ಹೆಬ್ಬೆ ಜಲಪಾತದ ಬಳಿ ಈಜಲು ಹೋಗಿ ಯುವಕ ಸಾವು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತ ವೀಕ್ಷಣೆಗೆ ಬಂದಿದ್ದ ಛತ್ತಿಸಘಡದ ಮೂಲದ ಪ್ರವಾಸಿಗ ಜಲಪಾತದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಅಮೀತ್ ಕುಮಾರ್(30)ಮೃತ ದುರ್ದೈವಿ.

Ad Widget ... ..

ಈತ ಮೂಲತಃ ಛತ್ತಿಸಘಡದವನಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದು, ಭಾನುವಾರ ಸ್ನೇಹಿತರ ಜತೆ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತಕ್ಕೆ ತೆರಳಿದ ವೇಳೆ ಜಲಪಾತದ ಸಮೀಪ ಈಜಲು ಹೋಗಿ ಸಾವನ್ನಪ್ಪಿದ್ದಾನೆ.‌ ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *