October 2024

ದೇಶದಲ್ಲಿ ನಡೆಯಲಿದೆ ಜನಗಣತಿ; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ನಡೆಸುವ ಜನಗಣತಿಗೆ ಸಂಬಂಧಿಸಿದಂತೆ ಇದೀಗ ಪ್ರಮುಖ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಮುಂದಿನ ವರ್ಷದಿಂದ ದೇಶದಲ್ಲಿ ಜನಗಣತಿ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿದ್ದು, ಜನಗಣತಿಯು ಮುಂದಿನ ವರ್ಷ 2025 ರಿಂದ 2026 ರವರೆಗೆ ನಡೆಯಲಿದೆ ಎನ್ನಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ಇಲ್ಲಿಯವರೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ದಶಕದ ಆರಂಭದಲ್ಲಿ ಜನಗಣತಿ ನಡೆಸಲಾಗುತ್ತಿತ್ತು.ಇನ್ನು ಮುಂದೆ 2025ರ ನಂತರ ಮುಂದಿನ ಜನಗಣತಿ 2035, 2045, 2055ರಲ್ಲಿ ಈ ರೀತಿ […]

ದೇಶದಲ್ಲಿ ನಡೆಯಲಿದೆ ಜನಗಣತಿ; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ Read More »

ಭಜನಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಕಲಾವಿದ ವೇದಿಕೆಯಲ್ಲೇ `ಹೃದಯಾಘಾತ’ದಿಂದ ಸಾವು.!

ಸಮಗ್ರ ನ್ಯೂಸ್:ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಅ 26 ರಂದು ರಾತ್ರಿ ಏರ್ಪಡಿಸಿದ್ದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೌದು, ಮೂರು ದಿನಗಳ ಕಾಲ ನಡೆದ ವೀರ ರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವದ ನಿಮಿತ್ತ ಚೆನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿನ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಜನಾ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಿತ್ತೂರು ತಾಲೂಕಿನ ಬಸಾಪುರ ಗ್ರಾಮದ ಈರಪ್ಪ ಫಕೀರಪ್ಪ ಬಬಲಿ(48) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವೇದಿಕೆಯಲ್ಲಿ ತಂಡದೊಂದಿಗೆ ಭಾಗಿಯಾಗಿದ್ದ ಈರಪ್ಪ ಅವರು

ಭಜನಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಕಲಾವಿದ ವೇದಿಕೆಯಲ್ಲೇ `ಹೃದಯಾಘಾತ’ದಿಂದ ಸಾವು.! Read More »

ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ : ಗ್ರಾಹಕರು ಪಾರಾಗಿದ್ದೇ ರೋಚಕ.!

ಸಮಗ್ರ ನ್ಯೂಸ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಪಟಾಕಿ ಅಂಗಡಿಗೆ ಬೆಂಕಿ ತಗುಲಿದ ಪ್ರಕರಣ ಬೆಳಕಿಗೆ ಬಂದಿದೆ.ಇದ್ದಕ್ಕಿದ್ದಂತೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು.ರೆಸ್ಟೋರೆಂಟ್ ಮತ್ತು 7-9 ಕಾರುಗಳು ಸುಟ್ಟುಹೋಗಿವೆ. ಮಹಿಳೆಯೊಬ್ಬರು ಗಾಯಗೊಂಡಿರುವ ಸುದ್ದಿಯೂ ಇದೆ. ಅಗ್ನಿಶಾಮಕ ದಳದ ವಾಹನಗಳು ಬೆಂಕಿ ಅವಘಡದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸುಲ್ತಾನ್ ಬಜಾ‌ರ್ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿವೆ. ನಿರಂತರವಾಗಿ ಸ್ಫೋಟಗಳು ನಡೆಯುತ್ತಿರುವುದರಿಂದ ಸ್ಥಳದಲ್ಲಿ ಉದ್ವಿಗ್ನ

ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ : ಗ್ರಾಹಕರು ಪಾರಾಗಿದ್ದೇ ರೋಚಕ.! Read More »

ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ವಿಮಾನಗಳಲ್ಲಿ ‘ಇರುಮುಡಿ’ ಕೊಂಡೊಯ್ಯಬಹುದು!

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶಬರಿಮಲೆ ದೇವಸ್ಥಾನದ ಯಾತ್ರಾರ್ಥಿಗಳಿಗೆ ವಿಮಾನ ಕ್ಯಾಬಿನ್‌ನಲ್ಲಿ ‘ಇರುಮುಡಿ’ ಕೊಂಡೊಯ್ಯಲು ವಿನಾಯಿತಿ ನೀಡಲಾಗಿದೆ. ಬಸ್ಸುಗಳು, ಕಾರುಗಳು ಮತ್ತು ರೈಲುಗಳು ಹೆಚ್ಚಾಗಿ ಶಬರಿಮಲೆಯನ್ನು ತಲುಪುತ್ತಾರೆ. ಅನೇಕ ಜನರು ಶಬರಿಮಲೆಗೆ ವಿಮಾನದಲ್ಲಿ ಹೋಗಬೇಕೆಂದು ಬಯಸುತ್ತಾರೆ, ಆದರೆ ಅವರು ಇರುಮುಡಿ ತಮ್ಮೊಂದಿಗೆ ವಿಮಾನದಲ್ಲಿ ಕೊಂಡೊಯ್ಯಲು ಬಿಡುವುದಿಲ್ಲ. ಆದರೆ, ಶಬರಿಮಲೆಗೆ ವಿಮಾನದಲ್ಲಿ ತೆರಳುವವರಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆ

ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ವಿಮಾನಗಳಲ್ಲಿ ‘ಇರುಮುಡಿ’ ಕೊಂಡೊಯ್ಯಬಹುದು! Read More »

ಕನ್ನಡ ರಾಜ್ಯೋತ್ಸವದಂದು `ಕರಾಳ ದಿನ’ ಆಚರಿಸಲು ಖಾಸಗಿ ಶಾಲೆಗಳ ನಿರ್ಧಾರ.!

ಸಮಗ್ರ ನ್ಯೂಸ್: ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ರಾಜ್ಯದ ಖಾಸಗಿ ಶಾಲೆಗಳಲ್ಲಿ ಕರಾಳ ದಿನ ಆಚರಿಸಲು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ಣಯ ಕೈಗೊಂಡಿದೆ. ಸಂಘಟನೆಯ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಮಾತನಾಡಿ, ಕನ್ನಡ ಮಾಧ್ಯಮ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿರ್ಧಾರಿಸಿದೆ. ನವೆಂಬರ್ 1ರ ರಾಜ್ಯೋತ್ಸವದಂದು ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಲಿದ್ದಾರೆ. ಶಾಲೆಗಳಿಗೆ ಮಾನ್ಯತೆ ನವೀಕರಣ, ಆರ್‌ಟಿಇಗೆ ಚಾಲನೆ,

ಕನ್ನಡ ರಾಜ್ಯೋತ್ಸವದಂದು `ಕರಾಳ ದಿನ’ ಆಚರಿಸಲು ಖಾಸಗಿ ಶಾಲೆಗಳ ನಿರ್ಧಾರ.! Read More »

ಮಾವನ ಆಸ್ತಿಯಲ್ಲಿ ಅಳಿಯನೂ ಪಾಲು ಕೇಳಬಹುದು| ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಮಾವ ಸಂಪಾದಿಸಿದ ಆಸ್ತಿಯನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಕೂಡ ಮಾವನ ಆಸ್ತಿಗೆ ಹಕ್ಕು ಸಾಧಿಸಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇರಳ ಹೈಕೋರ್ಟಿನ ಪ್ರಕಾರ, ಯಾವುದೇ ಅಳಿಯ ತನ್ನ ಮಾವನ ಆಸ್ತಿಯನ್ನು ಪಡೆದುಕೊಳ್ಳಬಹುದು. ಆದರೆ, ಇದರ ಹಿಂದೆ ವಿಶೇಷ ಕಾರಣವಿರಬೇಕು. ಮಾವ ತಾನು ಸಂಪಾದಿಸಿದ ಆಸ್ತಿಯಲ್ಲಿ ಒಂದಿಷ್ಟು ಅಥವಾ ಎಲ್ಲವನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಆಸ್ತಿಗೆ ಹಕ್ಕು ಸಾಧಿಸಬಹುದು. ಅಳಿಯನು ಮಾವನ ಆಸ್ತಿಯ ಮೇಲೆ ಹಕ್ಕು

ಮಾವನ ಆಸ್ತಿಯಲ್ಲಿ ಅಳಿಯನೂ ಪಾಲು ಕೇಳಬಹುದು| ಕೇರಳ ಹೈಕೋರ್ಟ್ ಮಹತ್ವದ ತೀರ್ಪು Read More »

ಭಾರತದಲ್ಲಿ ಇನ್ಮುಂದೆ ನಗದು ಕರೆನ್ಸಿ ಇರೋದಿಲ್ಲ| ಸ್ಪೋಟಕ ಮಾಹಿತಿ ನೀಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಸಮಗ್ರ ನ್ಯೂಸ್: ಭಾರತ ಮತ್ತೊಂದು ಹಂತದ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಇದು ಜಗತ್ತನ್ನೇ ಬೆರಗಾಗಿಸುವ ಹಾಗೂ ಅನುಸರಿಸುವ ಬದಲಾವಣೆ. ಹೌದು, ಭಾರತದಲ್ಲಿ ಇನ್ನು ನಗದು ಹಣ ಇರುವುದಿಲ್ಲ. ಆರ್‌ಬಿಐ ನೋಟು ಪ್ರಿಂಟ್ ಮಾಡುವ ಪ್ರಮೇಯವೂ ಇಲ್ಲ. ಯಾರ ಬಳಿಯೂ ನಗದು ಹಣ ಇರಲ್ಲ, ವ್ಯವಹಾರವೂ ಇರುವುದಿಲ್ಲ. ಏನಿದ್ದರೂ ಡಿಜಿಟಲ್ ಕರೆನ್ಸಿ ಮಾತ್ರ. ಈ ಮಾತನ್ನು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಕೋಲ್ಕತಾದಲ್ಲಿ ನಡೆದ ವಾರ್ಷಿಕ ಜಿ30 ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸೆಮಿನಾರ್‌ನಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್

ಭಾರತದಲ್ಲಿ ಇನ್ಮುಂದೆ ನಗದು ಕರೆನ್ಸಿ ಇರೋದಿಲ್ಲ| ಸ್ಪೋಟಕ ಮಾಹಿತಿ ನೀಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ Read More »

ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿ ಹೆಡೆ ಬಿಚ್ಚಿದ ಮರಿ ನಾಗರಾಜ

ಸಮಗ್ರ ನ್ಯೂಸ್: ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿದ ನಾಗರ ಹಾವು ಹೆಡೆ ಬಿಚ್ಚಿದ ಘಟನೆ ದಕ್ಷಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಕ್ಲಾಸ್ ರೂಂನಲ್ಲಿ ವಿದ್ಯಾಭ್ಯಾಸದಲ್ಲಿ ಮಗ್ನ ವಾಗಿರುವ ಸಂದರ್ಭ ಏಕಾಏಕಿ ನಾಗರಹಾವಿನ ಮರಿಯೊಂದು ಕ್ಲಾಸ್ ರೂಂ ಗೆ ನುಗ್ಗಿದೆ.ಬಳಿಕ ಉರಗ ತಜ್ಞರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ತೇಜಸ್ ನಾಗರಹಾವಿನ ಮರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿ ಹೆಡೆ ಬಿಚ್ಚಿದ ಮರಿ ನಾಗರಾಜ Read More »

ಅಡ್ಡ ಬಂದ ನಾಯಿಗಳಿಗೆ ಕಲ್ಲು ಹೊಡೆದ ಯುವತಿಯ ಮೇಲೆ ಹಲ್ಲೆ!

ಸಮಗ್ರ ನ್ಯೂಸ್: ಬೈಕ್‌ಗೆ ಅಡ್ಡ ಬರುತ್ತಿದ್ದ ನಾಯಿಗಳಿಗೆ ಕಲ್ಲು ಹೊಡೆದಿದ್ದಕ್ಕೆ ಯುವತಿ ಮೇಲೆ ಹಲ್ಲೆ ಈ ಘಟನೆ ಎನ್.ಆ‌ರ್.ಐ ಲೇಔಟ್‌ನ ರಿಚಿಸ್ ಗಾರ್ಡ್‌ನ 1ನೇ ಕ್ರಾಸ್‌ ಬೆಂಗಳೂರಿನಲ್ಲಿ ನಡೆದಿದೆ. ಯುವತಿ ಹೋಗುತ್ತಿದ್ದ ಗಾಡಿಗೆ ನಾಯಿಗಳು ಏಕಾಏಕಿ ಅಡ್ಡ ಬಂದಿವೆ. ನಾಯಿಗಳು ಅಡ್ಡ ಬಂದಿವೆ ಎಂದು ಯುವತಿ ಕಲ್ಲಿನಿಂದ ಹೊಡೆದಿದ್ದಾಳೆ.ಆಗ ನೀಲಿ ಬಟ್ಟದ ಶರ್ಟ್ ಧರಿಸಿದ ಯುವಕನೊಬ್ಬ ಬಂದು ಗಲಾಟೆ ಮಾಡಿದ್ದಾನೆ. ಬೈಕ್ ಕೀ ಕಿತ್ತುಕೊಂಡು ಅವಾಶ್ಯ ಶಬ್ದಗಳಿಂದ ನಿಂದಿಸಿ ಎದೆ ಮುಟ್ಟಿ ತಳ್ಳಾಡಿ ಮುಖಕ್ಕೆ ಹೊಡೆದು ಹಲ್ಲೆ

ಅಡ್ಡ ಬಂದ ನಾಯಿಗಳಿಗೆ ಕಲ್ಲು ಹೊಡೆದ ಯುವತಿಯ ಮೇಲೆ ಹಲ್ಲೆ! Read More »

ಕನ್ನಡದ ನಟನ ಮೇಲೆ ಚಿತ್ರಮಂದಿರದಲ್ಲಿ ಮಹಿಳೆಯಿಂದ ಹಲ್ಲೆ

ಸಮಗ್ರ ನ್ಯೂಸ್: ಹೈ ದರಾಬಾದ್‌ನ ಚಿತ್ರಮಂದಿರದಲ್ಲಿ ಕನ್ನಡದ ಖ್ಯಾತ ನಟ ಎನ್.ಟಿ. ರಾಮಸ್ವಾಮಿ ಅವರ ಮೇಲೆ ಮಹಿಳೆಯೊಬ್ಬರು ಓಡಿ ಬಂದು ನಟನಿಗೆ ಹೊಡೆದಿದ್ದಾರೆ.’ಲವ್ ರೆಡ್ಡಿ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ. ತೆಲುಗಿನ ‘ಲವ್ ರೆಡ್ಡಿ’ ಸಿನಿಮಾದಲ್ಲಿ ರಾಮಸ್ವಾಮಿ ಅವರು ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಅ.18 ರಂದು ಈ ಸಿನಿಮಾ ಬಿಡುಗಡೆ ಆಯಿತು.’ಲವ್‌ ರೆಡ್ಡಿ’ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರವೊಂದಕ್ಕೆ ಸಿನಿಮಾ ತಂಡದವರು ಭೇಟಿ ನೀಡಿದ್ದಾರೆ. ಸಿನಿಮಾಗೆ ಎಲ್ಲ ಕಡೆಗಳಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿರುವುದರಿಂದ

ಕನ್ನಡದ ನಟನ ಮೇಲೆ ಚಿತ್ರಮಂದಿರದಲ್ಲಿ ಮಹಿಳೆಯಿಂದ ಹಲ್ಲೆ Read More »