ಅಭಿಷೇಕ್ ಅಂಬರೀಶ್ ಮನೆಯಲ್ಲಿ ಸಂಭ್ರಮ..ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ

ಸಮಗ್ರ ನ್ಯೂಸ್: ಅಭಿಷೇಕ್‌-ಅವಿವಾ ದಂಪತಿಗೆ ಗಂಡು ಮಗು ಜನನವಾಗಿದೆ. ಇಂದು ಬೆಳಗ್ಗೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದಾರೆ. ಮೊಮ್ಮಗನ ಕಂಡು ಮಾಜಿ ಸಂಸದೆ ಸುಮಲತಾ ಅಂಬರೀಶ್‌ ಅವರು ಭಾವುಕರಾಗಿದ್ದಾರೆ. ಮೊಮ್ಮಗನನ್ನು ಎತ್ತಿ ಮುದ್ದಾಡಿದ್ದಾರೆ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ad Widget ... ..

ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರು ಜೂನ್‌ 5, 2023ರಂದು ಮದುವೆ ಆಗಿದ್ದರು. ಜೂನ್‌ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆತರಕ್ಷತೆ ಕಾರ್ಯಕ್ರಮ ನಡೆಸಿದ್ದರು. ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಜೋಡಿಗೆ ಶುಭಕೋರಿದ್ರು. ಅಷ್ಟೇ ಅಲ್ಲದೇ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟ ಕೂಡ ಹಮ್ಮಿಕೊಂಡಿದ್ರು.

Ad Widget

ಇನ್ನೂ ಸುಮಲತಾ ಅಂಬರೀಷ್ ಸೊಸೆ ಅವಿವಾ ಸೀಮಂತ ಕಾರ್ಯವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಇದೀಗ ಮತ್ತೆ ಅಂಬರೀಶ್ ಹುಟ್ಟಿ ಬಂದರು ಎನ್ನುತ್ತಿದ್ದಾರೆ ಅಭಿಮಾನಿಗಳು.

Leave a Comment

Your email address will not be published. Required fields are marked *