Ad Widget .

ಅಮೇರಿಕಾ ಅಧ್ಯಕ್ಷೀಯ ಚುನಾವಣೆ| ಮುದುಡುತ್ತಿರುವ ಕಮಲ; ಟ್ರಂಪ್ ಕಿಲಕಿಲ

ಸಮಗ್ರ ನ್ಯೂಸ್: ಯುಎಸ್​ ಅಧ್ಯಕ್ಷೀಯ ಚುನಾವಣೆಯಲ್ಲಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಅಮೆರಿಕಾ ಅಧ್ಯಕ್ಷ ಸ್ಥಾನದ ಚುನಾವಣೆಯ ಫಲಿತಾಂಶ ನಡೆಯುತ್ತಿದ್ದು, ಕ್ಷಣದಿಂದ ಕ್ಷಣಕ್ಕೆ ರೋಚಕತೆ ಪಡೆಯುತ್ತಿದೆ.

Ad Widget . Ad Widget .

ಯುಎಸ್ ಚುನಾವಣೆಯ ಫಲಿತಾಂಶಗಳಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಚುನಾವಣಾ ಮತಗಳ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗಿಂತ ಬಹಳ ಮುಂದಿದ್ದಾರೆ. ಬೆಳಗ್ಗೆ 11.45ರ ಗಂಟೆಯವರೆಗಿನ ಸುದ್ದಿ ಪ್ರಕಾರ ಕಮಲಾ ಹ್ಯಾರಿಸ್ 213 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದರೆ, ಡೊನಾಲ್ಡ್‌ ಟ್ರಂಪ್‌ 251 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದಾರೆ.

Ad Widget . Ad Widget .

ಯುಎಸ್‌ ಚುನಾವಣೆಯಲ್ಲಿ ಒಟ್ಟು 538 ಎಲೆಕ್ಟೋರಲ್ ಮತಗಳಲ್ಲಿ 270 ಮತಗಳನ್ನು ಪಡೆದವರು ಬಹುಮತ ಪಡೆಯುತ್ತಾರೆ. ಸದ್ಯದ ಟ್ರೆಂಡ್ ಪ್ರಕಾರ ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಬಹುಮತ ಪಡೆದು ಅಧಿಕಾರಕ್ಕೆ ಬರೋದು ಬಹುತೇಕ ಖಚಿತ ಎಂಬಂತೆ ಕಾಣುತ್ತಿದೆ. ಆ ಮೂಲಕ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸೋಲುವ ಸಾಧ್ಯತೆ ಗೋಚರಿಸುತ್ತಿದೆ.

ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಧ್ಯಕ್ಷೀಯ ಅಭ್ಯರ್ಥಿಗೆ ಚುನಾವಣೆಯಲ್ಲಿ ಗೆಲ್ಲಲು 270 ಅಥವಾ ಹೆಚ್ಚಿನ ಮತಗಳು ಬೇಕಾಗುತ್ತವೆ. ಒಂದು ರಾಜ್ಯದಲ್ಲಿ ಯಾವ ಪಕ್ಷ ಗೆದ್ದರೂ ಎಲ್ಲ ಮತದಾರರು ಅದಕ್ಕೆ ಸೇರುತ್ತಾರೆ. ಅಮೆರಿಕದ ಎಲ್ಲಾ ರಾಜ್ಯಗಳ ಮೇಲೆ ಕೇಂದ್ರೀಕರಿಸುವ ಬದಲು, ಅಭ್ಯರ್ಥಿಯು ಕೆಲವು ನಿರ್ದಿಷ್ಟ ರಾಜ್ಯಗಳ ಮೇಲೆ ಕೇಂದ್ರೀಕರಿಸಲು ಇದು ಕಾರಣವಾಗಿದೆ, ಇದರಿಂದಾಗಿ ಅವರ ಪಕ್ಷವು ಗೆದ್ದರೆ, ಚುನಾವಣಾ ಕಾಲೇಜಿನಲ್ಲಿ ಅದರ ಸದಸ್ಯರ ಸಂಖ್ಯೆ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಅಧ್ಯಕ್ಷ ಹುದ್ದೆಗೆ ಹತ್ತಿರವಾಗುತ್ತಾರೆ.

Leave a Comment

Your email address will not be published. Required fields are marked *