Ad Widget .

ದ.ಕ ಜಿಲ್ಲೆಯಲ್ಲೂ ವಕ್ಫ್ ಬೋರ್ಡ್ ನಿಂದ ಆಸ್ತಿ ಕಬಳಿಕೆ ಆರೋಪ| ವಿಟ್ಲದಲ್ಲಿ 5.48 ಎಕ್ರೆ ಸರ್ಕಾರಿ ಭೂಮಿ ನೋಂದಣಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸರ್ಕಾರಿ ಭೂಮಿಯನ್ನು ವಕ್ಫ್ ಬೋರ್ಡ್ ಕಬಳಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬದಲ್ಲಿರುವ 5.48 ಎಕರೆ ಸರಕಾರಿ ಜಾಗವನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ನೋಂದಣಿಯಾಗಿದೆ.

Ad Widget . Ad Widget .

2018 ರಲ್ಲಿ ವಕ್ಫ್ ಕಾನೂನು ಬಳಸಿ ಈ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿದೆ. ಸರ್ವೆ ನಂಬರ್ 436\ 11 ರಲ್ಲಿರುವ 5.48 ಎಕರೆ ಸರಕಾರಿ ಜಾಗವನ್ನು ಪಹಣಿಪತ್ರದ ಕಾಲಂ 11 ರಲ್ಲಿ ವಕ್ಫ್ ಬೋರ್ಡ್ ಹೆಸರು ಬರೆಯಲಾಗಿರುವುದು ದಾಖಲೆಗಳಿಂದ ಸಾಬೀತತಾಗಿದೆ. ಪಹಣಿಪತ್ರದ ಕಾಲಂ 9 ರಲ್ಲಿ ಸರಕಾರಿ ಎಂದಿರುವ ಜಾಗ ತಿದ್ದುಪಡಿಯಾಗಿ ಅಧ್ಯಕ್ಷರು ವಿಟ್ಲ ಜುಮ್ಮಾ ಮಸೀದಿ ಗೆ ನೀಡಿರುವ ಜಾಗ ಎಂದು ನಮೂದಿಸಲಾಗಿದ್ದು ಇದು ಸಹಜವಾಗಿ ಕರಾವಳಿ ಭಾಗದಲ್ಲೂ ಆತಂಕಕ್ಕೆ ಕಾರಣವಾಗಿದೆ.

Ad Widget . Ad Widget .

ಇದಕ್ಕೆ ಕುಮ್ಮಕ್ಕು ನೀಡಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಗರಂ ಆಗಿದೆ. ವಿಟ್ಲ ಜುಮಾ ಮಸೀದಿ ಅಧ್ಯಕ್ಷರ‌ ಹೆಸರಿಗೆ 5.48 ಎಕ್ರೆ ಸರ್ಕಾರಿ ಜಮೀನು ನೊಂದಣಿ ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ್ ಅವರು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.

2018 ರಲ್ಲಿ ವಕ್ಫ್ ಬೋರ್ಡ್ ಸರಕಾರಿ ಭೂಮಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಇನ್ನು ಯಾವ ಯಾವ ಜಾಗವನ್ನು ತಮ್ಮ ವಶಕ್ಕೆ ಪಡೆದಿದೆ ಎನ್ನುವುದು ತಿಳಿಯುತ್ತಿಲ್ಲ ಆದ್ದರಿಂದ ರೈತರು ಕೂಡಲೇ ತಮ್ಮ ತಮ್ಮ ಪಹಣಿಪತ್ರಗಳನ್ನು ಪರಿಶೀಲಿಸುವುದು ಉತ್ತಮ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಜಿಲ್ಲಾಡಳಿತ ಕೂಡಲೇ ಈ‌ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *