆ ನೀಡಿದೆ ಎಂಬ ವದಂತಿ ಹಬ್ಬಿತ್ತು.

Ad Widget . Ad Widget .

ಈ ಬೆಳವಣಿಗೆ ಹಲವು ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಈಗಾಗಲೇ ರಾಜ್ಯದಲ್ಲಿ ವಕ್ಫ್ ಬೋರ್ಡ್ ಸೃಷ್ಟಿ ಮಾಡಿರುವ ಗೊಂದಲಗಳಿಂದ ಸರ್ಕಾರಕ್ಕೆ ತಲೆನೋವಾಗಿದ್ದು, ಈ ಮಧ್ಯೆ ಉಪಚುನಾವಣೆಯ ಕಾರಣಕ್ಕೆ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದ್ಯಾ ಎಂಬ ಕಿಡಿ ಹೊತ್ತಿಸಿತ್ತು.

Ad Widget . Ad Widget .

ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಇದೆಲ್ಲವೂ ಶುದ್ಧ ಸುಳ್ಳು. ಉಪ ಚುನಾವಣೆ ಸನಿಹದಲ್ಲಿ ಇರುವುದರಿಂದ ವಿರೋಧ ಪಕ್ಷಗಳು ಈ ರೀತಿ ವದಂತಿ ಹಬ್ಬಿಸಿದ್ದಾರೆ. ಆದ್ರೆ ಸರ್ಕಾರ ಯಾವ ಅನುಮೋದನೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Leave a Comment

Your email address will not be published. Required fields are marked *