Ad Widget .

7 ತಿಂಗಳಲ್ಲೇ 1 ಲಕ್ಷ ಕೋಟಿ ಆದಾಯ : ಗುಜರಾತ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕರ್ನಾಟಕ

ಸಮಗ್ರ ನ್ಯೂಸ್: ರಾಜ್ಯದ ಆದಾಯ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ಆರ್ಥಿಕ ವರ್ಷದ 7 ತಿಂಗಳಲ್ಲಿಯೇ ಶೇ.53ರಷ್ಟು ಗುರಿ ಮುಟ್ಟಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ 1.95 ಲಕ್ಷ ಕೋಟಿ ರು. ಆದಾಯ ಸಂಗ್ರಹದ ಗುರಿ ಹೊಂದಿದ್ದು, ಅಕ್ಟೋಬ‌ರ್ ಅಂತ್ಯದ ವೇಳೆಗೆ 1.03 ಲಕ್ಷ ರು.ಆದಾಯ ಸಂಗ್ರಹಿಸುವ ಮೂಲಕ ನಿಗದಿತ ಗುರಿಯ ಶೇ. 53ರಷ್ಟು ಸಾಧಿಸಿದಂತಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆದಾಯ ಸಂಗ್ರಹದಲ್ಲಿ ಶೇ. 11.2ರಷ್ಟು ಪ್ರಗತಿ ಸಾಧಿಸಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.ಜತೆಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದ 52 ಸಾವಿರಕೋಟಿ ರೂ.ಗಳ ಪೈಕಿ ಈವರೆಗೆ 24,235 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ.ಜತೆಗೆ 2024-25ರ ಮೊದಲ ತ್ರೈಮಾಸಿಕ 220 2. (2.2) ಗೂ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆ ಯನ್ನು ಆಕರ್ಷಿಸಲಾಗಿದೆ. ಆ ಮೂಲಕ ಗುಜರಾತ್ ಹಿಂದಿಕ್ಕಿ ರಾಜ್ಯವು 2ನೇ ಸ್ಥಾನಕ್ಕೇರಿದೆ.

Ad Widget . Ad Widget . Ad Widget .

ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವೆಲಪ್‌ಮೆಂಟ್ ಬ್ಯಾಂಕ್‌ಗಳಿಂದ 16,750 ಕೋಟಿ ರೂ.ನೆರವು ಪಡೆಯಲಾಗುತ್ತಿದೆ. ಬೆಂಗಳೂರು ವಿಪತ್ತು ನಿರ್ವಹಣೆಗೆ 3,500 ಆಧುನೀಕರಣಕ್ಕೆ 1,200 ಕೋಟಿ ರೂ. ಕರಾವಳಿ ಕರ್ನಾಟಕದಲ್ಲಿ ಸಾಗರ ಸಂಬಂಧಿ ಆರ್ಥಿಕ ಅಭಿವೃದ್ಧಿಗೆ 600 ಕೋಟಿ ರೂ.,ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 3.650 ಕೋಟಿ ರೂ.,ಹವಾಮಾನ ಪೂರಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 3,600 ಕೋಟಿ ರೂ. ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ 21,400 ಕೋಟಿ ರೂ. ವ್ಯಯಿಸಲು ಯೋಜಿಸಲಾಗಿದೆ.

ಬೆಂಗಳೂರಿನಲ್ಲಿ 1.31 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.100 ಕಿ.ಮೀ. ಮೇಲ್ಪಸುವೆ ಕಾರಿಡಾರ್ ನಿರ್ಮಾಣಕ್ಕೆ 12 ಸಾವಿರ ಕೋಟಿ ರೂ., ಮೆಟ್ರೋ 3ನೇ ಹಂತವ ವಿಸ್ತರಿತ ಮಾರ್ಗ (80 ಕಿ.ಮೀ.) ನಿರ್ಮಾಣಕ್ಕೆ 40 ಸಾವಿರ ಕೋಟಿ ರೂ., ಡಬಲ್ ಡೆಕ್ಕರ್ ಮೆಟ್ರೋ ನಿರ್ಮಾಣಕ್ಕೆ9 ಸಾವಿರ ಕೋಟಿ ರೂ., ನಿರ್ಮಾಣಕ್ಕೆ 40 ಸಾವಿರ ಕೋಟಿ ರೂ., ಪೆರಿಫೆರಲ್ ರಿಂಗ್ ರಸ್ತೆಗೆ ಸಾವಿರ ಕೋಟಿ ರೂ.,ಸೈಡಕ್ ಯೋಜನೆಗೆ 500 ಕೋಟಿ ರೂ., ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ಗೆ 27 ಸಾವಿರ ಕೋಟಿ ರೂ.,ವೆಚ್ಚ ಮಾಡಲಾಗುತ್ತಿದೆ.

Leave a Comment

Your email address will not be published. Required fields are marked *