Ad Widget .

ಅಜ್ಜಿಗೆ ಕ್ರಿಕೆಟ್‌ ಬ್ಯಾಟ್‌ನಿಂದ ಥಳಿಸಿದ ಮೊಮ್ಮಗ! ರಾಕ್ಷಸ ಎಂದ ನಿಟ್ಟಿಗರು

ಸಮಗ್ರ ನ್ಯೂಸ್:ವೃದ್ಧೆಯೊಬ್ಬಳಿಗೆ ಮೊಮ್ಮಗ ಕ್ರಿಕೆಟ್ ಬ್ಯಾಟ್‌ನಿಂದ ಮನಬಂದಂತೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ರಾಯ್‌ಪುರದ ಪುರಾನಿ ಬಸ್ತಿ ಪೊಲೀಸ್ ಪ್ರದೇಶದ ಅಮರ್ ಪುರಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ.

Ad Widget . Ad Widget .

ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಯುವಕ ಆಕೆಗೆ ಎಚ್ಚರಿಕೆ ನೀಡಿ ಮತ್ತೆ ಮನೆಯೊಳಗೆ ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಯಾವ ಕಾರಣಕ್ಕೆ ವೃದ್ದೆ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ನಡೆಸಿರುವುದು ಯಾವಾಗ ಎನ್ನುವ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾಕ್ಷಸ ಮೊಮ್ಮಗನ ವಿರುದ್ಧ ಕಿಡಿಕಾರಿದ್ದಾರೆ.ವಿಡಿಯೋ ವೈರಲ್ ಆಗುತ್ತಿದ್ದಂತೆ ಕುಟುಂಬದವರೆಲ್ಲರೂ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರು ಅಧಿಕಾರಿಗಳಿಗೆ ವೀಡಿಯೊವನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *