ಸಮಗ್ರ ನ್ಯೂಸ್: ಹಾಸನಾಂಬೆ ದೇವಿಯ ದರ್ಶನಕ್ಕೆ ನೀಡಲಾಗುತ್ತಿದ್ದ ಪಾಸ್ ನ್ನು ನಿನ್ನೆ ರದ್ದು ಮಾಡಲಾಗಿತ್ತು, ಆದಾಯದ ಆಸೆಗೆ ಜೋತುಬಿದ್ದ ಆಡಳಿತ ಮಂಡಳಿ ರದ್ದಾಗಿದ್ದ ಹಾಸನಾಂಬೆ ದರ್ಶನದ ಟಿಕೆಟ್ ಕೌಂಟರ್’ ರನ್ನು ಮತ್ತೆ ರೀ ಓಪನ್ ಮಾಡಿದೆ.ಆನ್ ಲೈನ್ ಜೊತೆಗೆ ಆಫ್ ಲೈನ್ ನಲ್ಲಿ ಈಗ 300, 400 ರೂ ಬೆಲೆಯ ವಿಶೇಷ ಪಾಸ್ ಮಾರಾಟ ಮಾಡಲಾಗುತ್ತಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಾರಿ 20 ಲಕ್ಷ ಮಂದಿ ಹಾಸನಾಂಬ ದೇವಿಯ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ಅದಕ್ಕಿಂತಲೂ ಹೆಚ್ಚು ಜನ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಗೊಂದಲ ಉಂಟಾಯಿತು. ಜನರನ್ನು ನಿಯಂತ್ರಿಸುವುದೇ ಸವಾಲಾಗಿ ಪರಿಣಮಿಸಿದ್ದು, ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿರುವ ವಿಐಪಿ ಪಾಸ್ ಗಳಿಂದ ಜಿಲ್ಲಾಡಳಿತ ಆಕ್ರೋಶಕ್ಕೆ ಗುರಿಯಾಗಿ ಕೊನೆಗೆ ಪಾಸ್ ಗಳನ್ನು ರದ್ದು ಮಾಡಲಾಗಿತ್ತು.