ಹಿಜಾಬ್ ವಿರೋಧಿಸಿ ಬಟ್ಟೆ ಕಿತ್ತೆಸೆದ ಯುವತಿ| ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್

ಸಮಗ್ರ ನ್ಯೂಸ್: ಹಿಜಾಬ್ ವಿರೋಧಿಸಿ ಯುವತಿಯೊಬ್ಬಳು ತನ್ನ ಬಟ್ಟೆಗಳನ್ನು ತೆಗೆದು ಎಸೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕ ದೇಶಗಳಲ್ಲಿ ಹಿಜಾಬ್‌ಗೆ ವಿರೋಧ ವ್ಯಕ್ತವಾಗಿದೆ. ಈ ಪಟ್ಟಿಯಲ್ಲಿ ಇರಾನ್‌ನ ಹೆಸರೂ ಕೂಡ ಇದೆ. ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ಧರಿಸುವುದನ್ನು ಬಹಳ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ.

Ad Widget ... ..

ಇರಾನ್‌ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಹುಡುಗಿಯೊಬ್ಬಳು ಹಿಜಾಬ್ ವಿರುದ್ಧ ಪ್ರತಿಭಟಿಸಿದ್ದಾಳೆ. ತನ್ನ ಬಟ್ಟೆ ತೆಗೆದು ಅರೆ ಬೆತ್ತಲೆಯಲ್ಲಿ ಕುಳಿತಿರುವುದು ಕಂಡು ಬಂದಿದೆ. ಈ ವೀಡಿಯೋ ಇಸ್ಲಾಮಿಕ್ ದೇಶಗಳು ಸೇರಿದಂತೆ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.

Ad Widget

ಆನ್‌ಲೈನ್ ವರದಿಗಳ ಪ್ರಕಾರ ಈ ವೀಡಿಯೊ ಶನಿವಾರದಿಂದ ಸಾಕಷ್ಟು ವೈರಲ್ ಆಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದರಲ್ಲಿ ಹುಡುಗಿಯೊಬ್ಬಳು ಅರೆನಗ್ನ ಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಗೋಡೆಯ ಮೇಲೆ ಕುಳಿತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ದೇಶದಲ್ಲಿ ಕಟ್ಟುನಿಟ್ಟಾಗಿ ಅನುಸರಿಸುವ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟಿಸುವಲ್ಲಿ ಈ ಹುಡುಗಿ ಅರೆಬೆತ್ತಲೆಯಾಗಿ ಕುಳಿತಿದ್ದಾಳೆ. ಪ್ರತಿಭಟನೆ ನಡೆಸುತ್ತಿದ್ದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆದರೆ ಇರಾನಿನ ಮಾಧ್ಯಮಗಳ ಪ್ರಕಾರ, ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಈ ಕಾನೂನನ್ನು ವಿರೋಧಿಸಿ ಈ ಹುಡುಗಿ ಅರೆಬೆತ್ತಲೆಯಾಗಿ ಕುಳಿತು ಪ್ರತಿಭಟಿಸಿದ್ದಾಳೆ ಎಂದು ವರದಿಯಾಗಿದೆ. ಇದರಿಂದಾಗಿ ಯುವತಿಗೆ ಕಠಿಣ ಶಿಕ್ಷೆ ನೀಡಲಾಗಿದ್ದು ಆಕೆಯನ್ನು ಮಾನಸಿಕ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿ ಮಾಡಿವೆ.

Leave a Comment

Your email address will not be published. Required fields are marked *