October 2024

ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್.. ಖಾತೆಗೆ ಬೀಳಲಿದೆ 4 ಸಾವಿರ ರೂ.

ಸಮಗ್ರ ನ್ಯೂಸ್: ಎಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಆದರೆ ಗೃಹ ಲಕ್ಷ್ಮೀಯರು ಮಾತ್ರ ಜುಲೈ ಮತ್ತು ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಹಣ ಇನ್ನೂ ಬಂದಿಲ್ಲ ಎಂಬ ಪಿಸುಮಾತುಗಳನ್ನು ಆಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರದ ವಿರುದ್ಧ ಮಹಿಳೆಯರು ಮುನಿಸಿಕೊಂಡಿದ್ದಾರೆ. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹ ಲಕ್ಷ್ಮೀಯರಿಗೆ ಗುಡ್ನ್ಯೂಸ್ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಎರಡು ಹಂತದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ […]

ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್.. ಖಾತೆಗೆ ಬೀಳಲಿದೆ 4 ಸಾವಿರ ರೂ. Read More »

ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಯ್ಕೆಭಾರತಕ್ಕೆ ಭರ್ಜರಿ ಗೆಲುವು.

ಸಮಗ್ರ ನ್ಯೂಸ್: ವಿಶ್ವ ವೇದಿಕೆಯಲ್ಲಿ ಬ್ರಿಟನ್‌ನ ಸೋಲು,ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ನ್ಯಾಯಮೂರ್ತಿ ದಲ್ವೀರ್ ಸಿಂಗ್ ಅವರು 193 ಮತಗಳಲ್ಲಿ 183 ಮತಗಳನ್ನು ಪಡೆದರು (ಪ್ರತಿ ದೇಶದಿಂದ ಒಬ್ಬರು ಪ್ರತಿನಿಧಿಸುತ್ತಾರೆ) ಮತ್ತು ಬ್ರಿಟನ್‌ನ ನ್ಯಾಯಮೂರ್ತಿ ಕ್ರಿಸ್ಟೋಫರ್ ಗ್ರೀನ್‌ವುಡ್ ಅವರನ್ನು ಸೋಲಿಸಿದರು. ಅವರು ಬ್ರಿಟನ್‌ನ ಈ ಹುದ್ದೆಯ ಮೇಲಿನ 71 ವರ್ಷಗಳ ಏಕಸ್ವಾಮ್ಯವನ್ನು ಮುರಿದರು. 11 ಸುತ್ತಿನ ಮತದಾನದಲ್ಲಿ, ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ಸಾಮಾನ್ಯ ಸಭೆಯಲ್ಲಿ 193 ಮತಗಳಲ್ಲಿ 183

ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಯ್ಕೆಭಾರತಕ್ಕೆ ಭರ್ಜರಿ ಗೆಲುವು. Read More »

ನವರಾತ್ರಿ ಮೊದಲ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ..

ಸಮಗ್ರ ನ್ಯೂಸ್: ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮನೆಗೆ ಸೆಪ್ಟೆಂಬರ್ 3ರಂದು ಮಗುವಿನ ಆಗಮನ ಆಗಿದೆ. ಈ ಖುಷಿ ಸುದ್ದಿಯನ್ನು ದಂಪತಿ ರಿವೀಲ್ ಮಾಡಿದ್ದಾರೆ. ಹರ್ಷಿಕಾಗೆ ಹೆಣ್ಣುಮಗು ಜನಿಸಿದ್ದು, ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಹೆಣ್ಣು ಮಗುವಿನ ಆಗಮನದಿಂದ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಇನ್ನೂ ಮುಖ್ಯವಾಗಿ ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗು ಜನಿಸಿದೆ ಅನ್ನೋದು ಕುಟುಂಬದ ಖುಷಿ ಹೆಚ್ಚಿಸಿದೆ. ಹರ್ಷಿಕಾ ಪೂಣಚ್ಚ & ಭುವನ್ ಅವರದ್ದು ಪ್ರೇಮ ವಿವಾಹವಾಗಿದ್ದು,

ನವರಾತ್ರಿ ಮೊದಲ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ.. Read More »

ಬೆಳ್ತಂಗಡಿ: ರಾತ್ರಿ ಅಕ್ರಮ ಗೋ ಸಾಗಾಟ ಪತ್ತೆ..!

ಸಮಗ್ರ ನ್ಯೂಸ್: ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಸ್ಥಳೀಯರ ಸಹಕಾರದೊಂದಿಗೆ ಪತ್ತೆ ಹಚ್ಚಿ ಬೆಳ್ತಂಗಡಿ ಪೊಲೀಸರು ನಾಲ್ವರು ಆರೋಪಿಗಳನ್ನು ಅ.3 ರಂದು ರಾತ್ರಿ ಬಂಧಿಸಿದ್ದಾರೆ. ಎರಡು ಪಿಕಪ್ ವಾಹನಗಳು ಹಾಗೂ ಐದು ದನಗಳನ್ನು ವಶಪಡಿಸಿಕೊಂಡಿದ್ದಾರೆ. ಮಲವಂತಿಗೆ ಗ್ರಾಮದ ಎಳನೀರು ದಿಡುಪೆ ರಸ್ತೆಯಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಬೆಳ್ತಂಗಡಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಬೆಳ್ತಂಗಡಿ: ರಾತ್ರಿ ಅಕ್ರಮ ಗೋ ಸಾಗಾಟ ಪತ್ತೆ..! Read More »

ಬಿಗ್ ಬಾಸ್ ಮನೆಯಲ್ಲಿ ಅವಘಡ| ತ್ರಿ ವಿಕ್ರಂ, ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟಾಸ್ಕ್​ ವೇಳೆ ಅವಘಡ ಸಂಭವಿಸಿದೆ. ಈ ವೇಳೆ ತ್ರಿವಿಕ್ರಂಗೆ ಗಾಯ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ವರದಿ ಆಗಿದೆ. ಟಾಸ್ಕ್ ವೇಳೆ ಆದ ಅವಘಡದಿಂದ ಇಡೀ ಬಿಗ್ ಬಾಸ್ ಮನೆ ಆತಂಕಕ್ಕೆ ಒಳಗಾಗಿದೆ. ತ್ರಿವಿಕ್ರಂ ಆದಷ್ಟು ಬೇಗ ಚೇತರಿಕೆ ಕಂಡು ಬರಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಇದೇ ವೇಳೆ ಗೋಲ್ಡ್ ಸುರೇಶ್​ಗೂ ಪೆಟ್ಟಾಗಿದೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಹಾಗೂ

ಬಿಗ್ ಬಾಸ್ ಮನೆಯಲ್ಲಿ ಅವಘಡ| ತ್ರಿ ವಿಕ್ರಂ, ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲು Read More »

ತಿರುಪತಿ ಲಡ್ಡು ವಿವಾದ| ಎಸ್ಐಟಿ ತನಿಖೆಗೆ ಸುಪ್ರೀಂ ಆದೇಶ

ಸಮಗ್ರ ನ್ಯೂಸ್: ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಎಸ್ ಐಟಿ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ವಿಶೇಷ ತನಿಖಾ ತಂಡದಲ್ಲಿ ಇಬ್ಬರು ಸಿಬಿಐ ಅಧಿಕಾರಿಗಳು, ಇಬ್ಬರು ರಾಜ್ಯ ಪೊಲೀಸ್ ಅಧಿಕಾರಿಗಳು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಹಿರಿಯ ಅಧಿಕಾರಿಗಳು ಇರಲಿದ್ದಾರೆ ಎಂದು ನ್ಯಾಯಾಲಯವು ತಿಳಿಸಿದೆ. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು, ಈ ವಿಷಯದಲ್ಲಿ ರಾಜಕೀಯ ಬಯಸುವುದಿಲ್ಲ, ಇದು ಪ್ರಪಂಚದಾದ್ಯಂತದ

ತಿರುಪತಿ ಲಡ್ಡು ವಿವಾದ| ಎಸ್ಐಟಿ ತನಿಖೆಗೆ ಸುಪ್ರೀಂ ಆದೇಶ Read More »

ಸಚಿವರೊಂದಿಗಿನ ಮಾತುಕತೆ ಸಕ್ಸಸ್| ವಾರದಿಂದ ನಡೆದ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ವಾಪಾಸ್

ಸಮಗ್ರ ನ್ಯೂಸ್: ಕಳೆದು ಒಂದು ವಾರಗಳಿಂದ ತಮ್ಮ ವಿವಿಧ ಭೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದರು. ಇಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಜೊತೆಗಿನ ಮಾತುಕತೆ ಸಕ್ಸಸ್ ಆಗಿರುವ ಕಾರಣ, ಮುಷ್ಕರವನ್ನು ವಾಪಾಸ್ ಪಡೆದಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದು, ಕಳೆದ ಒಂದು ವಾರದಿಂದ ಪ್ರತಿಭಟನೆ ನಿರತರಾಗಿದ್ದ ಗ್ರಾಮ ಆಡಳಿತ ಅಧಿಕಾರಿಗಳು ಇಂದು ನನ್ನನ್ನು ಭೇಟಿಯಾಗಿ ಚರ್ಚಿಸಿದರು. ಎಲ್ಲರೂ ಒಟ್ಟಾಗಿ ಜನಪರ ಕೆಲಸಕ್ಕೆ ಮುಂದಾಗೋಣ ಎಂಬ ಮಾತನ್ನು

ಸಚಿವರೊಂದಿಗಿನ ಮಾತುಕತೆ ಸಕ್ಸಸ್| ವಾರದಿಂದ ನಡೆದ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ವಾಪಾಸ್ Read More »

ಕೇಂದ್ರ ಸಚಿವ ಹೆಚ್‌.ಡಿ ಕುಮಾರ ಸ್ವಾಮಿ ವಿರುದ್ಧ ಎಫ್ ಐ ಆರ್ 50 ಕೋಟಿ ರೂ. ಹಣಕ್ಕೆ ಬೇಡಿಕೆ ಆರೋಪ..!

ಸಮಗ್ರ ನ್ಯೂಸ್: ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.50 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಉದ್ಯಮಿ ಹಾಗೂ ಜೆಡಿಎಸ್‌ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷ ವಿಜಯ್ ಟಾಟಾ ಎಂಬುವರು ದೂರು ನೀಡಿದ್ದರು. ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಟಿಕೆಟ್ ಫಿಕ್ಸ್ ಆಗಿದೆ. ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು 50 ಕೋಟಿ ರೂ. ಹೊಂದಿಸಿಕೊಡಬೇಕು. ಹಣ ಹೊಂದಿಸಿ ಕೊಡದಿದ್ದರೆ ನಾನು ಏನು ಮಾಡುತ್ತೇನೋ ಗೊತ್ತಿಲ್ಲ.ನೀನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ

ಕೇಂದ್ರ ಸಚಿವ ಹೆಚ್‌.ಡಿ ಕುಮಾರ ಸ್ವಾಮಿ ವಿರುದ್ಧ ಎಫ್ ಐ ಆರ್ 50 ಕೋಟಿ ರೂ. ಹಣಕ್ಕೆ ಬೇಡಿಕೆ ಆರೋಪ..! Read More »

ಮಂಗಳೂರು ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್:ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಗೋಳಿಯಂಗಡಿ ಹೌಸ್ ನಿವಾಸಿ ಅಬುತಾಹಿರ್ ಯಾನೇ ಅನ್ನಮ್ (25) ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 4 ಕೆ.ಜಿ. ಗಾಂಜಾವನ್ನು ಆರೋಪಿಸಿಯಿಂದ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಪಡೀಲ್ ಪರಿಸರದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅತನನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶಕ್ಕೆ Read More »

ರೈಲ್ವೆ ನೇಮಕಾತಿ ಪರೀಕ್ಷೆ ಮಾತ್ರವಲ್ಲ ಮುಂಬಡ್ತಿ ಪರೀಕ್ಷೆಗಳೂ ಕನ್ನಡದಲ್ಲೇ

ಸಮಗ್ರ ನ್ಯೂಸ್: ರೈಲ್ವೆ ನೇಮಕಾತಿ ಪರೀಕ್ಷೆ ಮಾತ್ರವಲ್ಲ ಮುಂಬಡ್ತಿ ಪರೀಕ್ಷೆಗಳನ್ನು ಕೂಡ ಕನ್ನಡದಲ್ಲಿ ನಡೆಸಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಘೋಷಿಸಿದ್ದಾರೆ. ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಈ ಪರೀಕ್ಷೆಗಳು ನಡೆಯುತ್ತಿತ್ತು.ಇದೀಗ ಕನ್ನಡದಲ್ಲಿ ಮುಂಬಡ್ತಿ ಪರೀಕ್ಷೆ ನಡೆಸಲಾಗುವುದು. ಕರ್ನಾಟಕದ ರೈಲ್ವೆ ಸಿಬ್ಬಂದಿಗಳಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಸಚಿವರ ಕಚೇರಿಯಿಂದ ಪ್ರಕಟಣೆ ನೀಡಲಾಗಿದೆ.

ರೈಲ್ವೆ ನೇಮಕಾತಿ ಪರೀಕ್ಷೆ ಮಾತ್ರವಲ್ಲ ಮುಂಬಡ್ತಿ ಪರೀಕ್ಷೆಗಳೂ ಕನ್ನಡದಲ್ಲೇ Read More »