Ad Widget .

ಅವಳು ಕ್ಷೇತ್ರಕ್ಕೆ ಬರ್ಲಿ! ಕರಂದ್ಲಾಜೆ ವಿರುದ್ಧ ಏಕವಚನದಲ್ಲೇ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ಸಮಗ್ರ ನ್ಯೂಸ್:ಚನ್ನಪಟ್ಟಣ ಉಪಚನಾವಣಾ ಹಿನ್ನೆಲೆ ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಯಶವಂತಪುರದ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖ‌ರ್ ಅವರು ಪ್ರತ್ಯಕ್ಷರಾಗಿದ್ದರು. ಇದೂ ಸಾಕಷ್ಟು ಸದ್ದು
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸೋಮಶೇಖ‌ರ್ ತಾಕತ್ ಇದ್ದರೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ನಿಂದ ಗೆದ್ದು ತೋರಿಸಲಿ ಎನ್ನುವ ಮಾತುಗಳನ್ನು ಹೇಳಿದ್ದರು.

Ad Widget . Ad Widget .

ಅದಕ್ಕೆ ಪ್ರತಿಕ್ರಿಯಿಸಿರುವ ಎಸ್ ಟಿ ಸೋಮಶೇಖರ್ ಅವರು, ಶೋಭಾ ಕರಂದ್ಲಾಜೆ ಅವರ ವಿರುದ್ಧ ಏಕವಚನದಲ್ಲಿಯೇ ನಾಲಿಗೆ ಹರಿಬಿಟ್ಟಿದ್ದಾರೆ.ತಾಕತ್ ಟೆಸ್ಟ್ ಮಾಡಬೇಕಂದ್ರೆ ಕ್ಷೇತ್ರಕ್ಕೆ ಬರಲಿ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಎದುರು ಮಾತನಾಡಿದ ಸೋಮಶೇಖರ್ ಅವರು, “ನನ್ನ ತಾಕತ್ ಬಗ್ಗೆ ಅವಳು ಟೆಸ್ಟ್ ಮಾಡಬೇಕು ಅಂತಾದರೆ ಕ್ಷೇತ್ರಕ್ಕೆ ಬರಲಿ.. ಅವಳು ಸಂಸದೆ ಸ್ಥಾನಕ್ಕೆ ರಾಜೀನಾಮೆ ಕೊಡಲಿ, ನಾನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ.

Ad Widget . Ad Widget .

ಯಶವಂತಪುರದಲ್ಲಿ ಹೇಗೂ ಗೆದ್ದಿದ್ದಳಲ್ಲ ಅವಳು, ತಾಕತ್ ಇದ್ದರೆ ಯಶವಂತಪುರದಲ್ಲಿ ಅವಳೂ ನಿಲ್ಲಲಿ.. ಅವಳದ್ದು ಪಾಪದ ಕೊಡ ಇನ್ನೂ ತುಂಬಬೇಕಾಗುತ್ತದೆ. ಪಾಪದ ಕೊಡ ತುಂಬುವವರೆಗೂ ನಾನೂ ತಾಳ್ಮೆಯಿಂದ ಕಾಯುತ್ತಿದ್ದೇನೆ. ಆಮೇಲೆ ನಾನು ಮಾತನಾಡುತ್ತೇನೆ, ನನಗೆ ಏನೂ ಮಾತು ಬರಲ್ಲ ಅಂತಾ ಅಲ್ಲ.. ಅವಳ ಹತ್ತರಷ್ಟು ನಾನು ಮಾತಾಡುತ್ತೇನೆ” ಎಂದು ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಉಗಿದ ರೀತಿ ನನ್ನನ್ನು ಏನೂ ಕ್ಷೇತ್ರದಲ್ಲಿ ಕ್ಯಾಕರಿಸಿ ಉಗಿದಿಲ್ಲ, ನನ್ನ ತಾಕತ್ ಬಗ್ಗೆ, ನನ್ನ ಬಗ್ಗೆ ಮಾತಾಡುವ ಕಿಂಚಿತ್ ಯೋಗ್ಯತೆ ಇಲ್ಲ ಈ ಯಮ್ಮನಿಗೆ.. ತಾಳ್ಮೆಯಿಂದ ಇದ್ದರೆ ಸರಿ, ಇಲ್ಲದಿದ್ದರೆ ಪಾಪದ ಕೊಡ ತುಂಬುತ್ತಿದೆ, ತುಂಬಿದ ಮೇಲೆ ಹೇಳುತ್ತೇನೆ ಎಂದು ಹೇಳಿದ್ದಾರೆ.ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಪರ ಕಾಂಗ್ರೆಸ್ ದಿಗ್ಗಜರು ಚಕ್ಕರೆ ಗ್ರಾಮದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದರು. ಈ ವೇಳೆ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ದಿಢೀರ್ ಪ್ರತ್ಯಕ್ಷವಾಗಿದ್ದರು. ಚನ್ನಪಟ್ಟಣದಲ್ಲಿ ನಿನ್ನೆ ಕಾಂಗ್ರೆಸ್ ಸಭೆಗೆ ಬಂದು ಹೋಗಿದ್ದ ಸೋಮಶೇಖರ್ ಪ್ರತ್ಯಕ್ಷವಾಗಿದ್ದರು. ಚನ್ನಪಟ್ಟಣದಲ್ಲಿ ನಿನ್ನೆ ಕಾಂಗ್ರೆಸ್ ಸಭೆಗೆ ಬಂದು ಹೋಗಿದ್ದ ಸೋಮಶೇಖ‌ರ್, ಇಂದು ಡಿಸಿಎಂ ಡಿಕೆಶಿ ಜೊತೆಗಿನ ಸಭೆಯಲ್ಲಿ ಬಹಿರಂಗವಾಗಿಯೇ ಹಾಜರಾಗಿದ್ದರು.

ಯೋಗೇಶ್ವರ್ ಗೆ ಕುಮಾರಸ್ವಾಮಿ ದ್ರೋಹ ಮಾಡಿದ್ದಾರೆ.ಚನ್ನಪಟ್ಟಣದ ಚಕ್ಕರೆ ಗ್ರಾಮದ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದು, ಯೋಗೇಶ್ವ‌ರ್ ಅವರ ಮೇಲೆ ದೇವೇಗೌಡ್ರು, ಕುಮಾರಸ್ವಾಮಿ ಎಲ್ಲರೂ ದಾಳಿ ಮಾಡ್ತಿದ್ದಾರೆ. ಯೋಗೇಶ್ವರ್ ರನ್ನು ಕರೆದುಕೊಂಡು ಹೋಗಿ ಅಳಿಯನ ಎಂಪಿ ಮಾಡಿಕೊಂಡ್ರು, ಇವಾಗ ಅದೇ ಯೋಗೇಶ್ವ‌ರ್ ಅವರನ್ನ, ಅವರು ಎಂಎಲ್ ಎ ಮಾಡಬೇಕು ಅಲ್ವಾ? ಯೋಗೇಶ್ವ‌ರ್ ಗೆ ಕುಮಾರಸ್ವಾಮಿ ದ್ರೋಹ ಮಾಡಿದ್ದಾರೆ ಅಲ್ವಾ..? ಯೋಗೇಶ್ವರ್ ರನ್ನು ತೆಗೆದೇ ತೆಗಿತೀನಿ ಅಂತೀದ್ದರಲ್ಲ ದೇವೇಗೌಡ್ರೆ ಇದು ನ್ಯಾಯನಾ..? ಎಂದು ಪ್ರಶ್ನೆ ಮಾಡಿದ್ದರು.

Leave a Comment

Your email address will not be published. Required fields are marked *