ಸಮಗ್ರ ನ್ಯೂಸ್: ಆಭರಣ ಪ್ರಿಯರಿಗೆ ಇಂದು ಬೆಳ್ಳಂಬೆಳಗ್ಗೆ ಸಿಹಿಸುದ್ದಿ ಸಿಕ್ಕಿದ್ದು, ಸತತ ನಾಲ್ಕನೇ ದಿನವೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ನವೆಂಬರ್ 13 ರ ಬುಧವಾರದಂದು ಚಿನ್ನದ ಬೆಲೆಗಳು ನಿನ್ನೆಗೆ ಹೋಲಿಸಿದರೆ 2000 ರೂಪಾಯಿ ಇಳಿಕೆಯಾಗಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 77650 ರೂ.ಗೆ ಇಳಿಕೆಯಾಗಿದೆ. ಹಾಗೂ 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 71650 ರೂ.ಗೆ ಕುಸಿದಿದೆ. ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ ನೋಡಿದರೆ ಸುಮಾರು 3 ಸಾವಿರ ರೂಪಾಯಿ ಇಳಿಕೆಯಾಗಿದೆ. ಚಿನ್ನದ ಬೆಲೆ ಒಂದು ಹಂತದಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ 82,000 ರೂ. ಅದಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಸುಮಾರು 5 ಸಾವಿರ ರೂಪಾಯಿ ಇಳಿಕೆಯಾಗಿದೆ. ನಿನ್ನೆ 78,000 ಇದ್ದ ಚಿನ್ನದ ಬೆಲೆ ಈಗ 77,000 ರೂ.ಗೆ ಕುಸಿದಿದೆ.
ಒಂದು ಹಂತದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಯಾವ ರೀತಿಯ ತಂತ್ರ ಅನುಸರಿಸಬೇಕು ಎಂಬ ಕುತೂಹಲ ಹಲವು ಜನರಲ್ಲಿ ಮೂಡಿದೆ. ಮತ್ತೊಂದೆಡೆ ಚಿನ್ನದ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಆಭರಣ ಖರೀದಿದಾರರಲ್ಲಿ ಆಶಾಭಾವನೆ ಮೂಡಿದೆ. 22ಕ್ಯಾರೆಟ್ ಚಿನ್ನದ ಬೆಲೆ ಮತ್ತೆ 71 ಸಾವಿರ ರೂ.ಗೆ ಕುಸಿದಿದ್ದರಿಂದ ಆಭರಣ ಖರೀದಿದಾರರ ಹೊರೆ ಕಡಿಮೆಯಾಗಿದೆ. ಭವಿಷ್ಯದಲ್ಲಿ ಚಿನ್ನದ ಬೆಲೆ ಕಡಿಮೆಯಾಗಲಿದೆಯೇ ಅಥವಾ ಏರಿಕೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.