ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರು ಸರಣಿ ಅಪಘಾತ

ಸಮಗ್ರ ನ್ಯೂಸ್: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಅವರ ಬೆಂಗಾವಲು ಕಾರುಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ.

Ad Widget ... ..

ಸಿಎಂ ಪಿಣರಾಯಿ ಅವರು ಎಂದಿನಂತೆ ತಮ್ಮ ಬೆಂಗಾವಲು ವಾಹನಗಳೊಂದಿಗೆ ಪ್ರಯಾಣಿಸುತ್ತಿದ್ದರು.ಈ ವೇಳೆ ಮುಖ್ಯರಸ್ತೆಯಲ್ಲೇ ಮುಂದಿದ್ದ ಕಾರು ತಕ್ಷಣ ಬ್ರೇಕ್ ಹಾಕಿದೆ. ಸ್ವಲ್ಪ ವೇಗವಾಗಿಯೇ ಬೆಂಗಾವಲು ವಾಹನಗಳು ಚಲಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ, ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ ಎನ್ನಲಾಗಿದೆ.

Ad Widget

ಈ ವೇಳೆ ಹಿಂದೆಯೇ ವೇಗವಾಗಿ ಬರುತ್ತಿದ್ದ ಸಿಎಂ ವಾಹನ ಸೇರಿದಂತೆ ಕೊನೆಯ ಆಂಬುಲೆನ್ಸ್ ಕೂಡ ಏಳು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ.ಅದೃಷ್ಟವಶಾತ್ ಸಿಎಂ ಪಿಣರಾಯಿ ವಿಜಯನ್‌ ಅವರು ಕ್ಷೇಮವಾಗಿದ್ದಾರೆ ಎನ್ನಲಾಗಿದೆ. ಇನ್ನು ಸರಣಿ ಅಪಘಾತದಿಂದ ವಾಹನಗಳೆಲ್ಲ ಡ್ಯಾಮೇಜ್ ಕೂಡ ಆಗಿವೆ.

Leave a Comment

Your email address will not be published. Required fields are marked *