Ad Widget .

ತಾಯಿಯ ನಿಧನದ ಬಳಿಕ ಮತ್ತೆ ಬಿಗ್ ಬಾಸ್ ಶೂಟಿಂಗ್ ನಲ್ಲಿ ಪಾಲ್ಗೊಂಡ ಸುದೀಪ್

ಸಮಗ್ರ ನ್ಯೂಸ್: ತಮ್ಮ ಪ್ರೀತಿಯ ತಾಯಿಯನ್ನು ಕಳೆದುಕೊಂಡ ಬಳಿಕ ಕಳೆದ 10 ದಿನಗಳಿಂದ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದ ನಟ ಕಿಚ್ಚ ಸುದೀಪ್ ಇದೀಗ ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ.

Ad Widget . Ad Widget .

ಅಮ್ಮನ ಕಳೆದುಕೊಂಡ ದುಃಖದಲ್ಲಿದ್ದ ಸುದೀಪ್ ಕಳೆದ ವಾರದ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ನಲ್ಲಿ ನಿರೂಪಣೆ ಮಾಡಿರಲಿಲ್ಲ. ಅವರ ಬದಲಿಗೆ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಎರಡು ದಿನಗಳನ್ನು ನಿಭಾಯಿಸಿದರು. ಇದೀಗ ಈ ವಾರ ಸುದೀಪ್ ಮತ್ತೆ ಎಂದಿನಂತೆ ವೀಕೆಂಡ್ ಎಪಿಸೋಡ್ ನಡೆಸಿಕೊಡಲಿದ್ದಾರೆ.

Ad Widget . Ad Widget .

ಈ ಬಗ್ಗೆ ಪ್ರೋಮೋ ಬಿಟ್ಟಿರುವ ಕಲರ್ಸ್ ವಾಹಿನಿ ವಾರದ ಕತೆ ಕಿಚ್ಚನ ಜೊತೆ ಎಂದಿದೆ. ಆದರೆ ಸುದೀಪ್ ಭಾಗಿಯಾಗಿರುವ ಪ್ರೋಮೋ ಇನ್ನೂ ಬಿಟ್ಟಿಲ್ಲ. ಆದರೆ ಈ ವಾರ ಅವರು ಬರುವುದು ಪಕ್ಕಾ ಎಂದಿದೆ. ಇತ್ತ ಸ್ಪರ್ಧಿಗಳೂ ಕಿಚ್ಚನ ಎದುರು ಹಲವು ವಿಚಾರಗಳನ್ನು ಹಂಚಿಕೊಳ್ಳಲು ಕಾಯುತ್ತಿದ್ದಾರೆ.

Leave a Comment

Your email address will not be published. Required fields are marked *