Ad Widget .

ಮೀನು ಪ್ರಿಯರಿಗೆ ಗುಡ್ ನ್ಯೂಸ್|ಬಂಗುಡೆ ದರದಲ್ಲಿ ಭಾರೀ ಇಳಿಕೆ

ಸಮಗ್ರ ನ್ಯೂಸ್: ತಿಂಗಳ ಹಿಂದೆ ಕಿಲೋಗೆ 200-250 ರೂ. ದರವಿದ್ದ ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ ವಾಗಿದ್ದು, 100-150 ರೂ.ಗಳಲ್ಲಿ ದೊರೆಯುತ್ತಿದೆ. ಕೆಲವು ದಿನಗಳ ಹಿಂದೆ ಮಂಗಳೂರಿನ ಕೇಂದ್ರ ಮೀನು ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಆಗಿರುವುದೂ ಇದೆ! ವಿದೇಶಗಳಲ್ಲಿ ಬಂಗುಡೆ ಮೀನಿಗೆ ಬೇಡಿಕೆ ಕಡಿಮೆಯಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಇದಕ್ಕೆ ಮುಖ್ಯ ಕಾರಣ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಸ್ತುತ ವಿದೇಶಿ ಮಾರುಕಟ್ಟೆಯಲ್ಲಿ ಇತರ ತಳಿಯ ಮೀನಿಗೆ ಬೇಡಿಕೆ ಹೆಚ್ಚಿದ್ದು, ಬಂಗುಡೆಗೆ ಕೆಲವು ಸಮಯದಿಂದ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಮೀನು ರಫ್ತು ಸಂಸ್ಥೆಗಳು ಬಂಗುಡೆ ನಿರ್ಯಾತ ಪ್ರಮಾಣವನ್ನು ಕಡಿಮೆ ಮಾಡಿವೆ. ಹಾಗಾಗಿ ಬಂಗುಡೆ ಮೀನುಗಳು ಸ್ಥಳೀಯ ಮಾರುಕಟ್ಟೆಗೇ ಬರುತ್ತಿದೆ ಎನ್ನುತ್ತಾರೆ ಮೀನುಗಾರರು.

Ad Widget . Ad Widget . Ad Widget .

ಬಂಗುಡೆ ಬಿಟ್ಟರೆ ಇತರ ಮೀನುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೂತಾಯಿಗೆ 150 ರೂ. ದರವಿದ್ದರೆ ಮುರು, ಕಲ್ಲೂರು 200 ರೂ. ವರೆಗೆ; ಅಂಜಲ್‌ 800 ರೂ., ಮಾಂಜಿ 550  -650 ರೂ. ಆಸುಪಾಸಿನಲ್ಲಿದೆ.

ಮಾರುಕಟ್ಟೆಯಲ್ಲಿ ಬಂಗುಡೆ ಮೀನಿನ ದರ ಕಡಿಮೆ ಯಾದರೂ ಹೊಟೇಲ್‌ ದರದಲ್ಲಿ ಇಳಿಕೆಯಾಗಿ ಲ್ಲ. ಒಂದು ಬಂಗುಡೆಗೆ 150-200 ರೂ. ದರದಲ್ಲಿಯೇ ಮಾರಾಟ ನಡೆಯುತ್ತಿದೆ. ಇದರಿಂದ ಹೊಟೇಲ್‌ ಮೀನೂಟ ಮಾಡುವವರಿಗೆ ಬಂಗುಡೆ ದುಬಾರಿಯೇ ಆಗಿದೆ!

Leave a Comment

Your email address will not be published. Required fields are marked *