ಸಮಗ್ರ ನ್ಯೂಸ್: ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ನವೆಂಬರ್ 03 ರಿಂದ ನವೆಂಬರ್ 09 ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.
ಮೇಷ ರಾಶಿ:
ಗುರು ಎರಡನೇ ಮನೆಯಲ್ಲಿ ಬುಧ ಶುಕ್ರರು ಎಂಟನೇ ಮನೆಯಲ್ಲಿ ಶನಿ ಹನ್ನೊಂದನೇ ಮನೆಯಲ್ಲಿ, ಕೇತು ಆರನೇ ಮನೆಯಲ್ಲಿ ಇದ್ದಾರೆ. ಸಮಯ ಬಹಳ ಚೆನ್ನಾಗಿ ಇದೆ. ಅಭಿವೃದ್ಧಿ ಪರವಾಗಿ ಸಕಾರಾತ್ಮಕವಾಗಿ ಬದಲಾವಣೆಗಳು ಆಗುವ ಸಮಯ. ನಿರೀಕ್ಷೆ ಯಲ್ಲಿಇರಿ. ಅವಕಾಶಗಳು ಮನೆ ಬಾಗಿಲಿಗೆ ಬರುವ ಸಮಯ. ನಿಮಗೆ ಯಾವುದಕ್ಕೆ ಕಷ್ಟ ಕೊರತೆ ಇದೆಯೋ ಅದು ಪರಿಹಾರ ಆಗುವ ದಿನಗಳು ಸದ್ಯದಲ್ಲೇ ಇದೆ.
ವೃಷಭ ರಾಶಿ:
ರಾಹು ಹನ್ನೊಂದನೇ ಮನೆಯಲ್ಲಿ ಇರುವುದು ಬಹಳ ಶಕ್ತಿ ನಿಮಗೆ. ಹಾಗೆಯೇ ಮಂಗಳ ಮೂರನೇ ಮನೆಯಲ್ಲಿ ಇರುವುದು ಸಹ ಒಳ್ಳೆಯ ಫಲಗಳನ್ನು ನೀಡುತ್ತದೆ. ಸಹೋದರರಿಗೆ ಶುಭವಾಗುತ್ತದೆ. ಏಳರಲ್ಲಿ ಬುಧ ಶುಕ್ರ ನಿಮ್ಮ ರಾಶಿಯನ್ನೇ ನೋಡುವುದರಿಂದ ಅದು ನಿಮಗೆ ರಕ್ಷಣೆ ನೀಡುತ್ತದೆ. ಸೂರ್ಯ ಆರನೇ ಮನೆಯಲ್ಲಿ ಇದ್ದಾನೆ ಪರಾಕ್ರಮದಿಂದ ಯಾವುದೇ ಕೆಲಸ ಮಾಡಿದರೂ ಜಯ ನಿಮ್ಮದು. ಹಣದ ಹರಿವು ಉತ್ತಮವಾಗಿದೆ.
ಮಿಥುನ ರಾಶಿ:
ಎರಡನೇ ಮನೆಯಲ್ಕಿಕುಜ, ನಾಲ್ಕನೇ ಮನೆಯಲ್ಲಿ ಕೇತು, ಐದನೇ ಮನೆಯಲ್ಲಿ ಸೂರ್ಯ, ಆರನೇ ಮನೆಯಲ್ಲಿ ಬುಧ ಶುಕ್ರ, ಒಂಬತ್ತರಲ್ಲಿ ಶನಿ, ಹತ್ತರಲ್ಲಿ ರಾಹು, ಹನ್ನೆರಡನೇ ಮನೆಯಲ್ಲಿ ಗುರು ಇದ್ದಾರೆ. ಸಮಯ ಸಾಧಾರಣವಾಗಿದೆ. ದೊಡ್ಡ ಯೋಜನೆಗಳು ಯಾವುದೂ ಕೈಗೂಡುವುದಿಲ್ಲ. ಇನ್ನೂ ಕಾಯಬೇಕು. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ. ಹಣಕಾಸಿನಸ್ಥಿತಿ ಸಾಧಾರಣ. ಶ್ರಮ ಹೆಚ್ಚು ಮಾಡಬೇಕು.
ಕಟಕ ರಾಶಿ:
ಐದನೇ ಮನೆಯಲ್ಲಿ ಬುಧ ಶುಕ್ರ ಮೂರನೇ ಮನೆಯಲ್ಲಿ ಕೇತು, ಹನ್ನೊಂದನೇ ಮನೆಯಲ್ಲಿ ಗುರು, ಸಮಯ ಬಹಳ ಚೆನ್ನಾಗಿದೆ. ರಾಶಿಯಲ್ಲೇ ಕುಜ ಹಾಗೂ ನಾಲ್ಕನೇ ಮನೆಯಲ್ಲಿ ನೀಚ ಸೂರ್ಯ ಕೊಂಚ ತೊಂದರೆ ಕೊಡಬಹುದು ಕೆಲವು ದಿನಗಳಲ್ಲಿ ಅದೂ ನಿವಾರಣೆ ಆಗುತ್ತದೆ. ವಿವಾಹ ಯೋಗ್ಯರಿಗೆ ವಿವಾಹವಾಗುತ್ತದೆ, ಹೊಸ ನೌಕರಿ ಬಡ್ತಿ, ಪದವಿ ಅಧಿಕಾರ ಎಲ್ಲವೂ ಇದೆ.
ಸಿಂಹ ರಾಶಿ:
ನಾಲ್ಕನೇ ಮನೆಯಲ್ಲಿ ಬುಧ ಶುಕ್ರ ವಾಹನದಿಂದ ಲಾಭ, ಬಂಧುಗಳೊಡನೆ ಸುಸಂಬಂಧ, ಆತ್ಮೀಯರೊಡನೆ ಊಟೋಪಚಾರಗಳು, ವಿಹಾರ ಎಲ್ಲವೂ ಇದೆ. ಎರಡನೇ ಮನೆಯಲ್ಲಿ ಕೇತು ಎಂಟನೇ ಮನೆಯಲ್ಲಿ ರಾಹು ಕೊಂಚ ಆರೋಗ್ಯದಲ್ಲಿ ತೊಂದರೆ ಕೊಡುತ್ತಾರೆ. ಜಾಗ್ರತೆಯಿಂದ ಇರಿ. ಕುಟುಂಬದಲ್ಲಿ ಶಾಂತಿ ಸೌಹಾರ್ದತೆ ಕಡಿಮೆ ಇರುತ್ತದೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ಈಗ ಏನೂ ಮಾಡಬೇಡಿ ನಷ್ಟವಾಗುವ ಸಂಭವ ಇದೆ. ಕೆಲವು ದಿನಗಳು ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಬೇಡಿ.
ಕನ್ಯಾ ರಾಶಿ:
ಮೂರನೇ ಮನೆಯಲ್ಲಿ ಬುಧ ಶುಕ್ರ ಎರಡನೇ ಮನೆಯಲ್ಲಿ ಸೂರ್ಯ, ಒಂಬತ್ತನೇ ಮನೆಯಲ್ಲಿ ಗುರು, ಹನ್ನೊಂದರಲ್ಲಿ ಕುಜ ಸಮಯ ಬಹಳ ಚೆನ್ನಾಗಿದೆ. ಕೊರತೆ ಎಂದರೆ ರಾಹು ಏಳನೇ ಮನೆಯಲ್ಲಿ ಹಾಗೂ ಕೇತು ನಿಮ್ಮ ರಾಶಿಯಲ್ಲೇ ಇರುವುದು ಆರೋಗ್ಯದಲ್ಲಿ ತೀವ್ರ ಏರುಪೇರು ತೋರಿಸುತ್ತದೆ. ಕೊಂಚ ಜಾಗ್ರತೆ ವಹಿಸಿ. ಆಪರೇಷನ್ ಆಗುವುದು ಅಥವಾ ವಿಷಾಹಾರದಿಂದ ಆರೋಗ್ಯ ಹಾಳಾಗುವುದು ಮುಂತಾದ ತೊಂದರೆಗಳು ಕಾಣಿಸುತ್ತಿವೆ. ಕೇತು ನಿಮ್ಮ ರಾಶಿ ಬಿಟ್ಟು ಚಲಿಸಿದಾಗ ಪರಿಸ್ಥಿತಿ ಹಗುರವಾಗುತ್ತದೆ.
ತುಲಾ ರಾಶಿ:
ಎರಡನೇ ಮನೆಯಲ್ಲಿ ಬುಧಬಶುಕ್ರ ಇರುವು ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಧನಾಗಮನ ಚೆನ್ನಾಗಿದೆ. ಹತ್ತನೇ ಮನೆಯಲ್ಲಿ ಕುಜ ಇರುವುದು ವೃತ್ತಿಯಲ್ಲಿ ಒತ್ತಡಗಳನ್ನು ತೋರಿಸುತ್ತಿದೆ. ಆರನೇ ಮನೆಯ ರಾಹು ನಿಮಗೆ ಯಾವುದೇ ಅಡೆತಡೆಗಳನ್ನು ಎದುರಿಸುವ ಶಕ್ತಿ ಕೊಡುತ್ತಾನೆ. ಎಂಟನೇ ಮನೆಯಲ್ಲಿ ಗುರು ಇದ್ದು ಆರೋಗ್ಯ ಅಥವಾ ಮಾನಸಿಕ ಕಳವಳ ಗಾಬರಿ ಇರುತ್ತದೆ. ನಿಮಗೆ ರಾಹುಬಲ ಇರುವುದರಿಂದ ಬಂದ ಅಡೆತಡೆಗಳು ಹಾಗೆಯೇ ಕರಗಿಹೋಗುತ್ತದೆ.
ವೃಶ್ಚಿಕ ರಾಶಿ:
ನಿಮ್ಮ ರಾಶಿಯಲ್ಲೇ ಬುಧ ಶುಕ್ರ ಇದ್ದಾರೆ. ಇದು ನಿಮಗೆ ಒಂದು ಪ್ರಭಾವವಳಿಯಂತೆ ನಿಮ್ಮ ಸುತ್ತಲೂ ಒಂದು ರಕ್ಷಾ ವಲಯವನ್ನು ನಿರ್ಮಿಸುತ್ತದೆ. ಏಳನೇ ಮನೆಯ ಗುರು ನಿಮಗೆ ಇನ್ನಷ್ಟು ಶುಭ ಫಲಗಳನ್ನು ಕೊಡುತ್ತಾನೆ. ನೀವು ಮಾಡಬೇಕೆಂದುಕೊಂಡ ಕೆಲಸಗಳೆಲ್ಲ ಯಶಸ್ವಿಯಾಗಿ ನೆರವೇರುತ್ತದೆ. ಹನ್ನೊಂದನೇ ಮನೆಯ ಕೇತು ಸಹ ನಿಮಗೆ ಉಪಕಾರಿಯಾಗಿ ಧನಲಾಭವನ್ನು ಕೊಡುತ್ತಾನೆ.
ಧನಸ್ಸು ರಾಶಿ:
ಹನ್ನೊಂದನೇ ಮನೆಯಲ್ಲಿ ಸೂರ್ಯ ಮೂರನೇ ಮನೆಯಲ್ಲಿ ಶನಿ ಇಬ್ಬರೇ ಈಗ ನಿಮಗೆ ಸಹಾಯಕರು. ಧನಲಾಭ ಚೆನ್ನಾಗಿದೆ. ಮಕ್ಕಳಿಂದ ಕೊಂಚ ವಿರೋಧ ಅಥವಾ ಮಕ್ಕಳ ಅಭಿವೃದ್ಧಿಯಲ್ಲಿ ಕೊಂಚ ಹಿನ್ನಡೆ ಇರುತ್ತದೆ. ಸ್ವಲ್ಪ ದಿನ ಅಭಿವೃದ್ಧಿಗೆ ಅವಕಾಶ ಕಡಿಮೆ. ನಿಧಾನ ಪ್ರಗತಿಇರುತ್ತದೆ.
ಮಕರ ರಾಶಿ:
ಈಗ ಗುರುಬಲ ರಾಹುಬಲ ಇದೆ. ಲಾಭ ಸ್ಥಾನದಲ್ಲಿ ಬುಧ ಶುಕ್ರ ಇದ್ದಾರೆ. ಸಮಯ ಬಹಳ ಚೆನ್ನಾಗಿದೆ. ಧನಾಗಮನ ಚೆನ್ನಾಗಿದೆ. ಮಿತ್ರರಿಂದ ಉಪಕಾರ ಆಗುತ್ತದೆ. ನೌಕರಿಯಲ್ಲಿ ಯಶಸ್ಸು ಇದೆ. ಹೊಸ ನೌಕರಿ ಬಡ್ತಿ ಎಲ್ಲ ಸೌಲಭ್ಯಗಳು ಸಿಗುವ ಕಾಲ. ನೀವು ಪರಾಕ್ರಮದಿಂದ ಯಾವ ಕೆಲಸ ಮಾಡಿದರೂ ಯಶಸ್ವಿಯಾಗಿ ನೆರವೇರುತ್ತದೆ. ಐದನೇ ಮನೆಯ ಗುರು ಭಾಗ್ಯಗಳನ್ನು ಕೊಡುತ್ತಾನೆ. ಯಾವುದಾದರೂ ಹೊಸ ಯೋಜನೆ ಪ್ರಾರಂಭಿಸುವ ಸಮಯ.
ಕುಂಭ ರಾಶಿ:
ಈಗ ಯಾವುದೇ ಬಲಿಷ್ಠ ಗ್ರಹಗಳ ನೆರವು ನಿಮಗೆ ಇಲ್ಲ. ಹತ್ತನೇ ಮನೆಯಲ್ಲಿ ಬುಧಶುಕ್ರ ಇರುವುದು ಕೊಂಚ ಮಟ್ಟಿಗೆ ಸಹಾಯ ಮಾಡುತ್ತದೆ. ಆದರೆ ಗುರು ನಾಲ್ನನೇ ಮನೆಯಲ್ಲಿ ಇದ್ದು ಚಿಂತೆಗಳನ್ನು ಹೆಚ್ಚಿಸುತ್ತಾನೆ. ಕೋರ್ಟ್ ಕಚೇರಿ ಅಲೆದಾಟ ಇರುತ್ತದೆ. ಆರೋಗ್ಯ ಕೈಕೊಡಬಹುದು. ಯಾವುದೇ ಯೋಜನೆಗಳನ್ನು ಈಗ ಪ್ರಾರಂಭಿಸಬೇಡಿ. ಇದು ಸಕಾಲವಲ್ಲ. ಕೌಟುಂಬಿಕವಾಗಿಯೂ ಅಶಾಂತಿ ಇರುತ್ತದೆ. ಎಚ್ಚರಿಕೆಯಿಂದ ಮುಂದುವರೆಯಿರಿ.
ಮೀನ ರಾಶಿ:
ನೀವು ಸಹ ಸಾಡೆಸಾತಿ ಶನಿಯ ಪ್ರಭಾವದಲ್ಲಿ ಇರುವುದರಿಂದ ಮನೆಯಲ್ಲಿ ಅಶಾಂತಿ. ಆರೋಗ್ಯದ ತೊಂದರೆಗಳು ಹಣಕಾಸಿನ ಅಡಚಣೆ ಇರುತ್ತವೆ. ಕೋರ್ಟ್ ಕಚೇರಿ ಅಲೆದಾಡುವ ಪ್ರಸಂಗ ಇರುತ್ತದೆ. ಆಸ್ಪತ್ರೆಗೆ ಓಡಾಡುವ ಅವಕಾಶ ಬರುತ್ತದೆ. ಯಾವುದೇ ಸಮಸ್ಯೆಯನ್ನು ತಾಳ್ಮೆಯಿಂದ ಪರಿಹರಿಸಿಕೊಳ್ಳಿ. ಯಾವ ವಿಷಯಕ್ಕೂ ದುಡುಕಿನ ತೀರ್ಮಾನ ಬೇಡ.