ರಾಜ್ಯದಲ್ಲೊಂದು ತಲೆತಗ್ಗಿಸುವ ನೀಚಕೃತ್ಯ| ನಾಯಿಯ ಮೇಲೂ ‘ಅತ್ಯಾಚಾರಕ್ಕೆ’ ಯತ್ನಿಸಿದ ವಿಕೃತಕಾಮಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಾಗರೀಕತೆಯನ್ನೇ ಮರೆತ ಕೃತ್ಯವೊಂದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಚ್ಚಿಬಿಳಿಸುವ ಘಟನೆ ನಡೆದಿದ್ದು ನಾಯಿಯ ಮೇಲೆ ಕಾಮುಕನೊಬ್ಬ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಅ 18 ರಂದು ಕೊಪ್ಪ ತಾಲೂಕಿನ ಜಯಪುರ ಬಸ್‌ನಿಲ್ದಾಣದಲ್ಲಿ ನಡೆದಿದೆ.

Ad Widget ... ..

ನಾಯಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಶಿವರಾಜ್ ಎಂದು ಗುರುತಿಸಲಾಗಿದೆ. ಇದೀಗ ಶಿವರಾಜ್ ಎಂಬ ವ್ಯಕ್ತಿಯ ವಿರುದ್ಧ ಜಯಪುರ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಬೆಳಗ್ಗಿನ ಜಾವ 4 ಗಂಟೆ ವೇಳೆಗೆ ಕೃತ್ಯ ಎಸಗಿರುವುದು ಕಂಡುಬಂದಿದೆ.

Ad Widget

ಅಂಗಡಿಯ ಮುಂಭಾಗದ ಕಟ್ಟೆಯ ಮೇಲೆ ಕುಳಿತುಕೊಂಡ ವ್ಯಕ್ತಿ ಬೀದಿ ನಾಯಿಯನ್ನು ಹಿಡಿದುಕೊಂಡು ಆದರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕೃತ್ಯದ ಬಗ್ಗೆ ನವೆಂಬರ್ 9 ರಂದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಪೊಲೀಸ್ ಕಾನ್‌ಸ್ಟೇಬಲ್ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *