Ad Widget .

“ಗಂಡಾಗಿದ್ದರೆ ಪೊಲೀಸ್‌ಗೆ ಹೊಡಿ” ಎಂದ ತಾಯಿ| ತಾಯಿ ಮಾತು ವೇದವಾಕ್ಯ ಎಂದು ತಿಳಿದವ ಹೊಡೆದೇ ಬಿಟ್ಟ!! ಮುಂದೇನಾಯ್ತು?

ಸಮಗ್ರ ನ್ಯೂಸ್: ತಾಯಿ ಮತ್ತು ಮಗನ ನಡುವಿನ ಜಗಳದಿಂದ ಒಂದು ಅಹಿತಕರ ಘಟನೆ ನಡೆದಿದೆ. ಠಾಣೆಯಲ್ಲಿ ಜಗಳದ ವೇಳೆ ತಾಯಿಯ ಪ್ರಚೋದನೆಯಿಂದ ಮಗ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಹಲ್ಲೆಗೊಳಗಾದ ಪಿಎಸ್‌ಐ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ.

Ad Widget . Ad Widget .

ತಾಯಿಯ ಮಾತಿನಿಂದ ಪ್ರಚೋದನೆಗೊಂಡ ಮಗ ಮಹಿಳಾ ಪಿಎಸ್‌ಐ (PSI) ಮೇಲೆ ಹಲ್ಲೆ ಮಾಡಿದ್ದಾನೆ. ಮಧಸೂದನ್ ಹಲ್ಲೆ ಮಾಡಿದ ಆರೋಪಿ. ಬಿಇ ಡ್ರಾಪ್‌ಔಟ್ ಆಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮುಕ್ತಿನಾಥೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದಾನೆ.

Ad Widget . Ad Widget .

ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಈ ವಿಚಾರವಾಗಿ ತಾಯಿ ಸುಶೀಲಮ್ಮ ಮತ್ತು ಮಧುಸೂದನ್ ನಡುವೆ ಗಲಾಟೆ ನಡೆದಿದೆ. ಬಳಿಕ, ತಾಯಿ ಸುಶೀಲಮ್ಮ ಮಗನ ವಿರುದ್ಧ ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದಾರೆ. ನಂತರ, ಪೊಲೀಸರು ವಿಚಾರಣೆಗೆಂದು ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಪೊಲೀಸ್ ಠಾಣೆಯಲ್ಲೇ ತಾಯಿ ಮತ್ತು ಮಗ ಜಗಳವಾಡಲು ಆರಂಭಿಸಿದ್ದಾರೆ. ಈ ವೇಳೆ ಮಹಿಳಾ ಪಿಎಸ್‌ಐ ಜಯಂತಿ, ಮಧುಸೂದನ್‌ಗೆ ಗದರಿಸಿ ಒಂದೇಟು ಹೊಡೆದಿದ್ದಾರೆ.

ಈ ಸಂದರ್ಭದಲ್ಲಿ ಸುಶೀಲಮ್ಮ, “ದೂರು ಕೊಟ್ಟು ಪೊಲೀಸರಿಂದ ಹೊಡೆಸಿದರೇ, ಪೊಲೀಸರಿಗೆ ತಿರುಗಿ ಹೊಡೆಯುವೆ ಅಂತ ಹೇಳುತ್ತಿದ್ದಿಯಲ್ಲ. ಈಗ ಹೊಡಿ ನೋಡೋಣ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು. ಹೊಡಿ ಈಗ ಪೊಲೀಸರಿಗೆ ನೋಡೋಣ” ಎಂದು ಮಗ ಮಧುಸೂದನ್‌ನನ್ನು ಪ್ರಚೋದಿಸಿದ್ದಾಳೆ. ಪ್ರಚೋದನೆಗೊಂಡ ಮಧುಸೂದನ್ ಮಹಿಳಾ ಪಿಎಸ್‌ಐ ಜಯಂತಿ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳಾ ಪಿಎಸ್‌ಐ ಜಯಂತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ 10 ಗಂಟೆ ಸುಮಾರು ನೆಲಮಂಗಲ ಟೌನ್ ಠಾಣೆಯಲ್ಲಿ ಘಟನೆ ನಡೆದಿದೆ. ಮಧುಸೂದನ್ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಧುಸೂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್ ವಿರುದ್ಧ ಕಲಂ-132 121(1), 121(2),352, 54, ಜೊತೆಗೆ 3(5) ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *