Ad Widget .

ಜಾಮೀನು ನೀಡಿದ್ರೂ ಖಡಕ್ ಷರತ್ತು ವಿಧಿಸಿದ ಹೈಕೋರ್ಟ್|‌ ಇಲ್ಲಿದೆ ದರ್ಶನ್‌ಗೆ ಕೋರ್ಟ್ ನೀಡಿದ ಕಂಡೀಷನ್ಸ್

ಸಮಗ್ರ ನ್ಯೂಸ್: ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ದರ್ಶನ್ ಅವರು ಖುಷಿ ಹೊರ ಹಾಕಿದ್ದಾರೆ. ದರ್ಶನ್‌ಗೆ ಈಗ ಜಾಮೀನು ನೀಡಿರುವುದು ಸಂಪೂರ್ಣವಾಗಿ ವೈದ್ಯಕೀಯ ವರದಿ ಆಧರಿಸಿಯೇ ಆಗಿದೆ. ಹೀಗಾಗಿ, ಅವರು ಮುಂದಿನ ಆರು ವಾರಗಳನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದರ್ಶನ್ ಅವರಿಗೆ ಜಾಮೀನು ನೀಡಿದ ಬಳಿಕ ಕೆಲವು ಷರತ್ತುಗಳನ್ನು ಹಾಕಿದೆ. ದರ್ಶನ್ ಇಷ್ಟಪಟ್ಟ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೆ, ಒಂದು ವಾರಗಳಲ್ಲಿ ಚಿಕಿತ್ಸೆಯ ವಿವರವನ್ನು ದರ್ಶನ್ ಕೋರ್ಟ್‌ಗೆ ಸಲ್ಲಿಕೆ ಮಾಡಬೇಕಿದೆ. ಈ ರೀತಿಯ ಪ್ರಕರಣದಲ್ಲಿ ಹೊರ ಬಂದ ಬಳಿಕ ಆರೋಪಿಗಳು ವಿದೇಶಕ್ಕೆ ಹಾರುವ ಸಾಧ್ಯತೆ ಇರುತ್ತದೆ. ಹಾಗಾದಲ್ಲಿ ಅವರನ್ನು ಮರಳಿ ತರೋದು ಕಷ್ಟ. ಹೀಗಾಗಿ ಪಾಸ್‌ಪೋರ್ಟ್‌ನ ಕೋರ್ಟ್‌ಗೆ ಸರೆಂಡ‌ರ್ ಮಾಡಬೇಕು ಎಂದು ಕೋರ್ಟ್‌ ದರ್ಶನ್‌ಗೆ ಸೂಚನೆ ನೀಡಿದೆ.

Ad Widget . Ad Widget . Ad Widget .

ಫೈಟ್ ರಿಸ್ಕ್ ಇದೆಯಾ? ಎಂದು ಜಡ್ಜ್ ಪ್ರಶ್ನೆ ಮಾಡಿದ್ದರು. ಪಾಸ್‌ಪೋರ್ಟ್‌ ವಶಕ್ಕೆ ಪಡೆಯುವ ಷರತ್ತು ವಿಧಿಸಲು ಸರ್ಕಾರಿ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಸರೆಂಡರ್ ಮಾಡಲು ಆದೇಶ ನೀಡಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ದರ್ಶನ್ ಪರ ವಕೀಲ ಎಂದು ಸುನೀಲ್, ‘ಮಧ್ಯಂತರ ಜಾಮೀನು ಅಷ್ಟೇ. ರೆಗ್ಯುಲರ್ ಬೇಲ್ ಮೇಲೆ ಅವರನ್ನು ಹೊರಕ್ಕೆ ತರಬೇಕಿದೆ. ಆ ಜವಾಬ್ದಾರಿ ನಮ್ಮ ಮೇಲೆ ಇದೆ’ ಎಂದಿದ್ದಾರೆ.

Leave a Comment

Your email address will not be published. Required fields are marked *