ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶಬರಿಮಲೆ ದೇವಸ್ಥಾನದ ಯಾತ್ರಾರ್ಥಿಗಳಿಗೆ ವಿಮಾನ ಕ್ಯಾಬಿನ್‌ನಲ್ಲಿ ‘ಇರುಮುಡಿ’ ಕೊಂಡೊಯ್ಯಲು ವಿನಾಯಿತಿ ನೀಡಲಾಗಿದೆ.
ಬಸ್ಸುಗಳು, ಕಾರುಗಳು ಮತ್ತು ರೈಲುಗಳು ಹೆಚ್ಚಾಗಿ ಶಬರಿಮಲೆಯನ್ನು ತಲುಪುತ್ತಾರೆ. ಅನೇಕ ಜನರು ಶಬರಿಮಲೆಗೆ ವಿಮಾನದಲ್ಲಿ ಹೋಗಬೇಕೆಂದು ಬಯಸುತ್ತಾರೆ, ಆದರೆ ಅವರು ಇರುಮುಡಿ ತಮ್ಮೊಂದಿಗೆ ವಿಮಾನದಲ್ಲಿ ಕೊಂಡೊಯ್ಯಲು ಬಿಡುವುದಿಲ್ಲ. ಆದರೆ, ಶಬರಿಮಲೆಗೆ ವಿಮಾನದಲ್ಲಿ ತೆರಳುವವರಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಗುಡ್ ನ್ಯೂಸ್ ನೀಡಿದ್ದಾರೆ.
ಈ ಹಿಂದೆ ಕೆಲವು ಭದ್ರತಾ ಕಾರಣಗಳಿಂದಾಗಿ, ಇರುಮುಡಿಯನ್ನು ವಿಮಾನಗಳಲ್ಲಿ ಅನುಮತಿ ನೀಡುತ್ತಿರಲಿಲ್ಲ. ಆದರೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅಯ್ಯಪ್ಪ ಸ್ವಾಮಿ ವಿಮಾನಗಳಲ್ಲಿ ಪ್ರಯಾಣಿಸುವಾಗ ಚೆಕ್-ಇನ್ ಬ್ಯಾಗೇಜ್ ಬದಲಿಗೆ ಇರುಮುಡಿ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.