October 2024

Helth tips:ಬೆಣ್ಣೆ ಹಣ್ಣಿನ ಆರೋಗ್ಯ ಉಪಯೋಗಗಳು

ಇಲ್ಲಿದೆ ಸಂಪೂರ್ಣ ಮಾಹಿತಿ ಸಮಗ್ರ ನ್ಯೂಸ್:ಈ ಹಣ್ಣಿನಲ್ಲಿ ಸಾಕಷ್ಟು ಫೈಬ‌ರ್ ಅನ್ನು ಹೊಂದಿರುವುದರಿಂದ, ಅವು ಹೊಟ್ಟೆಯನ್ನು ತುಂಬಿಸುತ್ತವೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತವೆ.ಇದು ನೂರು ಗ್ರಾಂ ಕೇವಲ 160 ಕ್ಯಾಲೋರಿಯನ್ನು ಮಾತ್ರ ಹೊಂದಿದೆ.ಇದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಬೆಣ್ಣೆ ಹಣ್ಣು ಹೃದಯಾಘಾತ ಮತ್ತು ಇತರ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಬೆಣ್ಣೆ ಹಣ್ಣಿನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಿಣ್ವಗಳಿವೆ, ಇದು ಯುವಿ ಕಿರಣಗಳು ಮತ್ತು ವಿಕಿರಣದಿಂದ ಉಂಟಾಗುವ […]

Helth tips:ಬೆಣ್ಣೆ ಹಣ್ಣಿನ ಆರೋಗ್ಯ ಉಪಯೋಗಗಳು Read More »

ಇಂದಿನಿಂದ ಕುಮಾರ ಪರ್ವತ ಚಾರಣ ಆರಂಭ| ಆನ್ ಲೈನ್ ಬುಕ್ಕಿಂಗ್ ಮಾಡಿದವರಿಗಷ್ಟೇ ಚಾರಣಕ್ಕೆ ಅವಕಾಶ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರ ಪರ್ವತ ಚಾರಣ ಪಥವು ಅ.3 (ಗುರುವಾರ)ರಂದು ಮರು ಪ್ರಾರಂಭವಾಗಲಿದೆ. ಜ. 26 ಹಾಗೂ 27ರಂದು ಮಿತಿಗೂ ಮೀರಿದ ಚಾರಣಿಗರು ಆಗಮಿಸಿದ್ದ ಕಾರಣ ಜನದಟ್ಟಣೆ ಉಂಟಾಗಿತ್ತು. ಆದ್ದರಿಂದ, ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು. ಕುಮಾರ ಪರ್ವತಕ್ಕೆ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸಲು ಸ್ಥಗಿತಗೊಳಿಸಲಾಗಿದ್ದ ಚಾರಣ ನಾಳೆಯಿಂದ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

ಇಂದಿನಿಂದ ಕುಮಾರ ಪರ್ವತ ಚಾರಣ ಆರಂಭ| ಆನ್ ಲೈನ್ ಬುಕ್ಕಿಂಗ್ ಮಾಡಿದವರಿಗಷ್ಟೇ ಚಾರಣಕ್ಕೆ ಅವಕಾಶ Read More »

ಬೆಂಗಳೂರಿನಲ್ಲಿ ಧಾರಾಕಾರ ಮಳೆ.. ರಸ್ತೆಗಳು ಜಲಾವೃತ

ಸಮಗ್ರ ನ್ಯೂಸ್: ಬೆಂಗಳೂರಿನಾದ್ಯಂತ ರಾತ್ರಿ ಸುರಿದ ಮಳೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಕಾರ್ಪೋರೇಶನ್, ವಿಧಾನಸೌಧ, ಶಾಂತಿನಗರ, ಕೆ.ಆರ್.ವೃತ್ತ, ವಿಜಯನಗರ, ಯಶವಂತಪುರ, ಕಾಮಾಕ್ಷಿಪಾಳ್ಯದಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಇನ್ನು ಮನೆ ಕಡೆ ಹೊರಟಿದ್ದ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದ್ದಾರೆ, ಕೆಲ ಕಾಲ ಸವಾರರು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಗುಡುಗು ಸಿಡಿಲು ನೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ.. ರಸ್ತೆಗಳು ಜಲಾವೃತ Read More »

ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಅಕ್ರಮ ಆರೋಪ.. ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

ಸಮಗ್ರ ನ್ಯೂಸ್: ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣದ ದಾಖಲೆಯನ್ನು ಕಾಂಗ್ರೆಸ್ ಸಚಿವರು ಇದೀಗ ಬಿಡುಗಡೆ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ಸಚಿವ ಹೆಚ್.ಕೆ ಪಾಟೀಲ್ ರಿಂದ ದಾಖಲೆ ಬಿಡುಗಡೆ ಮಾಡಲಾಗಿದೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಲದಲ್ಲಿ ಏನಾಗಿತ್ತು ಎಂಬುದನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ಲೊಟ್ಟೆಗೊಲ್ಲಹಳ್ಳಿ ನೂರಾರು

ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಅಕ್ರಮ ಆರೋಪ.. ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್ Read More »

ಮೈಸೂರು: ನಾಳೆ ನಾಡಹಬ್ಬ ದಸರಾಗೆ ವಿಧ್ಯುಕ್ತ ಚಾಲನೆ| ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಾಂಸ್ಕೃತಿಕ ನಗರಿ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ನಾಳೆ ವಿಧ್ಯುಕ್ತ ಚಾಲನೆ ಸಿಗಲಿದೆ. ಈಗಾಗಲೇ ಅರಮನೆ ನಗರಿ ಮೈಸೂರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಅಕ್ಟೋಬರ್ 3ರಂದು ಚಾಮುಂಡಿಬೆಟ್ಟದಲ್ಲಿ ಬೆಳಗ್ಗೆ 9.15 ರಿಂದ 9.45ರ ನಡುವೆ ವೃಶ್ಚಿಕ ಲಗ್ನದಲ್ಲಿ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ದಸರಾ ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 3 ರಿಂದ 11ರವರೆಗೂ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಅಕ್ಟೋಬರ್ 12ರ ಶನಿವಾರ ಜಂಬೂ ಸವಾರಿ ನಡೆಯಲಿದೆ. ಮಧ್ಯಾಹ್ನ 1.41 ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ

ಮೈಸೂರು: ನಾಳೆ ನಾಡಹಬ್ಬ ದಸರಾಗೆ ವಿಧ್ಯುಕ್ತ ಚಾಲನೆ| ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಾಂಸ್ಕೃತಿಕ ನಗರಿ Read More »

ವಿಧಾನ ಪರಿಷತ್ ಉಪಚುನಾವಣೆ|ದ.ಕ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ ಆಯ್ಕೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಗೆ ಈಗಾಗಲೇ ಬಿಜೆಪಿಯಿಂದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಕೂಡ ರಾಜು ಪೂಜಾರಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಸಂಬಂಧ ಎಐಸಿಸಿ ಜನರಲ್ ಸೆಕ್ರೇಟರಿ ಕೆ.ಸಿ ವೇಣುಗೋಪಾಲ್ ಅವರು ಆದೇಶ ಹೊರಡಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯ ಮೇರೆಗೆ ರಾಜು ಪೂಜಾರಿ ಅವರನ್ನು ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದಿದ್ದಾರೆ.

ವಿಧಾನ ಪರಿಷತ್ ಉಪಚುನಾವಣೆ|ದ.ಕ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ ಆಯ್ಕೆ Read More »

ದಾವಣಗೆರೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಅಡಗಿದ್ದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದ ಪೊಲೀಸರು ಇದೀಗ ದಾವಣೆಗೆರೆಯಲ್ಲಿ ನಾಲ್ವರು ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿದ್ದಿಕಿ ಮೊಹಮ್ಮದ್ ಯಾಸಿನ್ (ಮಗ), ಜೈನಾಬಿ ನೂ‌ರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದು, ಅಲ್ತಾಫ್ ಪತ್ನಿ ಫಾತಿಮಾ ಪಾಕಿಸ್ತಾನ ಪ್ರಜೆಯಾಗಿದ್ದಾಳೆ.ದಾವಣಗೆಯಲ್ಲಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಮಹಿಳೆ ನಕಲಿ ದಾಖಲೆ ಸೃಷ್ಟಿಸಿ ಹಿಂದೂಗಳ ಹೆಸರಿನಲ್ಲಿ ವಾಸವಾಗಿದ್ದರು. ಬನ್ನೇರುಘಟ್ಟ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟ‌ರ್ ಕೃಷ್ಣಕುಮಾರ್, ಜಿಗಣಿ ಪೊಲೀಸ್‌ ಠಾಣೆ

ದಾವಣಗೆರೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್ Read More »

ನೇಪಾಳದಲ್ಲಿ ಪ್ರವಾಹ, ಭೂಕುಸಿತಕ್ಕೆ 224 ಮಂದಿ ಬಲಿ

ಸಮಗ್ರ ನ್ಯೂಸ್: ಇತ್ತೀಚಿನ ಪ್ರವಾಹ ಮತ್ತು ಭೂಕುಸಿತಗಳಲ್ಲಿ ನೇಪಾಳದಲ್ಲಿ 224 ಜನರು ಸಾವನ್ನಪ್ಪಿದ್ದಾರೆ.ಒಟ್ಟು 158 ಜನರು ಗಾಯಗೊಂಡಿದ್ದು, 24 ಜನರು ಕಾಣೆಯಾಗಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಏಕ್ ನಾರಾಯಣ್ ಆರ್ಯಲ್ ಮಂಗಳವಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್ಯಲ್, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 30,700 ಭದ್ರತಾ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ ಎಂದು ಕ್ಸಿಷ್ಣುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶೋಧ ಮತ್ತು ರಕ್ಷಣಾ ಪ್ರಯತ್ನಗಳು ಎರಡು ದಿನಗಳಲ್ಲಿ ಕೊನೆಗೊಳ್ಳಲಿವೆ ಎಂದು ಪ್ರಧಾನಿ ಕೆ.ಪಿ.ಶರ್ಮಾ ಒಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು,

ನೇಪಾಳದಲ್ಲಿ ಪ್ರವಾಹ, ಭೂಕುಸಿತಕ್ಕೆ 224 ಮಂದಿ ಬಲಿ Read More »

ಸಿದ್ದರಾಮಯ್ಯ ಶರ್ಟ್ ಗೆ ತಗುಲಿದ ಬೆಂಕಿಯ ಶಾಖ

ಸಮಗ್ರ ನ್ಯೂಸ್: ಸಿಎಂ ಸಿದ್ದದರಾಮಯ್ಯ ಅವರು ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ ವೇಳೆ ಅವಘಡವೊಂದು ಸಂಭವಿಸಿದ್ದು, ಸಿಎಂ ಸಿದ್ದರಾಮಯ್ಯ ಶರ್ಟ್ ಗೆ ಉತ್ಸವ ಜ್ಯೋತಿಯ ಬೆಂಕಿಯ ಶಾಖ ತಗುಲಿದೆ. ಸಿಎಂ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿಸುವ ವೇಳೆ ಶರ್ಟ್ ಗೆ ಬೆಂಕಿಯ ಶಾಖ ತಗುಲಿದೆ.ಕೂಡಲೇ ಗನ್ ಮ್ಯಾನ್ ಸಿಎಂ ಸಿದ್ದರಾಮಯ್ಯ ನವರನ್ನು ಸರಿಸಿದ್ದು, ಗನ್ ಮ್ಯಾನ್ ಸಮಯ ಪ್ರಜ್ಞೆಯಿಂದ ಸಿಎಂ ಸಿದ್ದರಾಮಯ್ಯನವರು ಪಾರಾಗಿದ್ಧರೆ.

ಸಿದ್ದರಾಮಯ್ಯ ಶರ್ಟ್ ಗೆ ತಗುಲಿದ ಬೆಂಕಿಯ ಶಾಖ Read More »

ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟ‌ರ್ ಪತನ, ಮೂವರ ಸಾವು

ಸಮಗ್ರ ನ್ಯೂಸ್:ಅ.2-ಖಾಸಗಿ ಹೆಲಿಕಾಪ್ಟ‌ರ್ ಪತನಗೊಂಡು ಇಬ್ಬರು ಪೈಲಟ್‌ಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಬವ್‌ಧಾನ್ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದೆ.ಹೆಲಿಕಾಪ್ಟ‌ರ್ ಪತನಗೊಂಡು ಕೂಡಲೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದೆ.ಬೆಳಗ್ಗೆ 6.45ಕ್ಕೆ ಈ ಘಟನೆ ನಡೆದಿದೆ ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ. ಪೂಣೆ ಬಳಿಯ ಆಕ್ಸ್ ಫರ್ಡ್ ಗಾಲ್ಫ್ ಕೋರ್ಸ್‌ನಲ್ಲಿರುವ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಟೇಕ್ ಆಫ್‌ಆಗಿ ಮುಂಬೈನ ಜುಹುಗೆ ತೆರಳುವಾಗ ಏಕಾಏಕಿ ನಿಯಂತ್ರಣ ಕಳೆದುಕೊಂಡು ಕೆಳಗೆ ಇಳಿದು ನೆಲಕ್ಕೆ ಅಪ್ಪಳಿಸಿದೆ ಎಂದು ಹಿಂಜೆವಾಡಿ ಪೊಲೀಸ್ ಠಾಣೆಯ

ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟ‌ರ್ ಪತನ, ಮೂವರ ಸಾವು Read More »