ಗಾಡಿಗೆ ಸೈಡ್ ಬಿಡದಿದ್ದಕ್ಕೆ ಬಿಎಂಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆ

ಸಮಗ್ರ ನ್ಯೂಸ್:ಗಾಡಿಗೆ ಸೈಡ್ ಬಿಡದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನ ಕಾರ್ಪೋರೇಷನ್ ಬಳಿ ಈ ಘಟನೆ ನಡೆದಿದೆ. ಬಸ್ ವಿಂಡೋವನ್ನ ಪುಡಿ ಪುಡಿ ಮಾಡಿ ಬಸ್ ಚಾಲಕನನ್ನ ಕೆಳಗಿಳಿಸಿ ಹಲ್ಲೆ ಮಾಡಲಾಗಿದೆ.ದ್ವಿಚಕ್ರ ವಾಹನದಲ್ಲಿ ಯುವಕ ಹೋಗುತ್ತಿದ್ದ. ಈ ವೇಳೆ ಬಸ್ ಹಾಗೂ ಡಿವೈಡರ್ ಮಧ್ಯೆ ಯುವಕ ಗಾಡಿ ನುಗ್ಗಿಸಿದ್ದಾನೆ.

Ad Widget ... ..

ಬಳಿಕ ಬಸ್ ಡ್ರೈವರ್ ಗೆ ಸೈಡ್ ಕೊಡುವಂತೆ ಅವಾಜ್ ಹಾಕಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಗ್ಯಾರೇಜ್ ಯುವಕ ನಲ್ಲಿ ಕೆಲಸ ಮಾಡುತ್ತಿದ್ದ.ಟೂಲ್ಸ್ ಸಮೇತ ಗಾಡಿಯಲ್ಲಿ ಹೋಗ್ತಿದ್ದ. ಸಿಗ್ನಲ್ ಬಳಿ ಬಸ್ ನಿಲ್ಲಿಸ್ತಿದ್ದಂತೆ ಬಸ್ ಚಾಲಕನ ಮೇಲೆ ದಾಳಿ ನಡೆದಿದೆ. ಟೂಲ್ಸ್ ನಿಂದ ಬಿಎಂಟಿಸಿ ಬಸ್ ಡ್ರೈವರ್ ಮೇಲೆ ಹಲ್ಲೆ ನಡೆದಿದೆ. ಕೂಡಲೇ ಆರೋಪಿಯನ್ನ ಹಿಡಿದು ಸ್ಥಳೀಯರು ಥಳಿಸಿದ್ದಾರೆ.ಆರೋಪಿ ಥಳಿಸಿ ಪೊಲೀಸ್ಸಿಗೆ ಒಪ್ಪಿಸಿದ್ದಾರೆ.

Ad Widget

Leave a Comment

Your email address will not be published. Required fields are marked *