Ad Widget .

ಕಾರ್ಕಳ: ಅರ್ಚಕರಿಗೆ ದೇವಳಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆ ಕಾರ್ಕಳ ಶ್ರೀ ಮಾರಿಯಮ್ಮ ದೇವಾಲಯಕ್ಕೆ ಅರ್ಚಕರಿಗೆ ಪ್ರವೇಶ‌ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ.

Ad Widget . Ad Widget .

ದೇವಳದ ಪ್ರಧಾನ ಅರ್ಚಕರಾದ ರಘುರಾಮ್ ಆಚಾರ್ ಅವರ ಮಗ ಲಕ್ಷ್ಮೀಶ ಆಚಾರ್ ರವರು ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇವರು ದೇವಾಲಯಕ್ಕೆ ಬರುವ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡುತ್ತಿದ್ದಾರೆ ಎಂದು ಪಾಂಡುರಂಗ ರಾವ್ ಎಂಬುವವರು ದೇವಳದ ಆಡಳಿತ ಮೊಕ್ತೇಸರರಿಗೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ಇನ್ನೂ ಮುಂದೆ ಲಕ್ಷ್ಮೀಶ ಆಚಾರ್ ಯಾವುದೇ ಪೂಜಾ ಪುರಸ್ಕಾರಗಳನ್ನು ಮಾಡಲು ಹಾಗೂ ದೇವಾಲಯಕ್ಕೆ ಅನುಮತಿ ನೀಡಬಾರದು ಎಂದು ದೂರು ದಾಖಲಿಸಿದ್ದರು.

Ad Widget . Ad Widget .

ಈ ದೂರಿನ ಮೇರೆಗೆ ಉಡುಪಿ ಜಿಲ್ಲೆ ಜಿಲ್ಲಾಧಿಕಾರಿಗಳು ಅರ್ಚಕರಿಗೆ ನಿರ್ಭಂಧ ಆದೇಶವನ್ನು ಹೊರಡಿಸಿದರು.
ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಅರ್ಚಕ ಲಕ್ಷ್ಮೀಶ ಆಚಾರ್ ರವರು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ ವಿವಾದವನ್ನು ಆಲಿಸಿದ ಮಾನ್ಯ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಆದೇಶದಲ್ಲಿ ಯಾವುದೇ ಹುರುಳಿಲ್ಲ ಎಂದು ಆದೇಶವನ್ನು ವಜಾ ಮಾಡಿ ದೂರುದಾರರ ಅರ್ಜಿಯನ್ನು ಪುರಸ್ಕರಿಸಿ ಆದೇಶ ಹೊರಡಿಸಿದೆ.

ಅರ್ಜಿದಾರರ ಪರವಾಗಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯವಾದಿಗಳಾದ ಪಿ. ಕರುಣಾಕರ್ ಪಾಂಬೆಲ್, ಪ್ರದೀಪ್ ಬೊಳ್ಳೂರು , ಶ್ರೀಕಾಂತ್ ಆಚಳ್ಳಿ ಗುತ್ತಿಗಾರು, ಹಾಗೂ ಆದರ್ಶ ಗೌಡ ಕಟ್ಟ ಇವರುಗಳು ವಾದಿಸಿರುತ್ತಾರೆ.

Leave a Comment

Your email address will not be published. Required fields are marked *