Ad Widget .

ಪೆಟ್ರೋಲ್ ಸಾಗಿಸುವ ಕಂಟೈನರ್‌ನಲ್ಲಿ ಕಳ್ಳಸಾಗಣೆ; ಒಳಗಿದ್ದದನ್ನು ಕಂಡು ನೆಟ್ಟಿಗರು ಶಾಕ್

ಸಮಗ್ರ ನ್ಯೂಸ್:ಸಾವಿರರಾರೂ ಲೀಟ‌ರ್ ಪೆಟ್ರೋಲ್ ಅಥವಾ ಡೀಸೆಲ್ ಇರುವ ಕಂಟೈನರ್‌ಗಳನ್ನು ಹೊತ್ತು ರಸ್ತೆಗಳಲ್ಲಿ ಓಡುವ ಟ್ರಕ್ ಗಳಲ್ಲಿ ಇನ್ನೇನೋ ನಡೆಯುತ್ತಿರಬಹುದು ಎಂದು ಒಬ್ಬ ಸಾಮಾನ್ಯ ವ್ಯಕ್ತಿ ಊಹಿಸಲು ಸಾಧ್ಯವಾಗುವುದಿಲ್ಲ. ಅಪರಾಧಿಗಳು ಅಪರಾಧದ ಕೆಲಸ ಮಾಡಲು ಯಾವೆಲ್ಲಾ ವಿಧಾನಗಳನ್ನು ಅನುಸರಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.

Ad Widget . Ad Widget .

ಓಪನ್ ಮಾಡಿದ ಕಂಟೈನರ್ ಒಳಗೆ ಹಸುಗಳನ್ನು ಕಾಣಬಹುದಾಗಿದೆ.ಹಸುಗಳನ್ನು ಹಗ್ಗಗಳಿಂದ ಕಟ್ಟಲಾಗಿದೆ. ಇದರಿಂದ ರಸ್ತೆಯಲ್ಲಿ ಬ್ರೇಕರ್‌ನ ಸಂದರ್ಭದಲ್ಲಿ ಹಸುಗಳು ಬೀಳುವುದನ್ನು ತಪ್ಪಿಸಬಹುದು. ಆದರೆ ಜಾನುವಾರುಗಳನ್ನು ಲಾರಿಯೊಳಗೆ ಸಾಗಿಸುತ್ತಿರುವ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Ad Widget . Ad Widget .

ಈ ಅಕ್ರಮ ಸಾಗಣೆ ನಡೆಯುತ್ತಿದ್ದ ಲಾರಿ ಮೇಲೆ ಜಾರ್ಖಂಡ್ ನಂಬ‌ರ್ ಪ್ಲೇಟ್ ಅಳವಡಿಸಲಾಗಿದೆ. ನಂಬರ್ ಪ್ಲೇಟ್ ಮೇಲೆ JK 03 E 5451 ಎಂದು ಬರೆಯಲಾಗಿದೆ.ಈ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಹಸು ಕಳ್ಳಸಾಗಣೆದಾರರು ಈಗ ಪೆಟ್ರೋಲ್ ಟ್ರಕ್‌ಗಳಲ್ಲೂ ಕಳ್ಳಸಾಗಣೆ ಆರಂಭಿಸಿದ್ದಾರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಅಂತಹವರ ವಿರುದ್ಧ ಕ್ರಮಕೈಗೊಂಡು ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *