Ad Widget .

ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರದ ಒಳಮೊಗ್ರು ಕಾಡಿನಲ್ಲಿ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Ad Widget . Ad Widget .

ಮಹಿಳೆಯ ತಲೆಬುರುಡೆ, ಎಲೆಬುಗಳು ಮಾತ್ರ ಇದ್ದು, ನೇಣಿನ ಕುಣಿಕೆಯಲ್ಲಿ ಶವ ನೇತಾಡುತ್ತಿತ್ತು.ಮೃತ ಮಹಿಳೆಯನ್ನು ನಳಿನಿ ಎಂದು ಗುರುತಿಸಲಾಗಿದೆ. ಊರ್ವ ನಿವಾಸಿಯಾಗಿದ್ದ ನಳಿನಿ ಸಂಜೀವ್ ಎಂಬುವವರನ್ನು ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಆಗಾಗ ತಾಯಿ ಮನೆಗೆ ಹೋಗಿ ಬರುತ್ತಿದ್ದರು. ಇದ್ದಕ್ಕಿದ್ದಂತೆ ನಳಿನಿ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದರು.

Ad Widget . Ad Widget .

ಅ.8ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ನಳಿನಿ ಪತಿ ಸಂಜೀವ್ ದೂರು ದಾಖಲಿದ್ದರು. ವಿಷಯ ತಿಳಿಯುತ್ತಿದ್ದಂತೆ ನಳಿನಿ ಪೋಷಕರು ಕೂಡ ಹುಡುಕಾಟ ನಡೆಸಿದ್ದಾರೆ. ಆದರೆ ನಳಿನಿ ಸುಳಿವಿರಲಿಲ್ಲ. ಈಗ ಮನೆಯ ಎದುರಿನ ಗುಡ್ಡದಲ್ಲಿ ನಳಿನಿ ಮೃತದೇಹ ಅವಶೇಷವಾಗಿ ಪತ್ತೆಯಾಗಿದೆ. ಮರದಲ್ಲಿ ಹಗ್ಗಕ್ಕೆ ತಲೆಕೂದಲು ನೇತಾಡುತ್ತಿದ್ದು, ಕೆಳಗೆ ತ ಕೈಕಾಲಿನ ಎಲೆಬುಗಳು ಬಿದ್ದಿದ್ದವು. ಇದುಪತ್ತೆಯಾಗಿದ ಮೃತದೇಹ ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿದ್ದ ನಳಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *