October 2024

ಮೈಸೂರು ಜಂಬೂ ಸವಾರಿಯಲ್ಲಿ ತೇಜಸ್ವಿ ಪ್ರತಿಷ್ಠಾನ, ತೇಜಸ್ವಿ ವಿಸ್ಮಯ ಲೋಕದ ಅನಾವರಣ

ಸಮಗ್ರ ನ್ಯೂಸ್: ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ತೇಜಸ್ವಿ ಪ್ರತಿಷ್ಠಾನ, ತೇಜಸ್ವಿ ವಿಸ್ಮಯ ಲೋಕದ ಸ್ತಬ್ದಚಿತ್ರ ಪ್ರದರ್ಶನಗೊಳ್ಳಲಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಜಿಲ್ಲಾ‌ ಪಂಚಾಯತಿ ವತಿಯಿಂದ ಈ ಬಾರಿ ತೇಜಸ್ವಿ ಪ್ರತಿಷ್ಠಾನ, ತೇಜಸ್ವಿ ವಿಸ್ಮಯ ಲೋಕದ ಸ್ತಬ್ಧ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಕೊಟ್ಟಿಗೆಹಾರದ  ತೇಜಸ್ವಿ ಪ್ರತಿಷ್ಠಾನದ ಕಟ್ಟಡ, ತೇಜಸ್ವಿ ಅವರ ಪ್ರತಿಮೆ, ಹಾರುವ ಓತಿ, ಪಶ್ಚಿಮ ಘಟ್ಟದಲ್ಲಿ ಕಾಣ ಸಿಗುವ ಕಪ್ಪೆ, ವಿವಿಧ ಬಗ್ಗೆ ಕೀಟಗಳು, ಹಕ್ಕಿಗಳು, ತೇಜಸ್ವಿ ಅವರ ಸಾಕುನಾಯಿ ಕಿವಿ, ಮೀನು […]

ಮೈಸೂರು ಜಂಬೂ ಸವಾರಿಯಲ್ಲಿ ತೇಜಸ್ವಿ ಪ್ರತಿಷ್ಠಾನ, ತೇಜಸ್ವಿ ವಿಸ್ಮಯ ಲೋಕದ ಅನಾವರಣ Read More »

ಮೈಸೂರಿನಿಂದ ಚೆನ್ನೈಗೆ ಹೊರಟಿದ್ದ ರೈಲು ಗೂಡ್ಸ್ ರೈಲಿಗೆ ಡಿಕ್ಕಿ| ಹಲವು ಪ್ರಯಾಣಿಕರಿಗೆ ಗಾಯ

ಸಮಗ್ರ ನ್ಯೂಸ್: ಮೈಸೂರಿನಿಂದ ದರ್ಬಾಂಗ್‌ ಗೆ ತೆರಳುತ್ತಿದ್ದ Mysuru-Darbhanga Express ರೈಲು, ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿರುವ ಘಟನೆ ಇಂದು ಸಂಜೆ ನಡೆದಿದೆ. ತಮಿಳುನಾಡಿನ ಚೆನ್ನೈ ರೈಲ್ವೇ ವಿಭಾಗದ ಗುಮ್ಮಿಡಿಪೊಂಡಿ ಬಳಿಯ ಕವರಪೇಟೈ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ Mysuru-Darbhanga Express ರೈಲಿನ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅಪಘಾತದ ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರು ಚಿತ್ರ

ಮೈಸೂರಿನಿಂದ ಚೆನ್ನೈಗೆ ಹೊರಟಿದ್ದ ರೈಲು ಗೂಡ್ಸ್ ರೈಲಿಗೆ ಡಿಕ್ಕಿ| ಹಲವು ಪ್ರಯಾಣಿಕರಿಗೆ ಗಾಯ Read More »

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ| ಕೊಲೆ ಮಾಡಿ ನಾಪತ್ತೆ ನಾಟಕ ಸೃಷ್ಟಿಸಿದ್ದ ಆರೋಪಿ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಬಿದಿರುತಳ ಎಂಬಲ್ಲಿ 2021 ರ ನವೆಂಬರ್ 27 ರಂದು ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಕೊಲೆಯಾದ ನಾಗೇಶ್ ಆಚಾರ್ ಸಾಲ ವಾಪಸ್ಸು ಕೇಳಿದ್ದಕ್ಕೆ ಕಾರ್ಪೆಂಟರ್ ನಾಗೇಶ್ ಆಚಾರ್ ಎಂಬುವವರನ್ನು  2021 ರ ನ.27 ರಂದು ರಾತ್ರಿ ಮೂಡಿಗೆರೆ ತಾಲ್ಲೂಕ್ ಬಿದುರುತಳ ಅರಣ್ಯ ಪ್ರದೇಶದಲ್ಲಿ ಬಂದೂಕಿನಿಂದ ಗುಂಡು ಹಾರಿಸಿ, ಕೊಲೆ ಮಾಡಿ ಹೆಣ ಹೂತು ಹಾಕಿದ್ದ ಪ್ರಕರಣದಲ್ಲಿನ

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ| ಕೊಲೆ ಮಾಡಿ ನಾಪತ್ತೆ ನಾಟಕ ಸೃಷ್ಟಿಸಿದ್ದ ಆರೋಪಿ Read More »

ಹಿರಿಯ ಕ್ರೈಂ ಪತ್ರಕರ್ತ ಗಣೇಶ್ ಇನ್ನಿಲ್ಲ

ಸಮಗ್ರ ನ್ಯೂಸ್: ಕಳೆದ 20 ವರ್ಷಗಳಿಂದ ಕರ್ನಾಟಕ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ರೈಂ ಗಣೇಶ್ ಎಂದು ಖ್ಯಾತರಾಗಿದ್ದ ಪತ್ರಕರ್ತ ಗಣೇಶ್ ಅಸುನೀಗಿದ್ದಾರೆ. ಅವರು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಬೆಂಗಳೂರಿನ ಜೈನ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕ್ರೈಂ ಗಣೇಶ್, ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ್ಮ ದಂಪತಿ ಪುತ್ರರಾಗಿದ್ದರು. ಅವರು ಪತ್ನಿ ಪಾರ್ವತಮ್ಮ ಹಾಗೂ ಪುತ್ರನನ್ನು ಅಗಲಿದ್ದಾರೆ. ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್‌ ಎಂದು ಪರಿಚಿತರಾಗಿದ್ದ ಗಣೇಶ್‌ ಅವರ

ಹಿರಿಯ ಕ್ರೈಂ ಪತ್ರಕರ್ತ ಗಣೇಶ್ ಇನ್ನಿಲ್ಲ Read More »

ಬೆಳ್ಳಾರೆ: ಪ್ರಸಾದ್ ಟೆಕ್ಸ್ ಟೈಲ್ಸ್ ಮದುವೆ, ಹಬ್ಬಗಳ ಸಂಭ್ರಮಕ್ಕೆ ವಿಶೇಷ ರಿಯಾಯಿತಿ ಮಾರಾಟ

ಸಮಗ್ರ ನ್ಯೂಸ್: ಒಂದೇ ಸೂರಿನಡಿ ಖ್ಯಾತ ಕಂಪನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಮದುವೆ ಜವುಳಿ ಮಳಿಗೆಯೆಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿರುವ, ಜವುಳಿ ಉದ್ಯಮದಲ್ಲಿ ಸದಾ ಹೊಸ ಸಂಗ್ರಹದ ಅನ್ವೇಷಣೆ ಮತ್ತು ಹೊಸತನ ಪರಿಚಯಿಸುತ್ತಾ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ಮದುವೆ ಸಂಭ್ರಮ ಮತ್ತು ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ಸಂತಸದ ಕ್ಷಣಗಳನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ 5 ರಿಂದ 10% ವಿಶೇಷ ರಿಯಾಯಿತಿ ಸೇಲ್ ಪ್ರಾರಂಭಗೊಂಡಿದೆ. 1972 ರಲ್ಲಿ

ಬೆಳ್ಳಾರೆ: ಪ್ರಸಾದ್ ಟೆಕ್ಸ್ ಟೈಲ್ಸ್ ಮದುವೆ, ಹಬ್ಬಗಳ ಸಂಭ್ರಮಕ್ಕೆ ವಿಶೇಷ ರಿಯಾಯಿತಿ ಮಾರಾಟ Read More »

ಬಿಗ್ ಬಾಸ್ ಮನೆಯಲ್ಲಿ ಎಮರ್ಜೆನ್ಸಿ ಸೈರನ್|ಬದಲಾಯಿತು ಸ್ವರ್ಗ- ನರಕ ಆಟದ ಶೈಲಿ

ಸಮಗ್ರ ನ್ಯೂಸ್: ಬಿಗ್ ಬಾಸ್ ಮನೆಯಲ್ಲಿ ಇದೀಗ ಎಮರ್ಜೆನ್ಸಿ ಸೈರನ್ ಮೊಳಗಿದೆ. ಈ ಸೈರನ್ ಗೆ ಒಂದು ಕ್ಷಣಕ್ಕೆ ಎಲ್ಲಾ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದು, ಮನೆಯಲ್ಲಿ ಏನಾಗ್ತಿದೆ ಅನ್ನೋ ಆತಂಕದಿಂದ ಕಿರುಚಾಡಿದ್ದಾರೆ. ಹೌದು, ಇಂದು ಬೆಳ್ಳಂಬೆಳಗ್ಗೆ ಪ್ರೊಮೋ ಬಿಟ್ಟಿದ್ದು ಈಮೂಲಕ ಬಿಗ್ಬಾಸ್ ವೀಕ್ಷಕರ ಕುತೂಹಲವನ್ನು ಹೆಚ್ಚಿಸಿದ್ದಾರೆ. ಪ್ರೋಮೊದಲ್ಲೇನಿದೆ..? ಬಿಗ್ಬಾಸ್ ಮನೆಯಲ್ಲಿ ಸೈರನ್ ಆಗಿದೆ. ಇದರಿಂದ ಸ್ಪರ್ಧಿಗಳು ಬೆಚ್ಚಿ ಬಿದ್ದು ಓಡಿ ಬಂದು ಎಲ್ಲರೂ ಒಟ್ಟಾಗಿ ನಿಂತಿದ್ದಾರೆ. ಕ್ರೇನ್ನಿಂದ ಏನೋ ತೆಗಿತಾ ಇದ್ದಾರೆ, ಏಯ್ ಯಾರು? ಏನಿದು’ ಅಂತಾ ಆತಂಕದಿಂದ

ಬಿಗ್ ಬಾಸ್ ಮನೆಯಲ್ಲಿ ಎಮರ್ಜೆನ್ಸಿ ಸೈರನ್|ಬದಲಾಯಿತು ಸ್ವರ್ಗ- ನರಕ ಆಟದ ಶೈಲಿ Read More »

ಮಗುವಿನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ

ಸಮಗ್ರ ನ್ಯೂಸ್: ಇತ್ತೀಚೆಗಷ್ಟೇ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿಗೆ ಗಂಡು ಮಗುವಿನ ಜನನವಾಗಿತ್ತು. ಮಗುವಿನ ಮುಖವನ್ನು ರಿವೀಲ್ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದರು. ಈ ಕೋರಿಕೆಯನ್ನು ಅವರು ಈಡೇರಿಸಿದ್ದಾರೆ. ಸ್ವತಃ ಕವಿತಾ ಗೌಡ ಅವರೇ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಹೆಚ್ಚು ಲೈಕ್ಸ್ ಸಿಕ್ಕಿದೆ. ಲಕ್ಷ್ಮೀ ಬಾರಮ್ಮ’ದಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡಿದ್ದ ಚಂದನ್ ಕವಿತಾ. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ನಂತರ ಮದುವೆ ಆಗುವ

ಮಗುವಿನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ Read More »

ಟಾಟಾ ಗ್ರೂಪ್ ನ ಅಧ್ಯಕ್ಷರಾಗಿ ನೋಯಲ್ ಟಾಟಾ ನೇಮಕ

ಸಮಗ್ರ ನ್ಯೂಸ್: ಟಾಟಾ ಗ್ರೂಪ್ ಗೆ ಹೊಸ ವಾರಸುದಾರರ ಆಯ್ಕೆಯಾಗಿದೆ. ಟಾಟಾ ಟ್ರಸ್ಟ್ ಗಳ ಮುಖ್ಯಸ್ಥರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಇಂದು(ಅ.12) ಶುಕ್ರವಾರ ಟಾಟಾ ಟ್ರಸ್ಟ್ ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ಒಮ್ಮತದಿಂದ ನೋಯಲ್ ಅವರ ಪರವಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟಾಟಾ ಗ್ರೂಪ್ ನ ಮಾಲೀಕ ಸಂಸ್ಥೆಯಾದ ಟಾಟಾ ಸನ್ಸ್ ನಲ್ಲಿ ಟಾಟಾ ಟ್ರಸ್ಟ್ ಗಳು ಬಹುಪಾಲು ಷೇರುದಾರಿಕೆ ಹೊಂದಿವೆ. ಈ ಮೂಲಕ ಟಾಟಾ ಗ್ರೂಪ್ ನ ಒಡೆತನ ನೋಯಲ್ ಟಾಟಾಗೆ

ಟಾಟಾ ಗ್ರೂಪ್ ನ ಅಧ್ಯಕ್ಷರಾಗಿ ನೋಯಲ್ ಟಾಟಾ ನೇಮಕ Read More »

ಬೆಳ್ತಂಗಡಿ: ಡಿವೈಡರ್ ಗೆ ಡಿಕ್ಕಿ ಹೊಡೆದು‌ ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಡಿವೈಡರ್‌ಗೆ ಬೈಕ್‌ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಶಕ್ತಿನಗರದ ಬಳಿ ಅಕ್ಟೋಬರ್ 10 ರಂದು ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್‌ (30) ಎಂದು ಗುರುತಿಸಲಾಗಿದೆ. ಸುಧೀಶ್‌ ಅವರು ಯಾವುದೋ ಕಾರ್ಯನಿಮಿತ್ತ ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ನಡೆದಿದೆ. ಈ ಅವಘಡದಲ್ಲಿ ಸುಧೀಶ್ ಅವರ ತಲೆಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಧೀಶ್‌ ಅವರು ಪೈಂಟಿಂಗ್‌ ವೃತ್ತಿ ನಡೆಸುತ್ತಿದ್ದರು.

ಬೆಳ್ತಂಗಡಿ: ಡಿವೈಡರ್ ಗೆ ಡಿಕ್ಕಿ ಹೊಡೆದು‌ ಬೈಕ್ ಸವಾರ ಸಾವು Read More »

ಮಹಾರಾಷ್ಟ್ರ: ನಾಸಿಕ್‌ನ ಫಿರಂಗಿ ಕೇಂದ್ರದಲ್ಲಿ ಶೆಲ್ ಸ್ಫೋಟ| ಇಬ್ಬರು ಅಗ್ನಿವೀರರು ಸಾವು

ಸಮಗ್ರ ನ್ಯೂಸ್: ಮಹಾರಾಷ್ಟ್ರದ ನಾಸಿಕ್’ನ ಫಿರಂಗಿ ಕೇಂದ್ರದಲ್ಲಿ ತರಬೇತಿ ಅಭ್ಯಾಸದ ವೇಳೆ ಭಾರತೀಯ ಫೀಲ್ಡ್ ಗನ್ ನಿಂದ ಬಂದ ಶೆಲ್ ಸ್ಫೋಟಗೊಂಡು ಇಬ್ಬರು ಅಗ್ನಿವೀರರು ಸಾವನ್ನಪ್ಪಿದ್ದಾರೆ. ನಾಸಿಕ್ ರಸ್ತೆ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿವೀರರನ್ನು 20 ವರ್ಷದ ಗೋಹಿಲ್ ವಿಶ್ವರಾಜ್ ಸಿಂಗ್ ಮತ್ತು 21 ವರ್ಷದ ಸೈಫತ್ ಎಂದು ಗುರುತಿಸಲಾಗಿದೆ. ಗುಂಡಿನ ಚಕಮಕಿಯ ವೇಳೆ ಶೆಲ್ ಸ್ಫೋಟಗೊಂಡು ಇಬ್ಬರಿಗೂ ಗಾಯಗಳಾಗಿವೆ. ಅವರನ್ನು ಡಿಯೋಲಾಲಿಯ ಎಂಎಚ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ

ಮಹಾರಾಷ್ಟ್ರ: ನಾಸಿಕ್‌ನ ಫಿರಂಗಿ ಕೇಂದ್ರದಲ್ಲಿ ಶೆಲ್ ಸ್ಫೋಟ| ಇಬ್ಬರು ಅಗ್ನಿವೀರರು ಸಾವು Read More »