Ad Widget .

ಚೂಯಿಂಗ್ ಗಮ್ ನುಂಗಿ ನಾಲ್ಕು ವರ್ಷದ ಮಗು ಸಾವು!

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಕಾಲ್ಪುರದಲ್ಲಿ ನಾಲ್ಕು ವರ್ಷದ ಮಗುವೊಂದು ಚೂಯಿಂಗ್ ಗಮ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.ರಾಹುಲ್ ಕಶ್ಯಪ್ ಅವರ ಮಗ ಎಂದು ಗುರುತಿಸಲಾದ ಮಗು ನ.03 ರಂದು ಸಂಜೆ ಚೂಯಿಂಗ್ ಗಮ್ ಖರೀದಿಸಿತ್ತು ಎಂದು ವರದಿಯಾಗಿದೆ.

Ad Widget . Ad Widget .

ಅದನ್ನು ಸೇವಿಸಿದ ಸ್ವಲ್ಪ ಸಮಯದ ನಂತರ, ಚೂಯಿಂಗ್ ಗಮ್ ಅವನ ಗಂಟಲಿನಲ್ಲಿ ಸಿಲುಕಿಕೊಂಡು, ಉಸಿರಾಟದ ತೊಂದರೆಗೆ ಕಾರಣವಾಯಿತು. ಕುಟುಂಬ ಸದಸ್ಯರು ಚೂಯಿಂಗ್ ಗಮ್ ಅನ್ನು ತೆಗೆಯಲು ಹರಸಾಹಸ ಪಟ್ಟರು, ಆದರೆ ಅದು ಸಿಲುಕಿಕೊಂಡಿತ್ತು. ತಕ್ಷಣವೇ ಹುಡುಗನನ್ನು ಕಾನ್ಸುರದ ಅತಿದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

Ad Widget . Ad Widget .

ಪ್ರಯತ್ನಗಳ ಹೊರತಾಗಿಯೂ, ಆಸ್ಪತ್ರೆ ತಲುಪುವ ಮೊದಲೇ ಮಗು ಸಾವು ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.ಘಟನೆಯನ್ನು ವಿವರಿಸಿರುವ, ರಾಹುಲ್ ಕಶ್ಯಪ್ ತನ್ನ ಮಗ ಚೂಯಿಂಗ್ ಗಮ್ ಬೇಕು ಎಂದು ಹಠ ಮಾಡುತ್ತಿದ್ದ. ಸಂಜೆ 7 ಗಂಟೆ ಸುಮಾರಿಗೆ ಆತನಿಗೆ ನೀಡಿದ ಬಳಿಕ ಅದನ್ನು ತೆಗೆದು ತಿನ್ನಲು ಆರಂಭಿಸಿದ್ದ ಎಂದಿದ್ದಾರೆ. ಪರಿಸ್ಥಿತಿ ಇಷ್ಟು ಕೈಮೀರಬಹುದು ಎಂದು ಅಂದಾಜಿರಲಿಲ್ಲ. ಆದರೆ, ಆತನ ಗಂಟಲಲ್ಲಿ ಚೂಯಿಂಗ್ ಗಮ್ ಸಿಕ್ಕಿಹಾಕಿಕೊಂಡಾಗ ಪರಿಸ್ಥಿತಿ ವೇಗವಾಗಿ ಹದಗೆಟ್ಟಿತು.

Leave a Comment

Your email address will not be published. Required fields are marked *