Ad Widget .

ದೀಪಾವಳಿ ಹಬ್ಬದ ಬಂಪ‌ರ್, ಹೋಂಡಾ ಆಯಕ್ಟಿವಾಗೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್!

ಸಮಗ್ರ ನ್ಯೂಸ್: ದೀಪಾವಳಿ ಹಬ್ಬದ ಕೊಡುಗೆ ಘೋಷಣೆಯಾಗಿದೆ. ಇದೀಗ ಹೋಂಡಾ ಆಯಕ್ಟಿವಾ 6ಜಿ ಹಾಗೂ 125 ಸ್ಕೂಟರ್ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. ಈ ಮೂಲಕ ಕೈಗೆಟುಕುವ ದರದಲ್ಲಿ ಸ್ಕೂಟರ್ ಖರೀದಿಸಲು ಸಾಧ್ಯವಾಗಲಿದೆ.

Ad Widget . Ad Widget .

ದೀಪಾವಳಿ ಹಬ್ಬದ ಪ್ರಯುಕ್ತ ಹಲವು ಉತ್ಪನ್ನ, ಸ್ಕೂಟರ್, ಕಾರು ಸೇರಿದಂತೆ ವಾಹನಗಳ ಮೇಲೆ ಹಲವು ಕಂಪನಿಗಳು ಆಫರ್ ಘೋಷಣೆ ಮಾಡಿದೆ. ಬಜಾಜ್ ಮಾಲ್ ಮೂಲಕ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಈ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಾಗಲಿದೆ. ಈ

Ad Widget . Ad Widget .

ಸ್ಕೂಟ‌ರ್ ಒಟ್ಟು ಮೊತ್ತದ ಮೇಲೆ 5,000 ರೂಪಾಯಿ ಕಡಿತಗೊಳ್ಳಲಿದೆ. ಬಜಾಜ್ ಮಾಲ್ ವೆಬ್‌ಸೈಟ್‌ ಮೂಲಕ ಬುಕಿಂಗ್ ಮಾಡಿದರೆ ಈ ಕ್ಯಾಶ್‌ಬ್ಯಾಕ್ ಆಫ‌ರ್ ಪಡೆಯಬಹುದು. ಇದರಿಂದ ಸ್ಕೂಟರ್ ಖರೀದಿ ನನಸು ನನಸಾಗಿಸಬಹುದು. ಪ್ರಮುಖವಾಗಿ 2 ಸ್ಕೂಟ‌ರ್ ಮೇಲೆ ಕ್ಯಾಶ್‌ಬ್ಯಾಕ್‌ ಆಫರ್ ನೀಡಲಾಗಿದೆ.

ಹೋಂಡಾ ಆಯಕ್ಟಿವಾ 125 ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ 79,935 ರೂಪಾಯಿ, ಇನ್ನು ಆಯಕ್ಟಿವಾ 6ಜಿ ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ 89,422 ರೂಪಾಯಿ. 6ಜಿ ಸ್ಕೂಟರ್ 109.51 cc ಎಂಜಿನ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 47 kmpl ಮೈಲೇಜ್ ನೀಡಲಿದೆ. 5.3 ಇಂಧನ ಸಾಮರ್ಥ್ಯ ಹೊಂದಿದೆ. 7.73 bhp ಪವರ್ ಹೊಂದಿರುವ ಆಯಕ್ಟಿವಾ 6ಜಿ ಸ್ಕೂಟರ್ ಗರಿಷ್ಠ ವೇಗ 85 ಕಿ.ಮಿ ಪ್ರತಿಗಂಟೆಗೆ.

ಹೋಂಡಾ 125 ಸ್ಕೂಟರ್ 124 cc ಎಂಜಿನ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 47 ಕಿ.ಮಿ ಮೈಲೇಜ್ ನೀಡಲಿದೆ. ವಿಶೇಷ ಅಂದರೆ 8.19 bhp ಪವರ್ ಹೊಂದಿದೆ. BS6 ಎಮಿಶನ್ ಎಂಜಿನ್ ಉತ್ತಮ ರೋಡ್ ಗ್ರಿಪ್ ಸೇರಿದಂತೆ ಆರಾಮದಾಯಕ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ಸ್ಕೂಟರ್ ಪೈಕಿ ಹೋಂಡಾ ಆಯಕ್ಟಿವಾ ಮುಂಚೂಣಿಯಲ್ಲಿದೆ.

Leave a Comment

Your email address will not be published. Required fields are marked *