ಮೂಲ್ಕಿ: ಪತ್ನಿ, ಮಗುವನ್ನು ಕೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪತಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗನನ್ನು ಕೊಂದು ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

Ad Widget ... ..

ಪಕ್ಷಿಕೆರೆ ಗ್ರಾಮದಲ್ಲಿ ಕಾರ್ತಿಕ್ ಭಟ್ (32) ಪತ್ನಿ ಪ್ರಿಯಾಂಕ (28) ಪುತ್ರ ಹೃದಯ್ (4) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ವ್ಯಯಕ್ತಿಕ ಕಾರಣಕ್ಕೆ ಪತ್ನಿ ಮಗನನ್ನು ಕೊಂದು ಕಾರ್ತಿಕ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Ad Widget

ಮೊದಲು ಪತ್ನಿ ಪ್ರಿಯಾಂಕ ಹಾಗೂ ಹೃದಯ್ ನನ್ನು ಕೊಲೆ ಮಾಡಿ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೊರ ವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂದು ತನಿಖೆ ನಡೆಯುತ್ತಿದೆ.

Leave a Comment

Your email address will not be published. Required fields are marked *