October 2024

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ| ಅ.22ರವರೆಗೆ ಭಾರೀ ಮಳೆ‌ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯ ಚಂಡಮಾರುತದ ಪ್ರಭಾವ ಕಡಿಮೆಯಾಗಿದ್ದರೂ, ಅರಬ್ಬೀ ಸುಮುದ್ರದಲ್ಲಿನ ಚಂಡಮಾರುತ ಚುರುಕು ಪಡೆದಿದೆ. ಇದರಿಂದ ಕರಾವಳಿ ಮತ್ತು ಒಳನಾಡಿನಲ್ಲಿ ವಾಯುಭಾರ ಕುಸಿತ ಮುಂದುವರೆದಿದೆ. ಅ.21 ರಿಂದ 22 ರವರೆಗೆ ರಾಜ್ಯದ 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗು ಚಿತ್ರದುರ್ಗ ತುಮಕೂರು ಜಿಲ್ಲೆಗಳಿಗೆ ಅ.20 ರಿಂದ 22 ರವರೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇನ್ನು […]

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ| ಅ.22ರವರೆಗೆ ಭಾರೀ ಮಳೆ‌ ಮುನ್ಸೂಚನೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಶರದ್ ಋತು ಆಶ್ವಯುಜ ಮಾಸದ ಶುಕ್ಲಪಕ್ಷ ಏಕಾದಶಿಯಿಂದ ಬಹುಳ ತದಿಗೆಯವರೆಗೆ ಅಂದರೆ 13.10.24 ರಿಂದ 20.10.24 ವರೆಗೆ, ಈ ವಾರದ ಚಂದ್ರನ ಸಂಚಾರ ಧನಿಷ್ಠ ನಕ್ಷತ್ರದಿಂದ ಕೃತ್ತಿಕಾವರೆಗೆ ವಾರಭವಿಷ್ಯ ಹೇಗಿದೆ ಎಂದು ತಿಳಿಯೋಣ… ಮೇಷರಾಶಿ: . ಏಳನೇ ಮನೆಯಲ್ಲಿ ಬುಧ ಬಹಳ ಒಳ್ಳೆಯ ಫಲ ನೀಡುತ್ತಾನೆ. ಬಹುದಿನಗಳಿಂದ ಕಾಯುತ್ತಿದ್ದ ಒಂದು ಸಂಗತಿ ಈ ವಾರ ನಿಮ್ಮ ಕೈಸೇರುತ್ತದೆ. ಆರನೇ ಮನೆಯ ಕೇತು, ಸೂರ್ಯ ಧನಲಾಭ ಕೊಡುತ್ತಾರೆ. ಮೂರರಲ್ಲಿ ಮಂಗಳ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಭೀಮರಾವ್ ವಾಷ್ಠರ್ ನೇತೃತ್ವದಲ್ಲಿ ಅದ್ದೂರಿ ವಾಷ್ಠರ್ ಫೈವ್ ಸ್ಟಾರ್ ಆರ್ಕೆಸ್ಟ್ರಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯದ ಗಾಯಕ, ಸಾಹಿತಿ, ಜ್ಯೋತಿಷಿ ಎಚ್ ಭಿಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಅದ್ದೂರಿ ವಾಷ್ಠರ್ ಫೈವ್ ಸ್ಟಾರ್ ಆರ್ಕೆಸ್ಟ್ರಾ ಕಾರ್ಯಕ್ರಮವು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಜರುಗಿತು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸಪ್ತಸ್ವರ ಮೆಲೋಡಿಸ್ ಜಂಟಿ ಸಹಯೋಗದಲ್ಲಿ ಸುಳ್ಯ ದಸರಾ ಹಬ್ಬದ ಶ್ರೀ ಶಾರದಾಂಬಾ ದೇವಿಯ ಶೋಭಾಯಾತ್ರೆಯ ಪ್ರಯುಕ್ತ ಅದ್ದೂರಿ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಚ್. ಭೀಮರಾವ್ ವಾಷ್ಠರ್ ವಹಿಸಿದ್ದರು. ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ

ಭೀಮರಾವ್ ವಾಷ್ಠರ್ ನೇತೃತ್ವದಲ್ಲಿ ಅದ್ದೂರಿ ವಾಷ್ಠರ್ ಫೈವ್ ಸ್ಟಾರ್ ಆರ್ಕೆಸ್ಟ್ರಾ ಕಾರ್ಯಕ್ರಮ Read More »

ಮಗನ ಹುಟ್ಟುಹಬ್ಬಕ್ಕಾಗಿ ಕಡವೆ ಬೇಟೆಯಾಡಿ ಪ್ರಿಡ್ಜ್ ನಲ್ಲಿಟ್ಟರು| ಅಧಿಕಾರಿಗಳ ದಾಳಿಯಲ್ಲಿ ಮಾಂಸ, ಕೋವಿ ವಶ

ಸಮಗ್ರ ನ್ಯೂಸ್: ಮಗನ ಹುಟ್ಟು ಹಬ್ಬಕ್ಕಾಗಿ ಕಡವೆಯನ್ನು ಗುಂಡಿಕ್ಕಿ ಕೊಂದ ಮಾಂಸವನ್ನು ಮನೆಯ ಫ್ರಿಡ್ಜ್ನಲ್ಲಿ ದಾಸ್ತಾನು ಇರಿಸಲಾದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ಸ್ವಾಧೀನಪಡಿಸಿಕೊಂಡಿದೆ. ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್‌ ಮತ್ತವರ ಸಹವರ್ತಿಗಳು ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು. ಅದನ್ನು ಮಗನ ಹುಟ್ಟು ಹಬ್ಬದ ಔತಣ ಕೂಟಕ್ಕೆಂದು ಮಾಂಸ ಮಾಡಿ ಮನೆಯ ಪ್ರೀಝರ್‌ನಲ್ಲಿ ಇರಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯ

ಮಗನ ಹುಟ್ಟುಹಬ್ಬಕ್ಕಾಗಿ ಕಡವೆ ಬೇಟೆಯಾಡಿ ಪ್ರಿಡ್ಜ್ ನಲ್ಲಿಟ್ಟರು| ಅಧಿಕಾರಿಗಳ ದಾಳಿಯಲ್ಲಿ ಮಾಂಸ, ಕೋವಿ ವಶ Read More »

ಇಂದಿನಿಂದ ಕಬಡ್ಡಿ ಕಲರವ| ಪಿಕೆಎಲ್ 11ನೇ ಸೀಸನ್ ಆರಂಭ

ಸಮಗ್ರ ನ್ಯೂಸ್: ಐಪಿಎಲ್ ನಂತರ ಭಾರತದಲ್ಲಿ ಹೆಚ್ಚು ಅಭಿಮಾನಿಗಳ ಗಮನ ಸೆಳೆಯುವ ಕಬಡ್ಡಿ ಮತ್ತೆ ಮನರಂಜನೆ ನೀಡಲು ಸಿದ್ಧವಾಗಿದೆ. 10 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿರುವ ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್ ಇಂದಿನಿಂದ ಆರಂಭವಾಗಲಿದೆ. ಮೊದಲ ಲೀಗ್ ಪಂದ್ಯಗಳಿಗೆ ಹೈದರಾಬಾದ್​ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್-ಬೆಂಗಳೂರು ಬುಲ್ಸ್ ಮುಖಾಮುಖಿಯಾಗಲಿವೆ. ರಾತ್ರಿ 8 ಗಂಟೆಗೆ 3 ತಿಂಗಳ ಟೂರ್ನಮೆಂಟ್​ಗೆ ಚಾಲನೆ ದೊರೆಯಲಿದೆ. ಈ ಬಾರಿ ಮೂರು ನಗರಗಳಲ್ಲಿ ಟೂರ್ನಮೆಂಟ್ ನಡೆಯಲಿದೆ. ಹೈದರಾಬಾದ್, ನೊಯ್ಡಾ ಹಾಗೂ

ಇಂದಿನಿಂದ ಕಬಡ್ಡಿ ಕಲರವ| ಪಿಕೆಎಲ್ 11ನೇ ಸೀಸನ್ ಆರಂಭ Read More »

ಮಂಗಳೂರಿನಲ್ಲಿ ಕಾರು – ಬೈಕ್ ನಡುವೆ ಅಪಘಾತ| ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಿಇಒ ಭಾಸ್ಕರ್ ಸಾವು

ಸಮಗ್ರ ನ್ಯೂಸ್: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್(49) ಅರವರು ಮಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿಯಾಗಿರುವ ಭಾಸ್ಕರ್ ಅವರು ಅ.17 ರಂದು ಮಂಗಳೂರಿನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರೊಂದು ಭಾಸ್ಕರ್ ಅವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡ ಭಾಸ್ಕರ್ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಇಂದು(ಅ.18) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ಕಾರು – ಬೈಕ್ ನಡುವೆ ಅಪಘಾತ| ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಿಇಒ ಭಾಸ್ಕರ್ ಸಾವು Read More »

ಮುಡಾ ಕಚೇರಿ ಮೇಲೆ ಇಡಿ ದಾಳಿ.. ಸಿದ್ದರಾಮಯ್ಯಗೂ ಸಂಕಷ್ಟ

ಸಮಗ್ರ ನ್ಯೂಸ್: ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಮುಡಾದಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಆಧಾರದ ಮೇಲೆ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇಡಿಯ 20ಕ್ಕೂ ಹೆಚ್ಚು ಅಧಿಕಾರಿಗಳು ಕಚೇರಿಯಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಈ ಹಗರಣ ಸಂಬಂಧ ಸ್ನೇಹಮಯಿ ಕೃಷ್ಣ ಅವರಿಗೆ ಇಡಿ ಸಮ್ಸನ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು.

ಮುಡಾ ಕಚೇರಿ ಮೇಲೆ ಇಡಿ ದಾಳಿ.. ಸಿದ್ದರಾಮಯ್ಯಗೂ ಸಂಕಷ್ಟ Read More »

ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಒತ್ತು: ಸ್ಪೀಕರ್

ಸಮಗ್ರ ನ್ಯೂಸ್: ಈ ವರ್ಷವೂ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಿದ್ದು ಸಚಿವ ಸಂಪುಟದಲ್ಲಿ ಚರ್ಚಿಸಿ ಅಧಿವೇಶನದ ದಿನಾಂಕವನ್ನು ನಿಗದಿ ಮಾಡುತ್ತೇವೆ ಎಂದು ಸುವರ್ಣಸೌಧದಲ್ಲಿ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಈ ವರ್ಷ ಇನ್ನಷ್ಟು ಚೆನ್ನಾಗಿ ಅಧಿವೇಶನ ಮಾಡಲು ಸಿದ್ಧತೆ ನಡೆದಿದೆ. ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹೆಚ್ಚಿನ ಒತ್ತು ನೀಡುತ್ತೇವೆ ಎಂದು ತಿಳಿಸಿದ್ದಾರೆ. ಜನಪ್ರತಿನಿಧಿಗಳು ವಿಧಾನಸೌಧ ಮಾತ್ರ ಅಲ್ಲ ಸುವರ್ಣ ವಿಧಾನಸೌಧಕ್ಕೆ ಎಲ್ಲರೂ ಬರಬೇಕು. ಸುಲಭದಲ್ಲಿ ಪಾಸ್ ಸಿಗುವ ವ್ಯವಸ್ಥೆ ಮಾಡುತ್ತೇವೆ. ಶಾಲಾ, ಕಾಲೇಜು

ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಒತ್ತು: ಸ್ಪೀಕರ್ Read More »

ಬಿಗ್ ಬಾಸ್ ನಿಲ್ಲಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೀಕ್ಷಕ… ತುರ್ತು ನೋಟಿಸ್ ನೀಡಿದ ನ್ಯಾಯಾಲಯ

ಸಮಗ್ರ ನ್ಯೂಸ್: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ದೊಡ್ಡ ರಿಯಾಲಿಟಿ ಶೋ ಗಳಲ್ಲಿ ಒಂದಾದ ಬಿಗ್ ಬಾಸ್ 11 ನೇ ಸೀಸನ್ ಗೆ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಾಗುತ್ತಲೇ ಇದೆ. ಬಿಗ್ ಬಾಸ್ 11 ನೇ ಸೀಸನ್ ಪ್ರಾರಂಭವಾಗಿ ಇಂದಿಗೆ 19 ದಿನ ಕಳೆದಿದೆ. ‘ಬಿಗ್ ಬಾಸ್’ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಇನ್ನೂ ಇದೇ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ

ಬಿಗ್ ಬಾಸ್ ನಿಲ್ಲಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೀಕ್ಷಕ… ತುರ್ತು ನೋಟಿಸ್ ನೀಡಿದ ನ್ಯಾಯಾಲಯ Read More »

ಮುತ್ತಪ್ಪ‌ ರೈ ಎರಡನೇ ಹೆಂಡ್ತಿಗೆ ಸಿಕ್ತು ಕೋಟಿ ಕೋಟಿ ಆಸ್ತಿ| ಸಾಯೋಕು ಮುನ್ನ ಪಾಲು ಲೆಕ್ಕಾಚಾರ ಬರೆದಿಟ್ಟಿದ್ರೂ ಬಿಡಿಗಾಸು ಕೊಡದೆ ಸತಾಯಿಸಿದ್ದ ಮಕ್ಕಳು

ಸಮಗ್ರ ನ್ಯೂಸ್: ಕರ್ನಾಟಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ನಿಧನದ ನಂತರ ಅವರ ಒಡೆತನದ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಭಾಗ ಮಾಡಿ ತನ್ನಿಬ್ಬರು ಮಕ್ಕಳು, 2ನೇ ಹೆಂಡತಿ, ಸಹೋದರನ ಪುತ್ರ ಹಾಗೂ ಮನೆ ಕೆಲಸದವರು ಸೇರಿದಂತೆ ಯಾರಾರಿಗೆ ಎಷ್ಟು ಆಸ್ತಿ ನೀಡಬೇಕು ಎಂದು ಬರೆದಿಟ್ಟಿದ್ದರು. ಆದರೆ, ಮುತ್ತಪ್ಪ ರೈ ಮಕ್ಕಳು ಅವರ ತಂದೆಯ 2ನೇ ಹೆಂಡತಿಗೆ ತುಂಡು ಆಸ್ತಿ, ಬಿಡಿಗಾಸನ್ನೂ ನೀಡದೇ ಮನೆಯಿಂದ ಹೊರಗೆ ಹಾಕಿದ್ದರು. ಆದರೆ, ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ

ಮುತ್ತಪ್ಪ‌ ರೈ ಎರಡನೇ ಹೆಂಡ್ತಿಗೆ ಸಿಕ್ತು ಕೋಟಿ ಕೋಟಿ ಆಸ್ತಿ| ಸಾಯೋಕು ಮುನ್ನ ಪಾಲು ಲೆಕ್ಕಾಚಾರ ಬರೆದಿಟ್ಟಿದ್ರೂ ಬಿಡಿಗಾಸು ಕೊಡದೆ ಸತಾಯಿಸಿದ್ದ ಮಕ್ಕಳು Read More »