Ad Widget .

ಉಡುಪಿ: 22 ಮಂದಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರಕಟ

ಸಮಗ್ರ ನ್ಯೂಸ್: ಯಕ್ಷಗಾನ ಕಲಾರಂಗವು ಈ ಬಾರಿ ತೆಂಕು ಹಾಗೂ ಬಡಗುತಿಟ್ಟಿನ 22 ಯಕ್ಷಗಾನ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

Ad Widget . Ad Widget .

ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಎಚ್. ನಾರಾಯಣ ಶೆಟ್ಟಿ (ಉಡುಪಿ), ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿಗೆ ದೇವದಾಸ್ ರಾವ್ (ಉಡುಪಿ), ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ.ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಸುರೇಶ್ ಕುಪ್ಪೆಪದವು (ದಕ್ಷಿಣ ಕನ್ನಡ), ಬಿ. ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಪುರಂದರ ಹೆಗಡೆ (ಶಿವಮೊಗ್ಗ), ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಗುಂಡಿಬೈಲು ನಾರಾಯಣ ಭಟ್ (ಉತ್ತರ ಕನ್ನಡ), ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿಗೆ ಅಶೋಕ ಶೆಟ್ಟಿ ಸರಪಾಡಿ (ದಕ್ಷಿಣ ಕನ್ನಡ) , ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿಗೆ ಕಿಗ್ಗ ಹಿರಿಯಣ್ಣ ಆಚಾರ್ (ಚಿಕ್ಕಮಗಳೂರು), ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಾರ್ವಿ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿಗೆ ಥಂಡಿಮನೆ ಶ್ರೀಪಾದ್ ಭಟ್ (ಉತ್ತರ ಕನ್ನಡ), ಸಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿಗೆ ಹೆರಿಯ ನಾಯ್ಕ (ಉಡುಪಿ) ಆಯ್ಕೆಯಾಗಿದ್ದಾರೆ.

Ad Widget . Ad Widget .

ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿಗೆ ಕೆ. ಬಾಬು ಗೌಡ (ದಕ್ಷಿಣ ಕನ್ನಡ), ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿಗೆ ಹಾಲಾಡಿ ಕೃಷ್ಣ ಮರಕಾಲ (ಉಡುಪಿ), ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿಗೆ ಕೃಷ್ಣ ಪೂಜಾರಿ ಚಕ್ರಮೈದಾನ (ಉಡುಪಿ), ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿಗೆ ಹಾವಂಜೆ ಮಂಜುನಾಥ ರಾವ್ (ಉಡುಪಿ), ಐರೋಡಿ ರಾಮಗಾಣಿಗ ಸ್ಮರಣಾರ್ಥ ಪ್ರಶಸ್ತಿಗೆ ಹೆರಂಜಾಲು ಗೋಪಾಲ ಗಾಣಿಗ (ಉಡುಪಿ), ಮಾನ್ಯ ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿಗೆ ರಾಧಾಕೃಷ್ಣ ನಾಯ್ಕ್ (ಉಡುಪಿ), ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿಗೆ ಶೇಣಿ ಸುಬ್ರಹ್ಮಣ್ಯ ಭಟ್ (ಕಾಸರಗೋಡು), ಕಡಂದೇಲು ಪುರುಷೋತ್ತಮ ಭಟ್ ಸ್ಮರಣಾರ್ಥ ಪ್ರಶಸ್ತಿಗೆ ಸರಪಾಡಿ ಶಂಕರ ನಾರಾಯಣ ಕಾರಂತ (ದಕ್ಷಿಣ ಕನ್ನಡ), ಕಡತೋಕ ಕೃಷ್ಣ ಭಾಗವತ ಸ್ಮರಣಾರ್ಥ ಪ್ರಶಸ್ತಿಗೆ ವೆಂಕಟ ರಾವ್ ಹೊಡಬಟ್ಟೆ (ಶಿವಮೊಗ್ಗ), ಬಿ. ಪಿ. ಕರ್ಕೇರಾ ಸ್ಮರಣಾರ್ಥ ಪ್ರಶಸ್ತಿಗೆ ರಮಾನಂದ ರಾವ್ (ದಕ್ಷಿಣ ಕನ್ನಡ), ಕೆ. ಮನೋಹರ ಸ್ಮರಣಾರ್ಥ ಪ್ರಶಸ್ತಿಗೆ ನರಸಿಂಹ ಮಡಿವಾಳ (ಉಡುಪಿ), ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿಗೆ ಅಂಬಾಪ್ರಸಾದ ಪಾತಾಳ (ದಕ್ಷಿಣ ಕನ್ನಡ), ಪ್ರಭಾವತಿ ವಿ. ಶೆಣೈ – ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿಗೆ ಗಜಾನನ ಸತ್ಯನಾರಾಣ ಭಂಡಾರಿ (ಉತ್ತರ ಕನ್ನಡ) ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗಳು ತಲಾ ₹ 20 ಸಾವಿರ ನಗದು, ಪ್ರಶಸ್ತಿ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ 17ರಂದು ಮಧ್ಯಾಹ್ನ 3ರಿಂದ 7ರ ವರೆಗೆ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಐ.ವೈ.ಸಿ ಸಭಾಂಗಣದಲ್ಲಿ ಜರಗಲಿದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *