Ad Widget .

SBI ಗ್ರಾಹಕರೇ… ವಾಟ್ಸಾಪ್ ನಲ್ಲಿ ಈ ‘ಸಂದೇಶ’ ಬಂದಿದೆಯೇ? ಹಾಗಾದ್ರೆ ಈ ಸ್ಟೋರಿ ಓದಿ…

ಸಮಗ್ರ ನ್ಯೂಸ್: ನೀವು ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (SBI) ಬಳಕೆದಾರರಾಗಿದ್ದರೆ,ಬ್ಯಾಂಕ್‌ನ ಹೆಸರಿನಲ್ಲಿ ಜನರಿಗೆ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದು, ಈ ಸಂದೇಶಗಳಲ್ಲಿ ಲಿಂಕ್ ನೀಡಲಾಗುತ್ತದೆ. ಈ ಲಿಂಕ್ ಕ್ಲಿಕ್ ಮಾಡಲು ಬಳಕೆದಾರರಿಗೆ ಆಕರ್ಷಕ ಕೊಡುಗೆಗಳ ಆಮಿಷ ಒಡ್ಡಲಾಗುತ್ತಿದೆ. ಎಸ್‌ಬಿಐ ಬಳಕೆದಾರರಲ್ಲೂ ಇದೇ ರೀತಿಯ ವಂಚನೆ ನಡೆಯುತ್ತಿದೆ.

Ad Widget . Ad Widget .

ಈ ಬಗ್ಗೆ ಎಸ್‌ಬಿಐ ಬಳಕೆದಾರರಿಗೆ ಎಚ್ಚರಿಕೆಯನ್ನೂ ನೀಡಿದೆ.ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಈ ಕುರಿತು ಎಚ್ಚರಿಕೆ ನೀಡಿದ್ದು, ಈ ಸಂದೇಶಗಳನ್ನು WhatsApp ಮತ್ತು SMS ಮೂಲಕ ಕಳುಹಿಸಲಾಗುತ್ತಿದೆ. ಈ ಸಂದೇಶಗಳಲ್ಲಿ ನಿಮ್ಮ SBI ರಿವಾರ್ಡ್ ಪಾಯಿಂಟ್‌ಗಳು ಶೀಘ್ರದಲ್ಲೇ ಅವಧಿ ಮುಗಿಯುತ್ತವೆ ಮತ್ತು ನೀವು ಅವುಗಳನ್ನು ರಿಡೀಮ್ ಮಾಡಿಕೊಳ್ಳಬೇಕು ಎಂದು ಹೇಳಲಾಗುತ್ತಿದೆ. ಸಂದೇಶದಲ್ಲಿ ಲಿಂಕ್ ಕೂಡ ನೀಡಲಾಗಿದೆ.

Ad Widget . Ad Widget .

ಎಸ್‌ಬಿಐ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದರಲ್ಲಿ, ಬ್ಯಾಂಕ್ ಎಂದಿಗೂ ಅಂತಹ ಸಂದೇಶಗಳನ್ನು ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, ಈ ಸಂದೇಶಗಳಲ್ಲಿ ನೀಡಲಾದ ಲಿಂಕ್ ಅನ್ನು ನೀವು ಕ್ಲಿಕ್ ಮಾಡಬಾರದು.

SBI ತನ್ನ ಗ್ರಾಹಕರಿಗೆ ಪ್ರತಿ ವಹಿವಾಟಿನ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ.ಪ್ರತಿ ಪಾಯಿಂಟ್‌ನ ಮೌಲ್ಯ 25 ಪೈಸೆ. ಹಲವಾರು ರೀತಿಯ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ನೀವು ಇದನ್ನು ಬಳಸಬಹುದು. ಇದು ಉಡುಪು, ಚಲನಚಿತ್ರ ಟಿಕೆಟ್‌ಗಳು, ಮೊಬೈಲ್ ಅಥವಾ ಡಿಟಿಎಚ್ ರೀಚಾರ್ಜ್, ಏ‌ರ್ ಟಿಕೆಟ್‌ಗಳು, ಹೋಟೆಲ್ ಬುಕಿಂಗ್ ಇತ್ಯಾದಿಗಳಂತಹ ಅನೇಕ ವಿಷಯಗಳನ್ನು ಒಳಗೊಂಡಿದೆ.

Leave a Comment

Your email address will not be published. Required fields are marked *