Ad Widget .

ಡಾಲಿ ಧನಂಜಯ ಮದುವೆ ಫಿಕ್ಸ್… ಹುಡುಗಿ ಯಾರು ಗೊತ್ತಾ..?

ಸಮಗ್ರ ನ್ಯೂಸ್: ಡಾಲಿ ಧನಂಜಯ್ ವಿವಾಹ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು, ಅವರ ಬಾಳ ಸಂಗಾತಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದೀಗ ಉತ್ತರ ಸಿಕ್ಕಿದೆ. ತಮ್ಮ ಬಾಳ ಸಂಗಾತಿಯನ್ನು ಧನಂಜಯ್ ಅವರು ಪರಿಚಯಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಧನಂಜಯ ಗುಡ್ನ್ಯೂಸ್ ಕೊಟ್ಟಿದ್ದಾರೆ. ಫೆಬ್ರವರಿ 16ರಂದು ಮದುವೆ ನಡೆಯಲಿದೆ. ಇನ್ನೂ ಮುಖ್ಯವಾಗಿ ಧನಂಜಯ್ ಮದುವೆ ಆಗುತ್ತಿರುವ ಹುಡುಗಿ ಚಿತ್ರರಂಗದವರಲ್ಲ, ಹಾಗಿದ್ರೆ ಯಾರು ಇಲ್ಲಿದೆ ನೋಡಿ ಮಾಹಿತಿ.

Ad Widget . Ad Widget .

ಡಾಲಿ ಧನಂಜಯ ಮದುವೆ ವಿಚಾರವಾಗಿ ಇದೀಗ ಉತ್ತರ ನೀಡಿದ್ದಾರೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋನ ಅವರು ಹಂಚಿಕೊಂಡಿದ್ದಾರೆ.ಡಾಲಿ ಧನಂಜಯ್ ಅವರು ವೈದ್ಯೆಯನ್ನು ಕೈ ಹಿಡಿಯುತ್ತಿದ್ದಾರೆ. ಹೌದು ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಸ್ತ್ರೀರೋಗ ತಜ್ಞೆ ಆಗಿರುವ ಧನ್ಯತಾ, ಧನಂಜಯ್ ಗೆ ಜೊತೆಯಾಗುತ್ತಿದ್ದಾರೆ. ಡಾಲಿ ಮತ್ತು ಧನ್ಯತಾ ಮಧ್ಯೆ ಅನೇಕ ವರ್ಷಗಳ ಪರಿಚಯ ಇದೆ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ.

Ad Widget . Ad Widget .

ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ವಿವಾಹ ನೆರವೇರಲಿದೆ. ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗದವರು, ರಾಜಕೀಯ ಕ್ಷೇತ್ರದವರು ಸೇರಿ ಅನೇಕ ಗಣ್ಯರು ಹಾಜರಾಗಲಿದ್ದಾರೆ. ಬೆಳಿಗ್ಗೆ ವಿವಾಹ ನಡೆಯಲಿದ್ದು, ಅದೇ ದಿನ ಅದೇ ವೇದಿಕೆ ಮೇಲೆ ಆರತಕ್ಷತೆ ಸಮಾರಂಭ ಕೂಡ ಜರುಗಲಿದೆ. ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಮೈಸೂರು ಎಮೋಷನಲಿ ಕನೆಕ್ಟ್ ಆದ ಸ್ಥಳ. ಹೀಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ

Leave a Comment

Your email address will not be published. Required fields are marked *