ಪುತ್ತೂರು: ಕೋಳಿ ಅಂಕಕ್ಕೆ ಖಾಕಿ ರೈಡ್| ಅಂಕದ ಕೋಳಿಗಳು ಹಾಗೂ ಐವರು ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಗುಡ್ಡಗಾಡು ಪ್ರದೇಶದಲ್ಲಿ ರಾಜರೋಷವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು ಅಂಕದ ಕೋಳಿಗಳೊಂದಿಗೆ ಜನರನ್ನು ವಶಕ್ಕೆ ಪಡೆದ ಘಟನೆ ಪುತ್ತೂರಿನಿಂದ ವರದಿಯಾಗಿದೆ.

Ad Widget ... ..

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಬಳಿಯ ಗೇರುಬೀಜ ನೆಡುತೋಪು ಗುಡ್ಡದಲ್ಲಿ ಈ ಕೋಳಿ ಅಂಕ ರಾಜರೋಷವಾಗಿ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಪೊಲೀಸರು ದಾಳಿ ಮಾಡಿ ಐವರನ್ನು ವಶಕ್ಕೆ ಪಡೆದಿರುವ ಘಟನೆ ಒಳಮೊಗ್ರು ಗ್ರಾಮದಿಂದ ವರದಿಯಾಗಿದೆ.

Ad Widget

ಒಳಮೊಗ್ರು ಗ್ರಾಮದ ಕುಟೀನೋಪಿನಡ್ಕ ಎಂಬಲ್ಲಿನ ಗೇರುಬೀಜ ನೆಡುತೋಪು ಗುಡ್ಡದಲ್ಲಿ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧಾರಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿಯವರು ದಾಳಿ ನಡೆಸಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ 5 ಅಂಕದ ಹುಂಜ ಮತ್ತು ರೂ.7710 ಹಾಗೂ ಐವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *