Ad Widget .

ವೃತ್ತಿಯ ಕೊನೆ ದಿನ ಮಹತ್ವದ ನಿರ್ಧಾರ: ಮಗನಿಗೆ ದಯಾಮರಣ ಅನುಮತಿ ಕೇಳಿದ್ದ ಪೋಷಕರಿಗೆ ಸಿಕ್ಕಿತು ಪರಿಹಾರ

ಸಮಗ್ರ ನ್ಯೂಸ್ :ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಭಾರತದ ಮುಖ್ಯ ನ್ಯಾಯಾಧೀಶ ಸ್ಥಾನದಿಂದ ನಿವೃತ್ತಿ ಹೊಂದಿದ್ದು, ಸಂಜೀವ್ ಖನ್ನಾ ಹೊಸ ಸಿಜೆಐ ಆಗಿ ನೇಮಕಗೊಂಡಿದ್ದಾರೆ.ಸಿಜೆಐ ಆಗಿ ನ್ಯಾ. ಡಿವೈ ಚಂದ್ರಚೂಡ್ ಅವರ ಅಧಿಕಾರಾವಧಿಯ ಕೊನೆಯ ದಿನ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಅಮಿಟೆಡ್ 199 ಪ್ರಕರಣವೊಂದರಲ್ಲಿ ಅವರ ಮಧ್ಯಸ್ಥಿಕೆಯಿಂದ 30 ವರ್ಷದ ಯುವಕನ ಪಾಲಕರಿಗೆ ಪರಿಹಾರ ಸಿಕ್ಕಿದೆ.30 ವರ್ಷದ ಹರೀಶ್ ರಾಣಾ ಎಂಬ ಯುವಕ ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದು, ಆತನ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆ ಮಗನಿಗೆ ದಯಾಮರಣ ನೀಡಬೇಕೆಂದು ಆತನ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು.

Ad Widget . Ad Widget . Ad Widget .

ವೈದ್ಯಕೀಯ ಸಾಧನಗಳ ಸಹಾಯದಿಂದ ಮಗ ಜೀವಂತವಾಗಿದ್ದಾನೆ. ಜೀವಾಧಾರಕ ವ್ಯವಸ್ಥೆಯ ಸಾಧನಗಳನ್ನು ತೆಗೆದರೆ ಆತ ಸಾವನ್ನಪ್ಪುತ್ತಾನೆ. ಹಾಗಾಗಿ ಸಹಜ ಸಾವಿಗೆ ಪೋಷಕರು ಅನುಮತಿ ಕೇಳಿದ್ದರು.ಕೋಮಾದಲ್ಲಿರುವ ಹರೀಶ್ ವೈದ್ಯಕೀಯ ವೆಚ್ಚವನ್ನು ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.ಹರೀಶ್ ಪೋಷಕರಾದ ಅಶೋಕ್ ರಾಣಾ (62) ಮತ್ತು ನಿರ್ಮಲಾದೇವಿ ಹಲವು ವರ್ಷಗಳಿಂದ ಮಗನ ವೈದ್ಯಕೀಯ ವೆಚ್ಚಗಳನ್ನು ಭರಿಸುತ್ತಿದ್ದಾರೆ. ಯಾವಾಗ ಆರ್ಥಿಕ ಸ್ಥಿತಿ ಕುಸಿಯಲಾರಂಭಿಸಿಯೋ ಮಗನಿಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಮೊಹಾಲಿ ಓದುತ್ತಿರುವಾಗ ನಾಲ್ಕನೇ ಮಹಡಿಯಿಂದ ಬಿದ್ದಿದ್ದರಿಂದ ತಲೆಗೆ ಗಂಭೀರ ಗಾಯವಾಗಿತ್ತು.

ಮನೆಯಲ್ಲಿಯೇ ಹರೀಶ್ ರಾಣಾಗೆ ಚಿಕಿತ್ಸೆ ನೀಡಲು ಕೋರ್ಟ್ ಸೂಚನೆ ನೀಡಿದೆ. ಉತ್ತರ ಪ್ರದೇಶ ಸರ್ಕಾರವೇ ಹರೀಶ್ ಚಿಕಿತ್ಸೆಯನ್ನು ನೋಡಿಕೊಳ್ಳಬೇಕು. ಆನ್-ಕಾಲ್ ವೈದ್ಯಕೀಯ ಅಧಿಕಾರಿ ಮತ್ತು ಶುಶೂಷಾ ಸಲಹೆ ಜೊತೆ ಫಿಸಿಯೋಥೆರಪಿಸ್ಟ್ ಮತ್ತು ಆಹಾರ ತಜ್ಞರು ಭೇಟಿ ನೀಡುತ್ತಿರಬೇಕು. ಈ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆ ಭವಿಷ್ಯದಲ್ಲಿ ಚಿಕಿತ್ಸಾ ವೆಚ್ಚ ಪಾವತಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಜಿಯಲ್ಲಿ ಅಶೋಕ್ ರಾಣಾ ಮತ್ತು ನಿರ್ಮಾಲಾದೇವಿ ಉಲ್ಲೇಖಿಸಿದ್ದರು.

Leave a Comment

Your email address will not be published. Required fields are marked *