Ad Widget .

ಪತ್ನಿ, ಮಕ್ಕಳಿಗೆ ವಿಷವುಣಿಸಿ ದಾರುಣವಾಗಿ ಕೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ ನರ ಹಂತಕ

ಸಮಗ್ರ ನ್ಯೂಸ್:ಆಭರಣ ವ್ಯಾಪಾರಿಯೊಬ್ಬರು ಪತ್ನಿ ಹಾಗೂ ತನ್ನ ಮೂರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ . ಕೃತ್ಯ ನಡೆಸಿದ ವ್ಯಕ್ತಿಯನ್ನು ಆಭರಣ ವ್ಯಾಪಾರಿ ಮುಖೇಶ್ ಎಂದು ಗುರುತಿಸಲಾಗಿದೆ.

Ad Widget . Ad Widget .

ಆರೋಪಿ ಮುಖೇಶ್ ಪತ್ನಿ ರೇಖಾ, ಪುತ್ರಿಯರಾದ ಭವ್ಯ (22), ಕಾವ್ಯ (17) ಮತ್ತು ಪುತ್ರ ಅಭೀಷ್ (12) ನನ್ನು ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ್ದ. ನಂತರ ಶವಗಳ ಫೋಟೋವನ್ನು ತನ್ನ ವಾಟ್ಸಾಪ್‌ ಸ್ಟೇಟಸ್‌ಗೆ ಹಾಕಿಕೊಂಡಿದ್ದ. ಇದನ್ನು ನೋಡಿದ ಅವರ ಕುಟುಂಬಸ್ಥರು ಮುಖೇಶ್ ಮನೆಗೆ ಬಂದು ಹುಡುಕಾಟ ನಡೆಸಿದ್ದಾರೆ. ಆಗ ಮೃತ ದೇಹಗಳು ಪತ್ತೆಯಾಗಿವೆ. ಇತ್ತ ಮುಖೇಶ್ ರೈಲ್ವೆ ನಿಲ್ದಾಣಕ್ಕೆ ತೆರಳಿ ಚಲಿಸುವ ಮರುಧರ್ ಎಕ್ಸ್‌ಪ್ರೆಸ್‌ನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮುಖೇಶ್ ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿದ ಆರ್‌ಪಿಎಫ್ ಅಧಿಕಾರಿಗಳು ಆತನನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂಬುದು ತಿಳಿದು ಬಂದಿದೆ.

Ad Widget . Ad Widget .

ಘಟನೆಯ ಬಗ್ಗೆ ಮಾತನಾಡಿದ ಇಟಾವಾಹನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾ‌ರ್ ಮೇಲ್ನೋಟಕ್ಕೆ ಇದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದಿರುವ ಕೊಲೆಗಳು ಎನಿಸುತ್ತವೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.ಬೇರೊಂದು ಘಟನೆಯಲ್ಲಿ ತನ್ನ ಮಗಳು ಯುವಕನೊಬ್ಬನ ಜೊತೆ ಓಡಿ ಹೋಗಿದ್ದಾಳೆ ಎಂದು ಆಕ್ರೋಶಗೊಂಡ ಮಹಿಳೆ ಮಗಳನ್ನು ಕೊಲೆ ಮಾಡಲು ಯುವಕನೊಬ್ಬನಿಗೆ ಸುಪಾರಿ ನೀಡಿ ತಾನೇ ಕೊಲೆಯಾದ ಘಟನೆ ಇತ್ತೀಚೆಗೆ ನಡೆದಿತ್ತು.

42 ವರ್ಷದ ಅಲ್ಕಾ ದೇವಿ ತನ್ನ ಮಗಳ ಪ್ರಿಯತಮ ಎಂದು ತಿಳಿಯದೆ ಸುಭಾಷ್ ಎನ್ನುವವರಿಗೆ ಮಗಳನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದರು. ಆದರೆ ಆಕೆಯ ಮಗಳು ತನ್ನ ಗೆಳೆಯನ ಜೊತೆ ಸೇರಿ ಅಮ್ಮನನ್ನೇ ಕೊಲೆ ಮಾಡುವಂತೆ ಹೇಳಿದ್ದಾಳೆ. ಪ್ರೇಯಸಿ ಹೇಳಿದ ಮಾತನ್ನು ಕೇಳಿ ಕೊಲೆ ಮಾಡಿದ ಸುಭಾಷ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Leave a Comment

Your email address will not be published. Required fields are marked *