Ad Widget .

ಕರಾವಳಿಯಲ್ಲಿ ಉದ್ಯೋಗ ಸೃಷ್ಟಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ – ಡಿಸಿಎಂ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಉದ್ಯೋಗ ಸೃಷ್ಟಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕೊಂಬೆಟ್ಟು ಕಾಲೇಜು ಮೈದಾನದಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

Ad Widget . Ad Widget . Ad Widget .

ಕರಾವಳಿಗೆ ಪ್ರತ್ಯೇಕ ನೀತಿ ಹಾಗೂ ಟೂರಿಸಂ ಪಾಲಿಸಿ ರೂಪಿಸುತ್ತೇವೆ. ಮನಸ್ಸಿನ ಅಶಾಂತಿ ಸರಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕಿದೆ ಎಂದು ಅವರು ಹೇಳಿದರು.

ನಾನು ಮಾತಿನಲ್ಲಿ ಗೆಲ್ಲುವವನಲ್ಲ, ನಾನು ಕೆಲಸ ಮತ್ತು ಹೃದಯದಿಂದ ಜನರನ್ನು ಗೆಲ್ಲುತ್ತೇನೆ. ಇಡೀ ಸರ್ಕಾರ ಮತ್ತು‌ ನಾನು ನಿಮ್ಮ ಜೊತೆ ಇದ್ದೇವೆ. ಮಿತ್ರ ಅಶೋಕ್ ರೈಯವರು ಇವತ್ತು ತಂದೆ, ತಾಯಿಯನ್ನು ಸ್ಮರಿಸಿ ಧರ್ಮದ ಕೆಲಸ ಮಾಡುತ್ತಾ ಇದ್ದಾರೆ. ಅವಕಾಶವನ್ನು ಪಡೆದುಕೊಳ್ಳುವುದು ಅದೃಷ್ಟ ಅಲ್ಲ, ಅವಕಾಶ ಸೃಷ್ಟಿಸುವುದು ಬುದ್ಧಿವಂತಿಕೆ ಎಂದು ಅವರು ಹೇಳಿದರು.

ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ಇವತ್ತು ಅಶೋಕ್ ರೈ ಕುಟುಂಬ ಧರ್ಮದಿಂದ ಸಮಾಜದ ಋಣ ತೀರಿಸುತ್ತಾ ಇದ್ದಾರೆ. ನನಗೆ ಬೇರೆ ಬೇರೆ ರಾಜ್ಯದ ಹಾಗೂ ನಮ್ಮ ರಾಜ್ಯದ ಚುನಾವಣೆ ಇದೆ. ಆದರೆ ಅಶೋಕ್ ರೈ ಜೊತೆಗಿನ ನಂಟಿನ ಕಾರಣದಿಂದ ಇಲ್ಲಿಗೆ ಬಂದಿದ್ದೇನೆ. ಪುತ್ತೂರಿನ ಎಲ್ಲಾ ಧರ್ಮದವರನ್ನು ಭೇಟಿಯಾಗಿರುವುದು ನನ್ನ ಭಾಗ್ಯ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Leave a Comment

Your email address will not be published. Required fields are marked *