Ad Widget .

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಬಿಕಾರಾಮ್ ಬಂಧನ!

ಸಮಗ್ರ ನ್ಯೂಸ್: ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ನಟ ಸಲ್ಮಾನ್ ಖಾನ್‌ಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ರಾಜಸ್ತಾನ ಮೂಲದ ಬಿಕಾರಾಮ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಹಾವೇರಿ ನಗರದ ಗೌಡರ ಓಣಿಯಲ್ಲಿ ಬಂಧಿಸಿದ್ದಾರೆ.

Ad Widget . Ad Widget .

ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ಸಂದೇಶ ಹಾಗೂ ಆತನ ಮೊಬೈಲ್ ಟವ‌ರ್ ಸೇರಿದಂತೆ ವಿವಿಧ ತಾಂತ್ರಿಕ ಮಾಹಿತಿಗಳನ್ನು ಸಂಗ್ರಹಿಸುತ್ತಾ ಆತನನ್ನು ಹುಡುಕಿಕೊಂಡ ಬಂದ ಮುಂಬೈ ಪೊಲೀಸರು ಸೀದಾ ಕರ್ನಾಟಕದ ಏಲಕ್ಕಿ ನಾಡು ಹಾವೇರಿಗೆ ಬಂದಿದ್ದಾರೆ. ಹಾವೇರಿ ನಗರದಲ್ಲಿನ ಗೌಡರ ಓಣಿಯಲ್ಲಿ ಬಾಡಿಗೆ ರೂಮು ಮಾಡಿಕೊಂಡು ಕೂಲಿ ಕೆಲಸ ಮಾಡುತ್ತಾ ಬಿಕಾರಾಮ್ ವಾಸವಾಗಿದ್ದನು.

Ad Widget . Ad Widget .

ಲಾರೆನ್ಸ್ ಬಿಷ್ಟೋಯಿ ಗುಂಪಿನ ಸದಸ್ಯರು ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಿಕಿ ಕೊಲೆ ಮಾಡಿದ ನಂತರ ರಾಜಸ್ಥಾನ ಮೂಲದ ಬಿಕಾರಾಮ್ 2 ಕೋಟಿ ರೂ.ಗೆ ಬೇಡಿಕೆ ಇಟ್ಟು, ಇಲ್ಲದಿದ್ದರೆ ಕೂಡ ಸಲ್ಮಾನ್ ಖಾನ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿ ಆಗಿದ್ದನು. ಕಳೆದ ಒಂದೂವರೆ ತಿಂಗಳ ಹಿಂದೆ ಬಿಕಾರಾಮ್ ಹಾವೇರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದನು.

ಲಾರೆನ್ಸ್ ಬಿಷ್ಟೋಯಿ ಸಂಗಡಿಗರು ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಿಕಿಯನ್ನು ಕೊಲೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಮುಂಬೈ ಪೊಲೀಸರಿಂದ ಸಲ್ಮಾನ್‌ ಖಾನ್‌ಗೆ ಭಾರಿ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತಿದೆ. ಅದರ ನಡುವೆ ಕೆಲವರು ಕೊಲೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡುವ ಸಂದೇಶಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊಲೆ ಬೆದರಿಕೆ ಹಾಕಿದ ಎಲ್ಲ ವ್ಯಕ್ತಿಗಳನ್ನು ಬಂಧಿಸಿ ಜೈಲೂಟ ಮಾಡಲು ಕಳಿಸುತ್ತಿದ್ದಾರೆ.

Leave a Comment

Your email address will not be published. Required fields are marked *